ಮದುವೆ ಮನೆಯಲ್ಲಿ 8 ಲಕ್ಷ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿದ್ದು ಹೇಗೆ ಗೊತ್ತಾ?

anekal robbery
Published on

ಬೆಂಗಳೂರು: ಮದುವೆ(Marriage) ಸಮಾರಂಭ ನಡೆಯುತ್ತಿದ್ದ ಕಲ್ಯಾಣ ಮಂಟಪದಲ್ಲಿ ಬರೋಬ್ಬರಿ 8 ಲಕ್ಷ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಸೆರೆಹಿಡಿಯುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಆನೇಕಲ್(Anekal) ತಾಲೂಕಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ಸಂಭವಿಸಿದ್ದು, ಎರಡು ಕುಟುಂಬಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. 8 ಲಕ್ಷ ರೂ. ಮೌಲ್ಯದ ಒಡವೆ ಕದ್ದು ಸ್ಥಳದಿಂದ ಪರಾರಿಯಾಗಿದ್ದ ಕಳ್ಳನನ್ನು ಸೆರೆಹಿಡಿದ ಪೊಲೀಸರು, ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೂರು ನೀಡಿದ್ದ ಕುಟುಂಬಸ್ಥರಿಗೆ ಪೊಲೀಸರು ಕರೆ ಮಾಡಿ, ಕಳ್ಳತನವಾಗಿದ್ದ 8 ಲಕ್ಷ ರೂ. ಮೌಲ್ಯದ ಒಡವೆಯನ್ನು ಹಿಂದಿರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net