blank

ಪ್ರೀತಿ ತಿರಸ್ಕರಿಸಿದ್ದಕ್ಕೆ ಯುವತಿಯ ಮೇಲೆ ಆಸಿಡ್ ದಾಳಿ! ಪ್ರೇಮಿಗಳ ದಿನದಂದು ನಡೆದೆ ಹೋಯ್ತು Acid Attack

blank

Acid Attack :  ಪ್ರೇಮಿಗಳ ದಿನದಂದು ಆಂಧ್ರಪ್ರದೇಶದಲ್ಲಿ (ಎಪಿ) ಒಂದು ಭಯಾನಕ ಘಟನೆ ನಡೆದಿದೆ. ತನ್ನ ಪ್ರೀತಿಯನ್ನು ಯುವತಿ ತಿರಸ್ಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದಿದ್ದಾನೆ.

ಅನ್ನಮಯ್ಯ ಜಿಲ್ಲೆಯ ಗುರ್ರಮಕೊಂಡ ಮಂಡಲದ ಪ್ಯಾರಂಪಲ್ಲಿ ಗ್ರಾಮದ ನಿವಾಸಿ ಗೌತಮಿ, ಮದನಪಲ್ಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಪ್ರೀತಿಯನ್ನು ಯುವತಿ ತಿರಸ್ಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದಿದ್ದಾನೆ.

ಗಣೇಶ್ ಎಂಬ ಯುವಕ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಸಿಡ್ ಎರಚಿದ್ದು, ಸಂಚಲನ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಗೌತಮಿಯನ್ನು ಆಕೆಯ ಕುಟುಂಬ ಸದಸ್ಯರು ತಕ್ಷಣ ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪ್ರಸ್ತುತ ಚಿಕಿತ್ಸೆ ನೀಡುತ್ತಿದ್ದಾರೆ.

ಗೌತಮಿ ಈಗಾಗಲೇ ಶ್ರೀಕಾಂತ್ ಎಂಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಏಪ್ರಿಲ್ 29 ರಂದು ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ.

ತನ್ನ ಪ್ರೀತಿಯನ್ನು ತಿರಸ್ಕರಿಸಿದ ಕೋಪದಿಂದ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ. ಈ ದುಷ್ಕೃತ್ಯಕ್ಕೂ ಮುನ್ನ ಗೌತಮಿಯ ಪೋಷಕರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಗಣೇಶ್, ನೇರವಾಗಿ ಮನೆಗೆ ಹೋಗಿ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯ ಮುಖದ ಮೇಲೆ ಆಸಿಡ್ ಸುರಿದ. ಮಾಹಿತಿ ಪಡೆದ ಪೊಲೀಸರು ತಕ್ಷಣ ಆಸ್ಪತ್ರೆಗೆ ತೆರಳಿ ವಿವರಗಳನ್ನು ಸಂಗ್ರಹಿಸಿದರು. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

TAGGED:
Share This Article

ನೆಲದ ಮೇಲೆ ಬಿದ್ದ ಆಹಾರ ಸೇವಿಸುವುದು ಎಷ್ಟು ಸುರಕ್ಷಿತ?; ನೀವಿದನ್ನು ತಿಳಿಯಲೇಬೇಕು | Health Tips

ಅನೇಕ ಜನರು ನೆಲದ ಮೇಲೆ ಬಿದ್ದ ಯಾವುದೇ ವಸ್ತುವನ್ನು ಎತ್ತಿಕೊಂಡು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಾವೆಲ್ಲರೂ…

ಅರಿಶಿನದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಟಿಪ್ಸ್​ | Health Tips

ಪ್ರಸ್ತುತ ಜೀವನಶೈಲಿಯಲ್ಲಿ ಎಲ್ಲರ ಆಸೆಯು ಇದೊಂದೆ ಆಗಿದೆ. ಹೊಟ್ಟೆಯು ಚಪ್ಪಟೆಯಾಗಿ ಮತ್ತು ಫಿಟ್ ಆಗಿ ಕಾಣಬೇಕೆಂದು…

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…