ಮುಂಬೈ: ಟಾಲಿವುಡ್ ನಟಿ ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಈಕೆ ಈ ಹಿಂದೆ ಕೇವಲ 500 ರೂಪಾಯಿಗಾಗಿ ಈಕೆ ಮಾಡಿರುವ ಕೆಲಸವೊಂದು ಅಭಿಮಾನಿಗಳ ಎದುರು ರಿವೀಲ್ ಆಗಿದೆ.
ಆ್ಯಂಕರ್ ಅನಸೂಯಾ ತಮ್ಮ ಮೋಡಿ ಮತ್ತು ಹಾಸ್ಯದ ಮಾತುಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 2013 ರಲ್ಲಿ ಆರಂಭವಾದ ಕಾಮಿಡಿ ಶೋ ಜಬರ್ದಸ್ತ್ ಭಾರೀ ಹಿಟ್ ಆಗಿತ್ತು. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಅನಸೂಯಾ ಅವರ ಪಾತ್ರ ಬಹಳ ಮುಖ್ಯ. ಪುಷ್ಪ, ರಂಗಸ್ಥಳದಂತಹ ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಆಕೆಯ ವೃತ್ತಿಜೀವನ ಯಶಸ್ವಿಯಾಗಿದೆ.
ಓದುವ ದಿನಗಳಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. 2003ರಲ್ಲಿ ಎನ್‌ಟಿಆರ್ ಅಭಿನಯದ ‘ನಾಗ’ ಚಿತ್ರದಲ್ಲಿ ಅನಸೂಯಾಗೆ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಟಿ ಅನಸೂಯಾಗೆ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ತೆಲುಗಿನ ನಾಗ ಸಿನಿಮಾದಲ್ಲಿ ಅನಸೂಯಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ.
ಈ ಇಡೀ ಸಿನಿಮಾದಲ್ಲಿ ಅವರಿಗೆ ಒಂದೇ ಒಂದು ಡೈಲಾಗ್ ಇರಲಿಲ್ಲ. ಒಂದು ದೃಶ್ಯದಲ್ಲಿ ಸುನಿಲ್ ಮಾತನಾಡುವಾಗ ಹಿಂದೆ ಅನಸೂಯಾ ಕಾಣಿಸುತ್ತಾರೆ. ಈ ಪಾತ್ರ ಮಾಡುವಾಗ ಅನಸೂಯಾ ಅವರಿಗೆ ಕೇವಲ 19 ವರ್ಷ. ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅನಸೂಯಾ ಪಡೆದ ಸಂಭಾವನೆ ಕೇವಲ 500 ರೂಪಾಯಿ. ಅದು ಆ ಕಾಲದಲ್ಲಿ ಜೂನಿಯರ್ ಆರ್ಟಿಸ್ಟ್ ಗೆ ಕೊಡುತ್ತಿದ್ದ ಸಂಭಾವನೆ. ಆದರೆ ಇಂದು ಅನಸೂಯಾ ದಿನಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅನಸೂಯಾ ಇಂದು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಇದೆ. ಐಷಾರಾಮಿ ಕಾರುಗಳಿವೆ. ಅನಸೂಯಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ, ನೆಟಿಜನ್‌ಗಳು ಸಹ ಅವರ ಫೋಟೋಗಳನ್ನು ಸಾಕಷ್ಟು ವೈರಲ್ ಮಾಡುತ್ತಿರುತ್ತಾರೆ.