

ಹೆಬ್ರಿ: ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಕಾಮತ್ 592 ಅಂಕ ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್-94, ಸಂಸ್ಕೃತ-100, ಭೌತಶಾಸ್ತ್ರ-99, ರಸಾಯನಶಾಸ್ತ್ರ-100, ಗಣಿತಶಾಸ್ತ್ರ-99, ಗಣಕ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾಳೆ. ನಾಲ್ಕೂರು ಗ್ರಾಮದ ಮುದ್ದೂರಿನ ದಿನೇಶ್ ಕಾಮತ್, ದೀಪಾ ಕಾಮತ್ ದಂಪತಿ ಪುತ್ರಿ.
ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಸಂಸ್ಥೆ ಬಗ್ಗೆ ಹೆಮ್ಮೆ ಇದೆ. ಯಾವುದೇ ವಿಷಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಅದು ನನಗೆ ಉತ್ತಮ ಅಂಕ ಪಡೆಯಲು ಸಹಾಯವಾಯಿತು. ರಜಾ ದಿನಗಳಲ್ಲಿ 8 ರಿಂದ 10 ಗಂಟೆ, ಕಾಲೇಜು ಇದ್ದಾಗ 3 ರಿಂದ 4 ಗಂಟೆ ಪ್ರತಿನಿತ್ಯ ಓದುತ್ತಿದ್ದೆ. ಸಂಪೂರ್ಣ ಪ್ರೋತ್ಸಾಹ ನೀಡಿದ ತಂದೆ-ತಾಯಿ ಹಾಗೂ ಉಪನ್ಯಾಸಕ ವೃಂದದವರಿಗೆ ಸದಾ ಚಿರಋಣಿ. ಸಾಫ್ಟ್ವೇರ್ ಇಂಜಿನಿಯರ್ ಆಗುವ ಕನಸಿದೆ. -ಅನನ್ಯಾ ಕಾಮತ್, ವಿದ್ಯಾರ್ಥಿನಿ https://www.vijayavani.net/creative-universal-record https://www.vijayavani.net/amrita-bharti-pre-graduation-college-achievement