ಕಂಗ್ರಾಟ್ಸ್ ನಿಹಾರಿಕಾ-ಅಕ್ಷಯ್; ರಮೇಶ್ ಅರವಿಂದ್ ಪುತ್ರಿಯ ಮದುವೆ ಆರತಕ್ಷತೆ

ramesh
ನವದಂಪತಿ ನಿಹಾರಿಕಾ-ಅಕ್ಷಯ್ ಅವರಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಶುಭ ಕೋರಿದರು. ರಮೇಶ್ ಅರವಿಂದ್-ಅರ್ಚನಾ ದಂಪತಿ ಇದ್ದರು.
Published on

ಬೆಂಗಳೂರು: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಶನಿವಾರ ರಾತ್ರಿ ನಗರದ ಕಾನ್​ರಾಡ್ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಂದರ್ಭದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ. ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು.

ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆಂದು ಶನಿವಾರ ಆರತಕ್ಷತೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್​ನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ, ಸುಮಲತಾ ಅಂಬರೀಷ್, ಡಾ. ಜಯಮಾಲಾ, ರಾಕ್​ಲೈನ್ ವೆಂಕಟೇಶ್, ಮುನಿರತ್ನ, ದೊಡ್ಡಣ್ಣ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿ ನಿಹಾರಿಕಾ ಮತ್ತು ಅಕ್ಷಯ್ಗೆ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net