

ಮುಂಬೈ: ಮಗನ ಕನಸಿಗೆ ಬೆನ್ನಲುಬಾಗಿ ನಿಂತ ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ತಂದೆ ನೌಷಾದ್ ಖಾನ್ ಅವರನ್ನು ಹಾಡಿ ಹೊಗಳಿರುವ ಉದ್ಯಮಿ ಆನಂದ್ ಮಹೀಂದ್ರ, THAR ಕಾರನ್ನು ಉಡುಗೊರೆಯಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಠಿಣ ಪರಿಶ್ರಮ, ತಾಳ್ಮೆ, ಧೈರ್ಯ. ಮಗುವಿನಲ್ಲಿ ಸ್ಪೂರ್ತಿ ತುಂಬಲು ತಂದೆಗಿಂತ ಉತ್ತಮವಾದ ಗುಣ ಯಾವುದು? ಸ್ಪೂರ್ತಿಯಾದಕ ಪೋಷಕರಾಗಿರುವ ನೌಶಾದ್ ಖಾನ್ ಸ್ವೀಕರಿಸಿದರೆ ಅವರಿಗೆ ಮಹೀಂದ್ರ ಥಾರ್ ಉಡುಗೊರೆಯಾಗಿ ನೀಡುವುದು ನನ್ನ ಗೌರವ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸಿದರೂ ಟೀಮ್ ಇಂಡಿಯಾ ತಂಡದಲ್ಲಿ ಅವಕಾಶ ಸಿಗದೆ ಹತಾಶರಾಗಿದ್ದ ಸರ್ಫರಾಜ್ ಅವರಿಗೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಟೀಮ್ ಇಂಡಿಯಾ ಪರ ಆಡುವ ಅವಕಾಶ ಪಡೆದಿದ್ದಾರೆ. ಈ ಸಂತಸ ಹಂಚಿಕೊಂಡಿರುವ ಎಡಗೈ ಆಟಗಾರ ನನ್ನ ಬಾಲ್ಯದಿಂದಲೂ ತಂದೆ(ನೌಷಾದ್ ಖಾನ್ )ಯ ಮುಂದೆ ಟೀಮ್ ಇಂಡಿಯಾ ಪರ ಆಡುವ ಕನಸು ಕಂಡಿದ್ದೆ ಅದು ಇಂದು ನನಸಾಗಿದೆ ಎಂದು ಹೇಳಿದ್ದಾರೆ.
ನಾಯಕ ರೋಹಿತ್ ಶರ್ಮಾ ಔಟಾದ ನಂತರ ಕ್ರೀಸ್ ಗೆ ಬಂದ ಸರ್ಫರಾಝ್ ಖಾನ್, ಇಂಗ್ಲೆಂಡ್ ನ ವೇಗದ ಬೌಲಿಂಗ್ ಎದುರು ಎಚ್ಚರಿಕೆಯ ಆಟವಾಡಿದರೂ, ಸ್ಪಿನ್ನರ್ ಗಳ ವಿರುದ್ಧ ಸಿಡಿಲಬ್ಬರದ ಆಟ ಪ್ರದರ್ಶಿಸಿ 66 ಎಸೆತಗಳಲ್ಲೇ 9 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 62 ರನ್ ಬಾರಿಸಿದ್ದಾಗ ರವೀಂದ್ರ ಜಡೇಜಾರ ಜೊತೆಗಿನ ಸಂವಾದ ಕೊರತೆಯಿಂದಾಗಿ ರನ್ ಔಟ್ ಆಗುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡರು.
ತಮ್ಮ ಪದಾರ್ಪಣೆ ಪಂದ್ಯದಲ್ಲೇ ತನ್ನ ಪೋಷಕರ ಮುಂದೆ ಇಂಗ್ಲೆಂಡ್ ಬೌಲರ್ ಗಳ ವಿರುದ್ಧ ಪ್ರಾಬಲ್ಯ ಮೆರೆದ ಸರ್ಫರಾಝ್ ಖಾನ್, ಆಕರ್ಷಕ ಅರ್ಧಶತಕ ಸಿಡಿಸಿ (62 ರನ್) ಸಿಡಿಸಿ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದಾರೆ.