ತುಳುನಾಡ ಇತಿಹಾಸಕ್ಕೆ ಅನುಪಮ ಕೊಡುಗೆ

Ull_Tulunad
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ತುಳುನಾಡಿನ ಪ್ರಾಚೀನ ಇತಿಹಾಸ, ಸ್ಥಳನಾಮ, ಭೂತಾರಾಧನೆ, ದೇವಾಲಯ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳ ಬಗ್ಗೆ ವ್ಯಾಪಕ ಕ್ಷೇತ್ರ ಕಾರ್ಯದ ಮೂಲಕ ಪ್ರಾದೇಶಿಕ ಅಧ್ಯಯನಕ್ಕೆ ಹಾಗೂ ತುಳುನಾಡಿನ ಇತಿಹಾಸ ರಚನೆಗೆ ಅನುಪಮ ಕೊಡುಗೆ ನೀಡಿದವರಲ್ಲಿ ಇತಿಹಾಸಕಾರ ಪಿ.ಗುರುರಾಜ ಭಟ್ ಅವರು ವಾರ್ಗಪ್ರವರ್ತಕರೆನಿಸಿದವರು ಎಂದು ಇತಿಹಾಸ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಟಕದ ವತಿಯಿಂದ ಇತಿಹಾಸ ಕ್ಷೇತ್ರದ ಬಹುಮುಖಿ ಸಾಧಕ ಪಿ.ಗುರುರಾಜ ಭಟ್ ಜನ್ಮಶತವಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ವಾತನಾಡಿ, ಸ್ಥಳೀಯ ಇತಿಹಾಸವನ್ನು ಅರಿತುಕೊಂಡಾಗ ವಾತ್ರ ನಮ್ಮ ಸಂಸ್ಕೃತಿಯನ್ನು ಅರ್ಥ ವಾಡಿಕೊಳ್ಳಬಹುದಾಗಿದೆ ಎಂದರು.

ವಿ.ವಿ. ಇತಿಹಾಸ ವಿಭಾಗದ ಅಧ್ಯಕ್ಷೆ ಡಾ.ತ್ರಿವೇಣಿ ಅರಸ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿವಾರ್ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ವಿದ್ಯಾರ್ಥಿ ಝುಬೇರ್ ಸ್ವಾಗತಿಸಿದರು. ವೈಷ್ಣವಿ ವಂದಿಸಿದರು. ಸೋನುಗೌಡ ನಿರೂಪಿಸಿದರು.

ತುಳುನಾಡಿನ ಇತಿಹಾಸವನ್ನು ಕಟ್ಟುವಲ್ಲಿ ವಿದೇಶಿ ಇತಿಹಾಸಕಾರರು, ಹವ್ಯಾಸಿ ಮತ್ತು ವೃತ್ತಿಪರ ಇತಿಹಾಸಕಾರರ ಕೊಡುಗೆ ವಿಶೇಷವಾದುದು. ಅದರಲ್ಲಿ ವೃತ್ತಿಪರ ಇತಿಹಾಸಕಾರ ಗುರುರಾಜ ಭಟ್ಟರು ಜನಸಾವಾನ್ಯರಲ್ಲೂ ಇತಿಹಾಸದ ಪ್ರಜ್ಞೆಯನ್ನು ರೂಪಿಸಿದ್ದಾರೆ. ಗರ್ಭಗುಡಿಯ ಕತ್ತಲಲ್ಲಿದ್ದ ಇತಿಹಾಸವನ್ನು ಬೆಳಕಿಗೆ ತಂದಿದ್ದಾರೆ. - ಡಾ.ಪುಂಡಿಕಾ ಗಣಪಯ್ಯ ಭಟ್, ನಿವೃತ್ತ ಪ್ರಾಧ್ಯಾಪಕ. https://www.vijayavani.net/buddhadharma-philosophy-solution-to-problems https://www.vijayavani.net/lives-are-ruined-by-drug-abuse-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net