ಜಿಲ್ಲೆಯಲ್ಲಿ 8,901 ಮತದಾರರು ಹೆಚ್ಚಳ

Final-voter-list-release
Published on

ಕಾರವಾರ:ಈ ವರ್ಷದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಸೋಮವಾರ ಪ್ರಕಟಿಸಲಾಗಿದ್ದು, ಒಟ್ಟು 6.04 ಲಕ್ಷ ಪುರುಷರು, 6,02 ಲಕ್ಷ ಮಹಿಳೆಯರು ಹಾಗೂ 6 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 12,07,433 ಮತದಾರರಿದ್ದಾರೆ.
2024 ಜನವರಿ 1 ರವರೆಗೆ 18 ವರ್ಷವಾದವರ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿ, ಜಿಲ್ಲಾಽಕಾರಿ ಕಚೇರಿ, ಎಲ್ಲ ಎಸಿ, ತಹಸೀಲ್ದಾರ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. 2023 ಅಕ್ಟೋಬರ್ 27 ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ ಒಟ್ಟು 11,98,532 ಮತದಾರರಿದ್ದು, ಪ್ರಸ್ತುತ 8,901 ಮತದಾರರು ಸೇರ್ಪಡೆಯಾಗಿದ್ದಾರೆ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಿ, ವಿವರಣೆ ನೀಡಿದರು. ಯಾವುದೇ ಆಕ್ಷೇಪಗಳಿದ್ದರೆ ಫೆಬ್ರವರಿ ಅಂತ್ಯದೊಳಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸಾರ್ವಜನಿಕರು ಕಚೇರಿಗಳು ಅಥವಾ ವೆಬ್‌ಸೈಟ್ https://ceo.karnataka.gov.in ಮತ್ತು https://uttarakannada.nic.in ನಲ್ಲಿ ತಮ್ಮ ಹೆಸರಿರುವುದನ್ನು ಖಚಿತ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು. ಅಪರ ಜಿಲ್ಲಾಽಕಾರಿ ಪ್ರಕಾಶ ರಜಪೂತ, ಉಪವಿಭಾಗಾಕಾರಿ ಕನಿಷ್ಕ, ಕಾಂಗ್ರೆಸ್ ಪಕ್ಷದ ಸಮೀರ್‌ನಾಯ್ಕ್,ಬಿಜೆಪಿಯ ಮನೋಜ್ ಭಟ್ ಇದ್ದರು.


ಮಹಿಳಾ ಮತದಾರರು ಹೆಚ್ಚು

ಕಾರವಾರದಲ್ಲಿ 3408, ಕುಮಟಾದಲ್ಲಿ 675 ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಉಳಿದೆಡೆ ಪುರುಷರ ಸಂಖ್ಯೆಯೇ ಹೆಚ್ಚಿದೆ. ಜಿಲ್ಲೆಯಲ್ಲಿ ಒಟ್ಟು 29,229 ಹಿರಿಯ ನಾಗರೀಕ ಮತದಾರರಿದ್ದಾರೆ. 15,579 ಅಂಗವಿಕಲ ಮತದಾರರಿದ್ದಾರೆ.1945 ಕಂಟ್ರೋಲ್ ಯೂನಿಟ್‌ಗಳನ್ನು ಲೋಕಸಭಾ ಚುನಾವಣೆಗೆ ಸಿದ್ಧ ಮಾಡಲಾಗಿದೆ. 2756 ಬ್ಯಾಲೆಟ್ ಯುನಿಟ್ ಹಾಗೂ 2035 ವಿವಿಪ್ಯಾಟ್‌ಗಳ ಪ್ರಾಥಮಿಕ ಪರೀಕ್ಷೆ ಪೂರ್ಣ ಮಾಡಲಾಗಿದೆ ಎಂದು ಡಿಸಿ ಗಂಗೂಬಾಯಿ ಮಾನಕರ್ ವಿವರಿಸಿದರು.

ಎಲ್ಲೆಲ್ಲಿ ಎಷ್ಟು ಮತದಾರರು ..?

ಕ್ಷೇತ್ರವಾರು ವಿವರ


ಕ್ಷೇತ್ರ ಪುರುಷ ಮಹಿಳೆ ಒಟ್ಟು ಮತದಾರರು ಮತಗಟ್ಟೆಗಳು
ಹಳಿಯಾಳ 91,869 91,166 1,83,036 215
ಕಾರವಾರ 1,09,378 1,12,786 2,22,165 258
ಕುಮಟಾ 94,624 95,229 1,89,856 215
ಭಟ್ಕಳ 1,14,053 1,11,075 2,25,128 248
ಶಿರಸಿ 1,01,484 1,01,163 2,02,648 266
ಯಲ್ಲಾಪುರ 93,058 91,542 1,84,600 233

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net