ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರಿಂದ ಯತ್ನ

dinesh
Published on

ಕೋಲಾರ: ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ದ್ವೇಷದ ರಾಜಕಾರಣ ಮಾಡಲು ಮುಂದಾಗಿದಾರೆ. ಸರ್ಕಾರ ಸರಿದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡಬೇಕಾಗಿರುವ ರಾಜ್ಯಪಾಲರೇ ಸರ್ಕಾರವನ್ನು ಅಸ್ತಿರಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಸಚಿವ ದಿನೇಶ್​ ಗುಂಡೂರಾವ್​ ಕಿಡಿಕಾರಿದರು.

ಸಿಎಂ ವಿರುದ್ಧ ರಾಜ್ಯಪಾಲರು ದ್ವೇಷ ರಾಜಕಾರಣ ಮಾಡುತ್ತಿರುವುದರಿಂದಲ್ಲೇ ಜನಪ್ರಿಯತೆ ಹೆಚ್ಚಾಗಿದ್ದು, ಕಾಂಗ್ರೆಸ್​ ಪಕ್ಷದಲ್ಲಿನ ಒಗ್ಗಟ್ಟು ಜಾಸ್ತಿಯಾಗಿದೆ ಎಂದು ಹೇಳಿದರು.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ದಾಖಲೆಗಳನ್ನು ಸಲ್ಲಿಸಿರುವುದರಿಂದಲೇ ಕುಮಾರಸ್ವಾಮಿ ಅವರು ತಪ್ಪು ಮಾಡಿರುವುದರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಕೋರಿದರೂ ಕೊಟ್ಟಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ದಿನವೇ ಶೋಕಾಸ್​ ನೋಟಿಸ್​ ಜಾರಿ ಮಾಡಿ ದ್ವೇಷದ ರಾಜಕಾರಣ ಮಾಡಲು ಮುಂದಾದರು, ರಾಜ್ಯಪಾಲರ ವರ್ತನೆ ಖಂಡನೀಯ ಎಂದರು.

ಕಾನೂನು ಪ್ರಕಾರ ಬಂದಿರುವ ಜಾಗ
ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಅವರ ಅವಧಿಯಲ್ಲಿಯೇ ಪರಿಹಾರ ಕೊಡಬಹುದಾಗಿತ್ತು. ಅಧಿಕಾರ ದುರುಪಯೋಗ ಆರೋಪ ಬರುತ್ತದೆಂಬ ಕಾರಣದಿಂದ ಪರಿಹಾರ ಪಡೆದುಕೊಂಡಿರಲಿಲ್ಲ. ಬಿಜೆಪಿಯವರ ಅವಧಿಯಲ್ಲಿ ಪರಿಹಾರ ಕೊಡಲಾಗಿದ್ದು, ಕಾನೂನು ಪ್ರಕಾರ ಬಂದಿರುವ ಜಾಗವನ್ನು ಯಾಕೆ ಬಿಟ್ಟು ಕೊಡಬೇಕು ಎಂದು ಪ್ರಶ್ನಿಸಿದರು.

ಅಭಿವೃದ್ಧಿಗೆ ಬಿಜೆಪಿ-ಜೆಡಿಎಸ್​ನಿಂದ ಅಡ್ಡಿ
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಬಾರದು, ಜನರಿಗೆ ತೊಂದರೆ ಆಗಬೇಕು ಎನ್ನವುದು ಬಿಜೆಪಿ-ಜೆಡಿಎಸ್​ನವರ ಮನಸ್ಥಿತಿ. ಬಿಜೆಪಿ ಈಗ ಅಧಿಕಾರದಲ್ಲಿ ಇಲ್ಲ, ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಇದರಿಂದಲೇ ಅಭಿವೃದ್ಧಿ ವಿಚಾರದಲ್ಲಿ ವಿನಾಕಾರಣ ಅಡ್ಡಿ ಮಾಡಿಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರಗಾಲದ ಹಣವನ್ನು ಕೊಡಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ನ್ಯಾಯಾಲಯದ ಮೊರೆ ಹೋಗಿ ಹಣ ಪಡೆಯುವಂತಾಯಿತು ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net