ಅಮ್ಟಾಡಿ ಸಹಕಾರಿ ಅಧ್ಯಕ್ಷೆಯಾಗಿ ಮಲ್ಲಿಕಾ ಪಕ್ಕಳ ಪುನರಾಯ್ಕೆ

New Project (15)
Published on

ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 13 ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾ ಪಕ್ಕಳ ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ರಾಯನ್ ಸಚಿನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಕೆ.ನಾಗೇಂದ್ರ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ಹಾಗೂ ಸಿಬ್ಬಂದಿ ಸಹಕರಿಸಿದರು.

ನಿರ್ದೇಶಕರಾಗಿ ನರಸಿಂಹ ಹೊಳ್ಳ, ಆಲ್ವಿನ್ ವಿನಯ್ ಲೋಬೊ, ಕಮಲಾಕ್ಷ ಅಮ್ಟಾಡಿ, ವೀಣಾ ಡಿಸೋಜ ಬಾಂಬಿಲ, ತುಕಾರಾಮ ಉದಲೆ ಕೋಡಿ, ಕಮಲಾ ಕೆಂಪುಗುಡ್ಡೆ, ಯಶವಂತ ಅಡಪ ಕುರಿಯಾಳ, ಎಡ್ವರ್ಡ್ ಆಲ್ವಿನ್ ಫೆರ್ನಾಂಡಿಸ್ ಪೆದಮಲೆ, ಹರೀಶ್ ಶೆಟ್ಟಿ ಪಡು, ಬಬಿತಾ ಕೋಟ್ಯಾನ್ ಅಮ್ಟಾಡಿ, ರೋಶನ್ ಪಿಂಟೋ ಮೂವ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net