More

    ಮುಂದಿನ ಆರ್ಥಿಕ ಕ್ರಾಂತಿಯಲ್ಲಿ ಕೃಷಿಯ ಪಾತ್ರ

    ಕಾರ್ಪೆರೇಟ್ ವಲಯ ದೊಡ್ಡ ಪ್ರಮಾಣದಲ್ಲಿ 25 ಸಾವಿರ ರೈತರು ಮತ್ತು 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಹೂಡಿಕೆ ಮಾಡಿದರೆ, ಅದು ಸಂಘಟಿತ ಹನಿ ನೀರಾವರಿ ಮತ್ತು ಮಾರ್ಕೆಟಿಂಗ್ ಆಗಿ ಪರಿವರ್ತಿತವಾಗಬಹುದು. ಒಮ್ಮೆ ಇದರಿಂದ ಜನರು ಭಾರಿ ಆರ್ಥಿಕ ಯಶಸ್ಸನ್ನು ಕಂಡರೆ, ಅದನ್ನು ನಿಲ್ಲಿಸುವುದಿಲ್ಲ. ಜನರು ಇದನ್ನು ದೇಶಾದ್ಯಂತ ಅಳವಡಿಸಲು ಪ್ರಾರಂಭಿಸುತ್ತಾರೆ.

    ಮುಂದಿನ ಆರ್ಥಿಕ ಕ್ರಾಂತಿಯಲ್ಲಿ ಕೃಷಿಯ ಪಾತ್ರನಮ್ಮ ದೇಶದಲ್ಲಿನ ಅನೇಕ ವೈಜ್ಞಾನಿಕ ಸಾಧನೆಗಳು ಮತ್ತು ಯಶಸ್ವಿ ಉದ್ಯಮಗಳು ಹೆಮ್ಮೆಯನ್ನು ಉಂಟುಮಾಡುತ್ತವೆ. ಆದರೆ, ನಮಗೆ ಆಹಾರವನ್ನು ಒದಗಿಸುವ ರೈತರ ಮಕ್ಕಳು ಹಸಿವಿನಿಂದ ಬಳಲುತ್ತಿರುವುದು ದುರದೃಷ್ಟಕರ. ನಮ್ಮ ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ರೈತರ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದರ ದ್ಯೋತಕ. ಈ ದೇಶ ನಡೆಸಿದ ನಾಲ್ಕು ಯುದ್ಧಗಳನ್ನು ಸೇರಿಸಿದರೂ ಈ ಪ್ರಮಾಣದ ಜನರು ಸತ್ತಿಲ್ಲ.

    ಭಾರತ ಜಗತ್ತಿಗೇ ‘ಅನ್ನದಾತ’ನಾಗುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ, ಇದಕ್ಕೆ ಪೂರಕವಾದ ಪರಿಸರ, ಮಣ್ಣು, ಹವಾಮಾನ ಪರಿಸ್ಥಿತಿಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ‘ಮಣ್ಣನ್ನು ಆಹಾರವನ್ನಾಗಿಸುವ ಕೌಶಲ’ ಹೊಂದಿರುವ ಜನರ ಸಮುದಾಯ, ಈ ಎಲ್ಲ ವೈಶಿಷ್ಟ್ಯಗಳನ್ನೂ ಹೊಂದಿದ ಏಕೈಕ ರಾಷ್ಟ್ರ ಭಾರತ. ಕೃಷಿಯನ್ನು ಹೆಚ್ಚು ಲಾಭದಾಯಕ ಉದ್ಯಮವನ್ನಾಗಿಸಬೇಕು ಎಂಬ ಪ್ರಯತ್ನ ತುಂಬ ಸಮಯದಿಂದ ನಡೆಯುತ್ತಿದೆ. ಇದಕ್ಕೆ ದೊಡ್ಡ ಅಡಚಣೆಯಾಗಿರುವುದು-ನಮ್ಮ ದೇಶದಲ್ಲಿನ ತುಂಬ ಚಿಕ್ಕ ಭೂಹಿಡುವಳಿಗಳು. ಸಾವಿರಾರು ವರ್ಷಗಳ ಕೃಷಿ ಚಟುವಟಿಕೆ ಮತ್ತು ಅದರ ಪರಿಣಾಮವಾಗಿ ಭೂಮಿಯ ವಿಭಜನೆ, ಇವುಗಳ ಕಾರಣ ಇಂದು ಭಾರತದಲ್ಲಿ ಸರಾಸರಿ ಭೂಹಿಡುವಳಿ ಕೇವಲ ಒಂದು ಹೆಕ್ಟೇರ್ ಆಗಿದೆ. ಒಂದು ಹೆಕ್ಟೇರ್​ನಲ್ಲಿ, ನೀವು ಏನನ್ನೇ ಹೂಡಿಕೆ ಮಾಡಿದರೂ ಲಾಭ ಗಳಿಸಲು ಸಾಧ್ಯವೇ ಇಲ್ಲ. ನಮ್ಮ ರೈತರನ್ನು ನಾಶಮಾಡುವ, ಬಡತನ ಮತ್ತು ಸಾವಿಗೆ ಕಾರಣವಾಗುವ ಎರಡು ಪ್ರಮುಖ ಸಮಸ್ಯೆಗಳೆಂದರೆ, ನೀರಾವರಿಯಲ್ಲಿ ಹೂಡಿಕೆಯ ಕೊರತೆ ಮತ್ತು ಮಾರುಕಟ್ಟೆಯಲ್ಲಿ ವ್ಯವಹಾರ ಕ್ಷಮತೆಯ ಕೊರತೆ.

    ಇದನ್ನೂ ಓದಿ: VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು

    ಪರಿಹಾರ ಮಾರ್ಗದತ್ತ ಸಾಗಬೇಕು: ರೈತ-ಉತ್ಪಾದಕ ಸಂಸ್ಥೆಗಳ (ಎಫ್​ಪಿಒ) ಮೂಲಕ ಕನಿಷ್ಠ 10 ಸಾವಿರ ಎಕರೆ ಭೂಮಿಯ ರೈತರನ್ನು ಒಟ್ಟುಗೂಡಿಸಿ ಪರಿಸ್ಥಿತಿಯನ್ನು ಹೇಗೆ ಬದಲಾಯಿಸಬಹುದು ಎಂದು ನಾವು ಪರಿಶೀಲಿಸುತ್ತಿದ್ದೇವೆ. ರೈತರು ತಮ್ಮ ಜಮೀನಿನ ಮೇಲೆ ಹಿಡಿತ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅದು ಅವರಿಗೆ ನೂರು ಪ್ರತಿಶತ ಸುರಕ್ಷಿತವಾಗುವಂತೆ ನಾವು ಕಾನೂನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರೈತರು ತಮ್ಮ ಭೂಮಿಯಲ್ಲಿ ಪ್ರತ್ಯೇಕವಾಗಿ ಕೃಷಿ ಮಾಡಬಹುದು, ಆದರೆ ಸಾಮರ್ಥ್ಯವನ್ನು ಹೊಂದಿರುವ ಕಂಪನಿಗಳು ಅದಕ್ಕೆ ಅಗತ್ಯವಾದ ಸಣ್ಣ ನೀರಾವರಿ ಮತ್ತು ಉತ್ಪನ್ನಗಳ ಮಾರಾಟವನ್ನು ಒಟ್ಟಿಗೆ ನೋಡಿಕೊಳ್ಳಬೇಕಾಗುತ್ತದೆ.

    ಇದನ್ನೂ ಓದಿ: PHOTOS: ‘ರಾಣಿ ಚನ್ನಮ್ಮ’ನ ಮುಖವನ್ನೇ ಮುಚ್ಚಿಬಿಟ್ಟ ‘ಹೆಜ್ಜೇನು’; ಫೋಟೋಕ್ಕೆ ಮುಗಿಬೀಳುತ್ತಿರುವ ಜನರು

    ಇಲ್ಲದಿದ್ದರೆ, ಇದೀಗ ಪ್ರತಿಯೊಬ್ಬ ರೈತನು ತನ್ನದೇ ಆದ ಪಂಪ್​ಸೆಟ್, ತನ್ನದೇ ಆದ ಕೊಳವೆಬಾವಿ ಮತ್ತು ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತಾನೆ. ಈ ರೀತಿಯ ಹೆಚ್ಚಾದ ಹೂಡಿಕೆಯ ಕಾರಣ ಅವನಿಗೆ ಸಾಲ ಅನಿವಾರ್ಯವಾಗುತ್ತದೆ ಅಥವಾ ರೈತನು ತನ್ನ ಭೂಮಿಯನ್ನು ಮಾರಬೇಕಾಗುತ್ತದೆ, ತನ್ನ ಹಳ್ಳಿಯಿಂದ ಗುಳೆ ಹೋಗಬೇಕಾಗುತ್ತದೆ. ಈ ಎಲ್ಲ ಹೂಡಿಕೆ ನಂತರವೂ, ರೈತನು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸಿದಾಗ, ಸಾರಿಗೆ, ಸಂಗ್ರಹಣೆ ಅಥವಾ ವ್ಯವಸ್ಥಿತ ಮಾರುಕಟ್ಟೆ ಕೂಡ ನಮ್ಮಲ್ಲಿ ಇಲ್ಲ. ಬೆಳೆ ಬೆಳೆಯುವುದು ಒಂದು ವಿಷಯವಾದರೆ, ಅದನ್ನು ಮಾರುಕಟ್ಟೆಗೆ ಕೊಂಡೊಯ್ಯುವ ವಿಷಯ ಬಂದಾಗ, ಅದು ರೈತನಿಗೆ ಇನ್ನೊಂದು ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ.

    ಇದನ್ನೂ ಓದಿ: ಈ ಬಾರಿಯ ವಿಷ್ಣುವರ್ಧನ್ ಹುಟ್ಟುಹಬ್ಬದ ವಿಶೇಷ ಏನು?

    ಆದ್ದರಿಂದ, ರೈತರ ಒಂದು ಗುಂಪನ್ನು ಪರಿಗಣಿಸಿ ‘ಸಮುದಾಯ ಸಣ್ಣ ನೀರಾವರಿ’ಯನ್ನು ಸ್ಥಾಪಿಸಲು ಸಾಧ್ಯವಾದರೆ ಹಾಗೂ ನೀರನ್ನು ಬಾಡಿಗೆಯ ಆಧಾರದ ಮೇಲೆ ನೀಡಿದರೆ, ರೈತರು ಹೆಚ್ಚಿನ ಬಂಡವಾಳ ಹೂಡಬೇಕಾದ ಪರಿಸ್ಥಿತಿಯೇ ಇರುವುದಿಲ್ಲ. ಹೂಡಿಕೆದಾರರಿಗೆ ಸರಿಯಾದ ರೀತಿಯಲ್ಲಿ ಮರುಪಾವತಿಯಗುವಂತೆ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೆ ತರಬೇಕಾಗುತ್ತದೆ. ಸಂಸ್ಥೆಗಳು 10 ಸಾವಿರ ರೈತರನ್ನು ಎಫ್​ಪಿಒ ಮೂಲಕ ಒಟ್ಟುಗೂಡಿಸಿದರೆಂದರೆ, ಅವರು ಉತ್ತಮ ಮಾರುಕಟ್ಟೆ ಬೆಲೆಗಳಿಗಾಗಿ ಮಾತುಕತೆ ನಡೆಸಬಹುದು. ಇದರ ಲಾಭವನ್ನು ರೈತ ಮತ್ತು ಸಂಸ್ಥೆಯ ನಡುವೆ ಹಂಚಿಕೊಳ್ಳಬಹುದು. ನಮ್ಮ ರೈತರಿಗೆ ನಾವು ಈ ರೀತಿಯಾದ ವ್ಯವಸ್ಥಿತ ಬೆಂಬಲವನ್ನು ಸೃಷ್ಟಿಸಿದರೆ, ಅವರು ಆಹಾರ ಬೆಳೆಯುವುದನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಭಾರತ ಆಹಾರ ಪೂರೈಸುವಂಥ ವಿಶ್ವದ ದೊಡ್ಡ ದೇಶವಾಗಬಹುದು.

    ಇದನ್ನೂ ಓದಿ: ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣ: ಈಶಪ್ರಿಯ ತೀರ್ಥರಿಂದ ಲಕ್ಷ ತುಳಸಿ ಅರ್ಚನೆ

    ಸಾವಯವ ಕೃಷಿಗೆ ಮರಳಬೇಕಿದೆ: ದಕ್ಷಿಣ ಭಾರತ 12 ಸಾವಿರ ವರ್ಷಗಳಿಂದ ಸಂಘಟಿತವಾಗಿ ಕೃಷಿಯನ್ನು ನಡೆಸಿಕೊಂಡು ಬಂದ ಇತಿಹಾಸವನ್ನು ಹೊಂದಿದ್ದರೂ, ಇಂದು ಬಹಳಷ್ಟು ಭೂಮಿ ನಿರುಪಯುಕ್ತವಾಗುತ್ತಿದೆ. ಏಕೆಂದರೆ ಮಣ್ಣಿಗೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ರೈತರು ಉತ್ತಮ ಇಳುವರಿಯನ್ನು ಪಡೆಯಬೇಕಾದರೆ ಮತ್ತು ಕೃಷಿಯಿಂದ ಜೀವನ ಸಾಗಿಸಬೇಕಾದರೆ, ಮಣ್ಣಿಗೆ ರಾಸಾಯನಿಕ ಬಳಕೆಯ ಅಗತ್ಯವಿಲ್ಲ, ಅದಕ್ಕೆ ಸಾವಯವ ಅಂಶ ಬೇಕು. ನಮ್ಮ ನೆಲವು ಮರಗಳು ಮತ್ತು ಪ್ರಾಣಿಗಳಿಂದ ಕೂಡಿದ್ದರೆ ಮಾತ್ರ ಇದರಿಂದಾದ ಎಲೆಗಳು ಮತ್ತು ಪ್ರಾಣಿಗಳ ತ್ಯಾಜ್ಯ ಮತ್ತೆ ಮಣ್ಣಿನಲ್ಲಿ ಹೋಗುವ ಮೂಲಕ ಮಣ್ಣು ಆರೋಗ್ಯಕರವಾಗಿ ಇರುತ್ತದೆ.

    ಇದನ್ನೂ ಓದಿ: ಉದ್ಬೂರು ಹಾಡಿಯಲ್ಲಿ ಆದಿವಾಸಿ ಗಿರಿಜನರಿಗೆ ಬಲೆ, ಹರಿಗೋಲು, ತಕ್ಕಡಿ ವಿತರಣೆ

    ಭಾರತದಲ್ಲಿ, ನಾವು ‘ಸಾವಯವ ಮರ ಆಧಾರಿತ ಕೃಷಿ’ಯನ್ನು ಸಣ್ಣ ಪ್ರಮಾಣದಲ್ಲಿ ಅಳವಡಿಸಿದ್ದೇವೆ ಮತ್ತು ರೈತರ ಆದಾಯ ಮೂರರಿಂದ ಎಂಟು ಪಟ್ಟು ಹೆಚ್ಚಾಗುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣವೆಂದರೆ-ಈ ಮಾದರಿಯಲ್ಲಿ ಅವರ ಕೃಷಿ ವೆಚ್ಚ ತೀವ್ರವಾಗಿ ಕಡಿಮೆಯಾಗುತ್ತದೆ ಮತ್ತು ವಿಶ್ವದಾದ್ಯಂತ ಸಾವಯವ ಉತ್ಪನ್ನಗಳಿಗೆ ಭಾರಿ ಬೇಡಿಕೆಯೂ ಇದೆ. ವಿಯೆಟ್ನಾಂನಂಥ ಕೆಲವು ದೇಶಗಳು ಈ ಬದಲಾವಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿವೆ ಮತ್ತು ವಿಯೆಟ್ನಾಮೀಸ್ ತಜ್ಞರು ಅಲ್ಲಿನ ರೈತರ ಆದಾಯ ಇಪ್ಪತ್ತು ಪಟ್ಟು ಹೆಚ್ಚಾಗಿರುವುದಾಗಿ ನಮ್ಮೊಂದಿಗಿನ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು

    ಮೌಲ್ಯವರ್ಧಿತ ಉತ್ಪನ್ನಗಳು, ಹಾಲು, ಮೀನುಗಾರಿಕೆ ಮತ್ತು ಕರಕುಶಲ ವಸ್ತುಗಳಿಂದ ಬರುವ ಆದಾಯವನ್ನು ಇದಕ್ಕೆ ಸೇರಿಸಿದರೆ, ಇದು ಗ್ರಾಮೀಣ ಭಾರತದ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಬಹುದು. ಈ ಅವಕಾಶವನ್ನು ಕಂಪನಿಗಳು ತಮ್ಮ ಕೊಡುಗೆ ಮತ್ತು ಲಾಭ ಪಡೆಯಲು ಬಳಸಿಕೊಳ್ಳಬೇಕು. ಮರ-ಸಂಬಂಧಿತ ಉತ್ಪನ್ನಗಳ ಮೂಲಕ ಆರ್ಥಿಕತೆಯನ್ನು ಹೆಚ್ಚಿಸಲು ಹಲವು ಮಾರ್ಗಗಳಿವೆ. ಉದಾಹರಣೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಮರ, ಹಣ್ಣುಗಳು ಮತ್ತು ಪ್ರವಾಸೋದ್ಯಮದ ಮೌಲ್ಯವೇ ನೂರಾರು ಶತಕೋಟಿ ಡಾಲರ್ ಆಗಿದೆ.

    ಇದನ್ನೂ ಓದಿ: ಬ್ಯಾಡ್ಮಿಂಟನ್: ಪಿವಿ ಸಿಂಧು, ಶ್ರೀಕಾಂತ್‌ಗೆ ಭಾರತ ತಂಡಗಳ ಸಾರಥ್ಯ

    ಕಸದಿಂದ ರಸ: ಕಾರ್ಪೆರೇಟ್ ಸಂಸ್ಥೆಗಳು ವಹಿಸಬಹುದಾದ ಮತ್ತೊಂದು ದೊಡ್ಡ ಪಾತ್ರವೆಂದರೆ ಕಸವನ್ನು ಸಂಪತ್ತಾಗಿ ಪರಿವರ್ತಿಸುವುದು. ಇದೀಗ, ನಮ್ಮ ನಗರಗಳಲ್ಲಿನ ಹೆಚ್ಚಿನ ಒಳಚರಂಡಿ ನೀರನ್ನು ನದಿಗಳು ಮತ್ತು ಸಾಗರಗಳಿಗೆ ಬಿಡಲಾಗುತ್ತಿದೆ. ಇದು ದೊಡ್ಡ ಮಟ್ಟದಲ್ಲಿ ಮಾಲಿನ್ಯ ಮಾಡುವ ಜತೆಗೆ, ಒಂದು ರೀತಿಯಲ್ಲಿ ಆರ್ಥಿಕ ನಷ್ಟವೂ ಆಗಿ ಪರಿಣಮಿಸಿದೆ. ಕಸವನ್ನು ಸಂಪತ್ತಾಗಿ ಪರಿವರ್ತಿಸುವ ಅನೇಕ ತಂತ್ರಜ್ಞಾನಗಳು ಇಂದು ಲಭ್ಯ ಇವೆ. ಸಿಂಗಾಪುರ ತ್ಯಾಜ್ಯ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಮೂಲಕ ಇದನ್ನು ಪ್ರದರ್ಶಿಸಿದೆ. ಭಾರತದ ನಗರಗಳು ಮತ್ತು ಪಟ್ಟಣಗಳಿಂದ ಬರುವ 36 ಶತಕೋಟಿ ಲೀಟರ್ ಒಳಚರಂಡಿ ನೀರನ್ನು ಬಳಸಿದರೆ, 6 ರಿಂದ 9 ಮಿಲಿಯನ್ ಹೆಕ್ಟೇರ್ ಪ್ರದೇಶಗಳಿಗೆ ಹನಿ/ಸಣ್ಣ ನೀರಾವರಿ ಸೌಲಭ್ಯ ಕಲ್ಪಿಸಬಹುದು.

    ಇದನ್ನೂ ಓದಿ: ಕರೊನಾ ರ‍್ಯಾಪಿಡ್ ಟೆಸ್ಟ್‌ನಿಂದ ತಪ್ಪು ಫಲಿತಾಂಶ: ಒಪ್ಪಿಕೊಂಡ ಕೇಂದ್ರ, ಐಸಿಎಂಆರ್!

    ಸರ್ಕಾರ ಈ ಎಲ್ಲ ಅಂಶಗಳಿಗೆ ಪರಿಣಾಮಕಾರಿಯಾಗಿ ಹಣಕಾಸು ನೆರವು ವಿತರಿಸಲು ಸಾಧ್ಯವಿಲ್ಲ. ಸರ್ಕಾರಿ ನಿಯೋಜಿತ ಹಣ ಬಹಳಷ್ಟು ಬಾರಿ ನಿರ್ದಿಷ್ಟ ಸಮಯಕ್ಕೆ ಲಭ್ಯ ಇರುವುದಿಲ್ಲ. ಮರ ಆಧಾರಿತ ಕೃಷಿಯ ವಿಷಯಕ್ಕೆ ಬಂದಾಗ, ನಿರ್ದಿಷ್ಟ ಸಮಯದಲ್ಲಿ ತೋಟಗಾರಿಕೆ ನಡೆಯಬೇಕಾಗುತ್ತದೆ, ಈ ನಿಟ್ಟನಲ್ಲಿ ಕಾರ್ಪೆರೇಟ್ ವಲಯ ರೈತರನ್ನು ಬೆಂಬಲಿಸಲು ಅಗತ್ಯವಾದ ಉತ್ಸುಕತೆ ತೋರಿಸಬೇಕಾಗುತ್ತದೆ.

    ಇದನ್ನೂ ಓದಿ: ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

    ಕಾರ್ಪೆರೇಟ್ ವಲಯ ದೊಡ್ಡ ಪ್ರಮಾಣದಲ್ಲಿ 25 ಸಾವಿರ ರೈತರು ಮತ್ತು 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಹೂಡಿಕೆ ಮಾಡಿದರೆ, ಅದು ಸಂಘಟಿತ ಹನಿ ನೀರಾವರಿ ಮತ್ತು ಮಾರ್ಕೆಟಿಂಗ್ ಆಗಿ ಪರಿವರ್ತಿತವಾಗಬಹುದು. ಒಮ್ಮೆ ಇದರಿಂದ ಜನರು ಭಾರಿ ಆರ್ಥಿಕ ಯಶಸ್ಸನ್ನು ಕಂಡರೆ, ಅದನ್ನು ನಿಲ್ಲಿಸುವುದಿಲ್ಲ. ಜನರು ಇದನ್ನು ದೇಶಾದ್ಯಂತ ಅಳವಡಿಸಲು ಪ್ರಾರಂಭಿಸುತ್ತಾರೆ. ಆರ್ಥಿಕತೆಯ ಬಗ್ಗೆ ಯೋಚಿಸುವಾಗ, ಷೇರು ಮಾರುಕಟ್ಟೆ ಮತ್ತು ಇತರ ಕೆಲವು ವಿಷಯಗಳನ್ನಷ್ಟೇ ನೋಡುತ್ತೇವೆ. ಆದರೆ ನಮ್ಮ ಜನಸಂಖ್ಯೆಯ ಶೇಕಡ 65 ಜನರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅವರ ಆದಾಯವನ್ನು ದ್ವಿಗುಣಗೊಳಿಸಿದರೆ, ನಮ್ಮ ಆರ್ಥಿಕತೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ.

    ಇದನ್ನೂ ಓದಿ: ವಾಹನದ ನಂಬರ್​ ಪ್ಲೇಟ್​ಗೆ ಕೆಸರು ಮೆತ್ತಿಕೊಂಡು 3 ಕೊಲೆ ಮಾಡಿದ್ದವರ ಬಂಧನ

    ಇಂದು ಭಾರತ ಸಮೃದ್ಧಿಯ ಹೊಸ್ತಿಲಲ್ಲಿ ಕುಳಿತಿದೆ. ಮುಂದಿನ 10 ವರ್ಷಗಳಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ, ಈ ಬೃಹತ್ ಜನಸಮುದಾಯವನ್ನು ಒಂದು ಹಂತದ ಜೀವನಮಟ್ಟದಿಂದ ಮೇಲಕ್ಕೆ ಏರಿಸಬಹುದು. ಕಾರ್ಪೆರೇಟ್ ವಲಯ ತನ್ನ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಬಳಸುವ ಮೂಲಕ ಈ ಪರಿವರ್ತನೆಯನ್ನು ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಇದನ್ನು ದಾನವೆಂದು ಪರಿಗಣಿಸಬೇಕಿಲ್ಲ. ಇದು ಆರ್ಥಿಕವಾಗಿ ಮತ್ತು ಲಕ್ಷಾಂತರ ಜನರಿಗೆ ಘನತೆ ಮತ್ತು ಸಮೃದ್ಧಿಯ ಜೀವನವನ್ನು ಒದಗಿಸುವ ದೃಷ್ಟಿಯಿಂದ ಒಳ್ಳೆಯ ಆದಾಯವನ್ನು ಕೊಡಬಹುದಾದಂಥ ಹೂಡಿಕೆಯಾಗಿದೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

    ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನದ ಬಳಿಕ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts