More

    ಉದ್ಬೂರು ಹಾಡಿಯಲ್ಲಿ ಆದಿವಾಸಿ ಗಿರಿಜನರಿಗೆ ಬಲೆ, ಹರಿಗೋಲು, ತಕ್ಕಡಿ ವಿತರಣೆ

    ಎಚ್.ಡಿ.ಕೋಟೆ: ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂಸುಂದರ್ ಗಿರಿಜನರಿಗೆ ಸಲಹೆ ನೀಡಿದರು.

    ತಾಲೂಕಿನ ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಬೂರು ಹಾಡಿಯಲ್ಲಿ ಆದಿವಾಸಿ ಗಿರಿಜನರಿಗೆ ಬಲೆ, ಹರಿಗೋಲು, ತಕ್ಕಡಿ ಹಾಗೂ ಇತರ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನದಿ ಅಂಚಿನಲ್ಲಿರುವ ಹಾಡಿ ಜನತೆಗೆ ಸವಲತ್ತು ಒದಗಿಸಲಾಗುತ್ತಿದೆ ಎಂದರು.

    ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಚಂದ್ರಪ್ಪ ಮಾತನಾಡಿ, ಶಾಸಕ ಅನಿಲ್ ಚಿಕ್ಕಮಾದು ಅವರ ಪರಿಶ್ರಮದ ಫಲವಾಗಿ ಮೊದಲ ಬಾರಿಗೆ ತಾಲೂಕಿನ 22 ಹಾಡಿಗಳಲ್ಲಿ 185 ಜನಕ್ಕೆ 25 ಸಾವಿರ ರೂ. ವೆಚ್ಚದಲ್ಲಿ ಒಟ್ಟು 46 ಲಕ್ಷ ರೂ.ಗಳ ಪರಿಕರ ವಿತರಿಸಲಾಗುತ್ತಿದೆ ಎಂದರು.

    ತಾಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾ ನಟರಾಜು, ಉಪಾಧ್ಯಕ್ಷೆ ಸರೋಜಿನಿ ಬಲರಾಂ, ಸದಸ್ಯ ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ, ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜು, ಶಾಸಕರ ಆಪ್ತ ಸಹಾಯಕ ಮಂಜುನಾಥ್, ಮುಖಂಡರಾದ ನಟರಾಜ್, ಬಲರಾಮ್, ಸುಬ್ರಮಣ್ಯ, ನವೀನ್‌ದಾಸ್, ಬಸಮ್ಮ, ಶೈಲೇಂದ್ರ, ಜಯರಾಜು, ಚಿಕ್ಕಣ್ಣ, ಅಧಿಕಾರಿಗಳಾದ ನಾಗರಾಜು, ಷಣ್ಮುಖ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts