More

    VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು

    ವಡೋದರಾ: ಅನ್​ಲಾಕ್​-4 ಹಂತದಲ್ಲಿ ಸಾರ್ವಜನಿಕ ಉದ್ಯಾನವನಗಳು ನಿಧಾನಕ್ಕೆ ಓಪನ್​ ಆಗುತ್ತಿವೆ. ಅದಕ್ಕೆ ಸಂಬಂಧಪಟ್ಟಂತೆ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ.

    ಹಾಗೇ ಗುಜರಾತ್​​ನಲ್ಲೂ ಕಂಟೇನ್​​ಮೆಂಟ್​ ಝೋನ್​​ಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಪಾರ್ಕ್​ಗಳು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೆ.

    ಆದರೆ ವಡೋದರಾದಲ್ಲಿ ಬೆಳ್ಳಂಬೆಳಗ್ಗೆ ಕೆಲವರು ತಮ್ಮ ಮೂರ್ಖತನವನ್ನು ಪ್ರದರ್ಶನ ಮಾಡಿದ್ದಾರೆ. ಗಾರ್ಡನ್ಸ್​, ಪಾರ್ಕ್​​ಗಳು ಮತ್ತೆ ಬಳಕೆಗೆ ಮುಕ್ತವಾಗಿದ್ದಕ್ಕೆ ಭರ್ಜರಿ ಪಟಾಕಿ ಸಿಡಿಸಿ, ಸಂಭ್ರಮ ಆಚರಣೆ ಮಾಡಿದ್ದಾರೆ.
    ಘಟನೆ ನಡೆದಿದ್ದು ಸಯಾಜಿ ಬಾಗ್​ ಉದ್ಯಾನವನದಲ್ಲಿ. ಕೊವಿಡ್​-19 ಶುರುವಾಗುವುದಕ್ಕೂ ಮೊದಲು ಆ ಪಾರ್ಕ್​ಗೆ ಜಾಗಿಂಗ್​, ವಾಕಿಂಗ್​, ಫಿಟ್ನೆಸ್​ ವ್ಯಾಯಾಮಗಳಿಗಾಗಿ ಹೋಗುತ್ತಿದ್ದವರು ಮಾಡಿದ ಕೆಲಸ ಇದು. ಇಂದು ಮತ್ತೆ ಗಾರ್ಡನ್​ ಓಪನ್​ ಆಗಿದ್ದನ್ನು ಸಿಕ್ಕಾಪಟೆ ಸಂಭ್ರಮಿಸಿದ್ದಾರೆ. ಉದ್ದನೆಯ ಪಟಾಕಿ ಸರವನ್ನು ಸಿಡಿಸಿ, ವಾಯುಮಾಲಿನ್ಯ, ಶಬ್ದಮಾಲಿನ್ಯ ಮಾಡಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲೆಂದೇ ವಾಕಿಂಗ್​, ಜಾಗಿಂಗ್​ ಮೊರೆ ಹೋಗುವ ಇವರಿಗೆ, ಮುಂಜಾನೆ ಪಟಾಕಿ ಹೊಡೆದು ಗಬ್ಬೆಬ್ಬಿಸುವುದು ತಪ್ಪು, ಅದೂ ಆರೋಗ್ಯಕ್ಕೆ ಹಾನಿಕಾರಕ ಎಂಬ ಕನಿಷ್ಠ ಅರಿವೂ ಇಲ್ಲದಾಯಿತು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ

    ಅದೂ ಅಲ್ಲದೆ, ಕೊವಿಡ್​-19 ನಿಯಂತ್ರಣಾ ಕ್ರಮವಾದ ಸಾಮಾಜಿಕ ಅಂತರ ನಿಯಮ ಪಾಲನೆಯನ್ನೂ ಮಾಡಿಲ್ಲ. ಕೆಲವರಷ್ಟೇ ಮಾಸ್ಕ್​ ಧರಿಸಿದ್ದರು. ಇನ್ನೂ ಒಂದಷ್ಟು ಜನ ಮಾಸ್ಕ್​ ಹಾಕಿರಲಿಲ್ಲ.
    ನೆಟ್ಟಿಗರಂತೂ ಇದೊಂದು ಮೂರ್ಖತನದ ಪರಮಾವಧಿ ಎಂದೇ ಹೇಳಿದ್ದಾರೆ. ಅನೇಕರು ವಿಡಿಯೋ ಶೇರ್​ ಮಾಡಿಕೊಂಡು ಟೀಕೆ ಮಾಡಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts