More

    ವಾಹನದ ನಂಬರ್​ ಪ್ಲೇಟ್​ಗೆ ಕೆಸರು ಮೆತ್ತಿಕೊಂಡು 3 ಕೊಲೆ ಮಾಡಿದ್ದವರ ಬಂಧನ

    ಚಿತ್ರದುರ್ಗ: ಆಗಸ್ಟ್​ 17ರಂದು ನಾಯಕನಹಟ್ಟಿಯಲ್ಲಿ ನಡೆದಿದ್ದ ತ್ರಿವಳ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಗಾಗಿ 150 ಪೊಲೀಸರ 10 ತಂಡಗಳನ್ನು ರಚಿಸಲಾಗಿತ್ತು. ಹತ್ಯೆಗೆ ಸಂಬಂಧಿಕರ ನಡುವಿನ ವೈಷಮ್ಯವೇ ಕಾರಣ ಎನ್ನಲಾಗಿದೆ.

    ರಾಣೆಬೆನ್ನೂರಿನ ಸಿದ್ದಪ್ಪ, ಮಾರುತಿ, ಮಂಜಪ್ಪ, ಸುರೇಶ, ಚೌಡಪ್ಪ, ಕೃಷ್ಣ ಬಂಧಿತರು. ಸೆ.7ರಂದು ರಾಣೆಬೆನ್ನೂರಿನಲ್ಲಿ ಬಂಧಿಸಲಾಗಿದೆ.

    ವಾಹನದ ನಂಬರ್​ ಪ್ಲೇಟ್​​ಗೆ ಕೆಸರು ಮೆತ್ತಿಕೊಂಡು ರಾಣೆಬೆನ್ನೂರಿನಿಂದ ನಾಯಕನಹಟ್ಟಿಗೆ ಬಂದಿದ್ದ ಆರೋಪಿಗಳು, ಸೀನಪ್ಪ ಎಂಬುವರನ್ನು, ಅವರ ಪುತ್ರ ಯಲ್ಲೇಶ, ತಮ್ಮನ ಮಗ ಮಾರೇಶ ಅವರನ್ನು ಕೊಲೆ ಮಾಡಿ, 50 ಹಂದಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಹಂದಿ ಸಾಕಣೆಗೆ ಸಂಬಂಧಪಟ್ಟ ಹಳೇ ವೈಷಮ್ಯವೇ ಈ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಂದು ಆರೋಪಿಗಳೊಂದಿಗೆ ಬಂದಿದ್ದ ಸರಕು ವಾಹನ ಚಾಲಕ ಬಸವರಾಜನನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಇದನ್ನೂ ಓದಿ: ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

    ಪ್ರಕರಣದ ಪತ್ತೆಗೆ ರಚಿಸಿದ್ದ 10 ತನಿಖಾ ತಂಡಗಳು ಅನಂತಪುರ, ಬಳ್ಳಾರಿ, ದಾವಣಗೆರೆ, ರಾಣೆಬೆನ್ನೂರು, ಚಿಕ್ಕ ಮಗಳೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಶೋಧ ನಡೆಸಿದ್ದವು. ಮೊಬೈಲ್‌ಬಳಕೆ, ಸಿಸಿ ಕ್ಯಾಮರಾ ನೆರವು ಪಡೆದು ಒಬ್ಬನನ್ನು ಬಂಧಿಸಿದ ಬಳಿಕ ಮತ್ತೆ ಐವರನ್ನು ಸೆರೆ ಹಿಡಿದ್ದಾರೆ.
    ಆರೋಪಿಗಳಿಂದ 5 ಮೊಬೈಲ್ ಫೋನ್, ಹಂದಿಗೆ ಹಾಕುವ 2 ಬಲೆ, ಐದು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ವೇಳೆ ಅನೇಕ ಅಧಿಕಾರಿ-ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು ತನಿಖೆಗೆ ಅಡ್ಡಿಯಾಗಿತ್ತು ಎಂದು ಎಸ್ಪಿ ಹೇಳಿದರು.

    ತನಿಖಾ ತಂಡಕ್ಕೆ ಬಹುಮಾನ

    ಪ್ರಕರಣ ಬಯಲಿಗೆಳೆದ ಡಿವೈಎಸ್ಪಿಗಳಾದ ಕೆ.ವಿ.ಶ್ರೀಧರ, ಸೈಯದ್ ರೋಶನ್ ಜಮೀರ್, ಸಿಪಿಐಗಳಾದ ಇ.ಆನಂದ, ರಮಾಕಾಂತ್, ಜಿ.ಬಿ.ಉಮೇಶ್, ರಾಘವೇಂದ್ರ, ರುದ್ರಪ್ಪ ಮತ್ತಿತರರ ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ರಾಧಿಕಾ ತಿಳಿಸಿದರು.

    ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಆಸ್ತಿ ಇ.ಡಿ. ವಶಕ್ಕೆ; 31.35 ಕೋಟಿ ರೂ. ಸ್ವತ್ತು ಸ್ವಾಧೀನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts