

ಹೆಬ್ರಿ: ಹೊಸ ಉದ್ಯಮ ಪ್ರಾರಂಭಿಸುವ, ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆ ಉದ್ಯಮಶೀಲತೆಯಲ್ಲಿ ಇರುತ್ತದೆ. ಇದು ಹೊಸ ಉತ್ಪನ್ನಗಳು, ಸೇವೆಗಳು ಅಥವಾ ವಾರುಕಟ್ಟೆಗಳನ್ನು ಒದಗಿಸಲು ಸೃಜನಾತ್ಮಕತೆ, ನಾವೀನ್ಯತೆ ಮತ್ತು ಅಪಾಯಗಳನ್ನು ಎದುರಿಸುವ ಪ್ರಕ್ರಿಯೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಸಂವಹನ ಕಲೆಯನ್ನು ಓದಿನ ಜತೆಗೆ ಕಲಿತು, ಜೀವನದ ಗುರಿಯನ್ನು ನಿರ್ಧರಿಸಿ, ತಲುಪಲು ಸತತ ಪರಿಶ್ರಮ ಪಡಬೇಕು ಎಂದು ಪ್ರೊಫೆಸರ್ ಸುಷ್ಮಾ ರಾವ್.ಕೆ ಹೇಳಿದರು.
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಮೃತ ಆವಿಷ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಪ್ರಕಾಶ್ ಜೋಗಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಾದ ಸಮೀಕ್ಷಾ ಪೂಜಾರಿ ಅತಿಥಿಗಳ ಪರಿಚಯ ವಾಡಿದರು. ಸ್ವಸ್ತಿ ಎಸ್. ಕಿಣಿ ಸ್ವಾಗತಿಸಿದರು. ಪ್ರಿಯಾಂಕಾ ವಂದಿಸಿದರು. ಧೃತಿ ಎಸ್. ಪೂಜಾರಿ ನಿರೂಪಿಸಿದರು.