

ಹೆಬ್ರಿ: ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ.100 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.98 ಸಾಧನೆ ಮಾಡಿದೆ. ಹಾಜರಾದ 248 ವಿದ್ಯಾರ್ಥಿಗಳಲ್ಲಿ 122 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನನ್ಯಾ ಕಾಮತ್ 592 (8ನೇ ರ್ಯಾಂಕ್), ಶ್ರೀರಮ್ಯಾ ಪೈ 590 (10ನೇ ರ್ಯಾಂಕ್), ಸಂದೇಶ್ ನಾಯ್ಕ 587, ಮೈತ್ರಿ ಎಸ್.ಭಟ್ 585, ಪವನ್ ಕಲ್ಕೂರ್ 585, ಆತ್ಮೀಕಾ ಎಚ್.ಶೆಟ್ಟಿ 584, ಪದ್ಮಶ್ರೀ ಎಸ್. 583, ಸನತ್ ಎಸ್.ಶೆಟ್ಟಿ 583, ಪ್ರಮತ್ ನಾಡಿಗ್ 581, ಅಭಿರಾಮ್ ಕಶ್ಯಪ್ 581, ಆಶ್ಲೇಷ್ ಶೆಟ್ಟಿ 580, ವಾಣಿಜ್ಯ ವಿಭಾಗದಲ್ಲಿ ಪ್ರವೀಣ್ ಶೆಣೈ 586, ಜಾಹ್ನವಿ ಪ್ರಭು 582, ತ್ರಿಶಾ 582, ಶ್ರೇಷ್ಠಾ ಶೆಟ್ಟಿ 581 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ವಿಶ್ವಸ್ಥ ಮಂಡಳಿ, ಪ್ರಾಂಶುಪಾಲರು, ಪೋಷಕರು ಅಭಿನಂದಿಸಿದ್ದಾರೆ.