Rakshit Shetty 
ವೆಬ್‌ಡೆಸ್ಕ್

ಉಡುಪಿ ದೇಗುಲದಲ್ಲಿ ಸಿಕ್ರು 'ರಿಚರ್ಡ್​ ಆಂಟನಿ'; ಪೋಷಕರ ಮದುವೆ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ಕಂಡಿದ್ದು ಹೀಗೆ..Rakshit Shetty

ಮಮತಾ

ಪ್ರಮುಖ ಮುಖ್ಯಾಂಶಗಳು

  • ಉಡುಪಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ನಟ ಮತ್ತು ನಿರ್ದೇಶಕ ರಕ್ಷಿತ್​ ಶೆಟ್ಟಿ
  • ರಕ್ಷಿತ್ ಅವರ ಪೋಷಕರ 50ನೇ ಮದುವೆ ವಾರ್ಷಿಕೋತ್ಸವದಲ್ಲಿ ಭಾಗಿ
  • ಪಂಚೆಯುಟ್ಟು ಮದುನಗನಂತೆ ಕಂಡ ರಕ್ಷಿತ್​ ಶೆಟ್ಟಿ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ರಕ್ಷಿತ್​ ಶೆಟ್ಟಿ ಕಾಣಿಸಿಕೊಂಡಿದ್ದು, ಕಾಂತಾರ-2 ರಿಲೀಸ್ ಆಗಿದ್ದ ವೇಳೆ. ಅಂದಿನಿಂದ ಇಲ್ಲಿಯವರೆಗೂ ನಟನ ಆಪ್ತರ ಬಳಿ ರಕ್ಷಿತ್​ ಶೆಟ್ಟಿ ಎಲ್ಲಿ ಕಾಣೆಯಾಗಿದ್ದಾರಲ್ಲ ಎಂದು ಕೇಳುವವರ ಸಂಖ್ಯೆಯೇ ಹೆಚ್ಚು. ಸೋಶಿಯಲ್​ ಮೀಡಿಯಾದಲ್ಲೂ ಆಕ್ಟಿವ್​ ಇರದ ಶೆಟ್ರು ದಿಢೀರನೆ ಪಂಚೆಯುಟ್ಟು ಮದುಮಗನಂತೆ ಓಡಾಡಿಕೊಂಡಿರುವ ತಾಜಾ ದೃಶ್ಯಗಳು  ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಪಂಚೆಯುಟ್ಟು ಅದಕ್ಕೊಂದು ಶಲ್ಯ ತೊಟ್ಟು ಭಾರಿ ನಗುವಿನಲ್ಲಿ ರಕ್ಷಿತ್​ ಶೆಟ್ಟಿ ಓಡಾಡುತ್ತಿರುವುದನ್ನು ಉಡುಪಿಯ ದೇಗುಲದಲ್ಲಿ  ಕಂಡ ಅಭಿಮಾನಿಗಳು ಅವರ ಮದುವೆ ಇರಬೇಕೆಂದು ಭಾವಿಸಿಬಿಟ್ಟಿದ್ದರು. ಆದರೆ, ಸತ್ಯ ಅದಲ್ಲ  ಅವರ ತಂದೆ-ತಾಯಿ ಮದುವೆಯಾಗಿ 50 ವರ್ಷ ಕಳೆದಿರುವ ಕಾರಣ ಇಡೀ ಕುಟುಂಬ ಸೇರಿ ಸುವರ್ಣ ಸಂಭ್ರಮವನ್ನು ಆಚರಿಸಿದ್ದಾರೆ.
50ರ ದಾಂಪತ್ಯ ಸಂಭ್ರಮ
ರಕ್ಷಿತ್​ ಶೆಟ್ಟಿ ಅವರ ತಂದೆಯಾದ  ಶ್ರೀಧರ್‌ ಶೆಟ್ಟಿ ಹಾಗೂ ತಾಯಿ ರಂಜನಾ ಶೆಟ್ಟಿ  ಅವರ  50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬವು ಅದ್ದೂರಿಯಾಗಿ ಆಚರಿಸಿದೆ. ಇದರ ಭಾಗವಾಗಿ ಉಡುಪಿಯಲ್ಲಿ ಬೈಲೂರು ಬಳಿ ಇರುವ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದೆ. 

ಕುಟುಂಬಸ್ಥರು ಭಾಗಿ

ಸಮಾರಂಭದಲ್ಲಿ ರಕ್ಷಿತ್​ ಶೆಟ್ಟಿ ಕುಟುಂಬ ಭಾಗಿಯಾಗಿತ್ತು. ಅವರ ತಾಯಿ ಕೆಂಪು ಬಣ್ಣದ ರೇಷ್ಮೇ ಸೀರೆಯುಟ್ಟು ಮಿಂಚಿದರೆ, ತಂದೆ ರೇಷ್ಮೆ ಒಂಚೆ ಧರಿಸಿದ್ದರು. ಅವರ ಅಣ್ಣ ರಂಜಿತ್​, ಅತ್ತಿಗೆ ಹಾಗೂ ಇಬ್ಬರು ಮಕ್ಕಳು ಹಾಗೂ ಅಕ್ಕ ರಶ್ಮಿತ್​ ಶೆಟ್ಟಿ ಕುಟುಂಬವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕುಟುಂಬದ ಫೋಟೋ ಸಹ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. 
ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಸಿಂಪಲ್​ ಆಗಿ ಒಂದು ಲವ್​ ಸ್ಟೋರಿ ಸಿನಿಮಾದಿಂದ ಹೆಚ್ಚು ಪರಿಚಿತರಾದರೂ ಸಹ ಜನ ಅವರನ್ನು ಹೆಚ್ಚೆಚ್ಚು ನೆಚ್ಚಿಕೊಂಡಿದ್ದು ಕಿರಿಕ್​ ಪಾರ್ಟಿ, ಸಪ್ತ ಸಾಗರದಾಚೆ ಎಲ್ಲೋ, ಚಾರ್ಲಿ 777 ಸಿನಿಮಾದಿಂದ. ಅದಾದ ನಂತರ ಅವರು ಎಲ್ಲಿದ್ದಾರೆ, ಏನೂ ಮಾಡುತ್ತಿದ್ದಾರೆ. ಅವರ ರಿಚರ್ಡ್​ ಆಂಟನಿ ಸಿನಿಮಾ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ಇನ್ನು ದಕ್ಕಿಲ್ಲ.

ರಕ್ಷಿತ್​ ಶೆಟ್ಟಿ ಇಷ್ಟು ದಿನ ಎಲ್ಲಿದ್ದರು?

ರಕ್ಷಿತ್ ಶೆಟ್ಟಿ ಅವರು ಸದ್ಯ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ 'ರಿಚರ್ಡ್ ಆಂಥೋನಿ: ಡೆಡ್ ಮೆನ್ ಟೆಲ್ ನೋ ಟೇಲ್ಸ್' ಚಿತ್ರದ ಪ್ರೀ-ಪ್ರೊಡಕ್ಷನ್ ಮತ್ತು ಸ್ಕ್ರಿಪ್ಟಿಂಗ್ ಕೆಲಸಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿ ಅವರು ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ಲೈಮ್‌ಲೈಟ್‌ನಿಂದ ದೂರು ಉಳಿದಿದ್ದರು.  
ಇತ್ತೀಚೆಗೆ ತಮ್ಮ ಮಾಜಿ ಪ್ರೇಯಸಿ ರಶ್ಮಿಕಾ ಮಂದಣ್ಣ ಅವರು ಮದುವೆಯಾದ ದಿನ ಫೇಸ್​ ಬುಕ್​ ಪ್ರೊಫೈಲ್​ ಅನ್ನು ಬದಲಾಯಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.  ಚಾರ್ಲಿ ನಾಯಿ ಜೊತೆ ಇರುವ ಫೋಟೋ ಹಂಚಿಕೊಂಡಿದ್ದ ಕಾರಣ ನಾಯಿಗಾದರೂ ನೀಯತ್ತಿದೆ ಮನುಷ್ಯರಿಗಿಲ್ಲ ಎಂದಿದ್ದಾರೆ ಎಂದು ನೆಟ್ಟಿಗರೇ ಕಲ್ಪಿಸಿಕೊಂಡು ಟ್ವೀಟ್ ಮಾಡಿದ್ದರು, (ಏಜೆನ್ಸೀಸ್).