Personal Loan Interest Rates: ನಮ್ಮಲ್ಲಿ ಬಹುತೇಕರು ದಿಢೀರ್ ಹಣದ ಅವಶ್ಯಕತೆ ಎದುರಾದಾಗ ಮೊದಲು ಮುಖ ಮಾಡುವುದೇ ಈ ಪರ್ಸನಲ್ ಲೋನ್ನತ್ತ. ಆದರೆ, ಅಪ್ಲೈ ಮಾಡುವ ಮುನ್ನ ಅವರು ಅತೀ ಮುಖ್ಯವಾಗಿ ಗಮನಿಸಬೇಕಾದ ವಿಷಯಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಲೋನ್ ಪಡೆಯುವ ಮೊದಲು ಬ್ಯಾಂಕಿನವರು ಹೇಗೆ ನಿಮ್ಮ ಸ್ಯಾಲರಿ ಸ್ಲಿಪ್, ಸ್ಯಾಲರಿ ಸ್ಟೇಟ್ಮೆಂಟ್, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಅಗತ್ಯ ಡಾಂಕ್ಯುಮೆಂಟ್ಗಳನ್ನು ಪರಿಶೀಲಿಸುತ್ತೋ, ಹಾಗೆಯೇ ನೀವು ಕೂಡ ಅವರು ನೀಡುವ ಬಡ್ಡಿ ದರಗಳು ಕೊನೆಯಲ್ಲಿ ಎಷ್ಟಾಗಲಿದೆ ಎಂಬುದರ ಲೆಕ್ಕಾಚಾರ ಹಾಕಿಕೊಳ್ಳುವುದು ಉತ್ತಮ.
ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕುಗಳಿಂದ ಪರ್ಸನಲ್ ಲೋನ್ಗಳನ್ನು ಪಡೆಯುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ, ಮದುವೆ, ಪ್ರಯಾಣ, ಮನೆ ಕಟ್ಟುವಿಕೆ ಅಥವಾ ಇತರ ತುರ್ತು ಅಗತ್ಯಗಳಿಗಾಗಿ ಈ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ವೈಯಕ್ತಿಕ ಸಾಲವನ್ನು ಪಡೆಯುವ ಮೊದಲು, ಯಾವ ಬ್ಯಾಂಕ್ ಅತಿ ಕಡಿಮೆ ಬಡ್ಡಿ ದರವನ್ನು ನೀಡುತ್ತಿದೆ? ಸಂಸ್ಕರಣಾ ಶುಲ್ಕ (Processing Fee) ಎಷ್ಟಿದೆ? ಸಾಲವನ್ನು ಅವಧಿಗೂ ಮುನ್ನವೇ ಪಾವತಿಸಿದರೆ ವಿಧಿಸುವ 'ಫೋರ್ಕ್ಲೋಸರ್ ಶುಲ್ಕ' (Foreclosure charges) ಎಷ್ಟು? ಎಂಬುದನ್ನು ತಿಳಿಯುವುದು ಬಹಳ ಮುಖ್ಯ.
ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಾದ ಐಡಿಎಫ್ಸಿ ಫಸ್ಟ್ ಬ್ಯಾಂಕ್, ಐಸಿಐಸಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳು ವಿವಿಧ ಬಡ್ಡಿ ದರಗಳಲ್ಲಿ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಹಾಗಾದರೆ, ಈ ಮೂರು ಬ್ಯಾಂಕುಗಳಲ್ಲಿ ಯಾವುದು ಅತಿ ಕಡಿಮೆ ವೆಚ್ಚದಲ್ಲಿ ಸಾಲವನ್ನು ನೀಡುತ್ತದೆ? ಸಾಲ ಕಟ್ಟಿ ಪೂರ್ತಿಗೊಳಿಸುವ ಸಮಯದಲ್ಲಿ ಒಟ್ಟು ಲೆಕ್ಕಾಚಾರಗಳು ಎಷ್ಟಾಗಲಿದೆ ಎಂಬುದರ ವಿವರವನ್ನು ಇಲ್ಲಿ ಉದಾಹರಣೆ ರೂಪದಲ್ಲಿ ತಿಳಿಯೋಣ ಬನ್ನಿ.
ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇ.9.99ರಷ್ಟು ಆರಂಭಿಕ ಬಡ್ಡಿ ದರದಲ್ಲಿ ಪರ್ಸನಲ್ ಸಾಲಗಳನ್ನು ನೀಡುತ್ತಿವೆ. ಈ ಬ್ಯಾಂಕಿನ ವಿಶೇಷತೆಯೆಂದರೆ, ಇದು ವೈಯಕ್ತಿಕ ಸಾಲಗಳ ಮೇಲೆ ಯಾವುದೇ ಸಂಸ್ಕರಣಾ ಶುಲ್ಕ ಅಥವಾ ಫೋರ್ಕ್ಲೋಸರ್ ಶುಲ್ಕವನ್ನು ವಿಧಿಸುವುದಿಲ್ಲ. ಇಲ್ಲಿಂದ ಒಮ್ಮೆಗೆ 50 ಸಾವಿರ ರೂ.ಗಳಿಂದ 1 ಕೋಟಿ ರೂಪಾಯಿವರೆಗೆ ಸಾಲ ಪಡೆಯಬಹುದು. ಸಾಲ ಮರುಪಾವತಿಗೆ 9 ತಿಂಗಳಿಂದ 60 ತಿಂಗಳವರೆಗಿನ ಅವಧಿಯನ್ನು ನೀಡಲಾಗುತ್ತದೆ.
ಉದಾಹರಣೆಗೆ, ಈ ಬ್ಯಾಂಕಿನಿಂದ 5 ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಮೂರು ವರ್ಷಗಳ ಅವಧಿಗೆ ನೀವು ಪಡೆದಿದ್ದೇ ಆದರೆ, ಪ್ರತಿ ತಿಂಗಳು ಕನಿಷ್ಟ 16,131 ರೂಪಾಯಿಗಳ ಕಂತು ಪಾವತಿಸಬೇಕಾಗುತ್ತದೆ. ಮೂರು ವರ್ಷಗಳಲ್ಲಿ ಒಟ್ಟು ಬಡ್ಡಿಯು 80,716 ರೂಪಾಯಿಗಳಾಗುತ್ತದೆ. ಅಂದರೆ, ಅಸಲು ಮತ್ತು ಬಡ್ಡಿ ಸೇರಿ ಒಟ್ಟು 5,80,716 ರೂ.ಗಳನ್ನು ಬ್ಯಾಂಕಿಗೆ ಕಟ್ಟಬೇಕಾಗುತ್ತದೆ.
ಈ ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲೆ ಶೇ.10.25ರಷ್ಟು ಬಡ್ಡಿ ದರಗಳನ್ನು ನೀಡುತ್ತಿದೆ. ಆದಾಗ್ಯೂ, ಈ ಬ್ಯಾಂಕಿನಿಂದ ಸಾಲ ಪಡೆಯುವ ಗ್ರಾಹಕರು ಸಂಸ್ಕರಣಾ ಶುಲ್ಕದ ಜತೆಗೆ ಇತರ ಶುಲ್ಕಗಳನ್ನು ಸಹ ಭರಿಸಬೇಕಾಗುತ್ತದೆ. ಸಾಲದ ಮೊತ್ತದ ಶೇ.2ರಷ್ಟು ಹಣವನ್ನು ಸಂಸ್ಕರಣಾ ಶುಲ್ಕವಾಗಿ ವಿಧಿಸಲಾಗುತ್ತದೆ. ಇದರ ಜತೆಗೆ ಜಿಎಸ್ಟಿಯನ್ನೂ ಪಾವತಿಸಬೇಕಾಗುತ್ತದೆ. ಅಲ್ಲದೆ, ಸಾಲವನ್ನು ಅವಧಿಗೂ ಮುನ್ನವೇ ಸಂಪೂರ್ಣವಾಗಿ ಮರುಪಾವತಿಸಿದರೆ, ಶೇ.3ರಷ್ಟು ಫೋರ್ಕ್ಲೋಸರ್ ಶುಲ್ಕವನ್ನು ವಿಧಿಸಲಾಗುತ್ತದೆ.
ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇ.9.99ರಷ್ಟು ಆರಂಭಿಕ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಆದಾಗ್ಯೂ, ಈ ಬ್ಯಾಂಕ್ನಲ್ಲಿ ಸಾಲಗಾರರು 6,500 ರೂ. ವರೆಗೆ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರೊಟ್ಟಿಗೆ ಜಿಎಸ್ಟಿ ಕೂಡ ಅನ್ವಯವಾಗುತ್ತದೆ. ಸಾಲವನ್ನು ಮುಂಚಿತವಾಗಿ ಮುಕ್ತಾಯಗೊಳಿಸಿದರೆ ಶೇ.2ರಿಂದ 4ರಷ್ಟು ಸ್ವತ್ತುಮರುಸ್ವಾಧೀನ ಶುಲ್ಕವನ್ನು ವಿಧಿಸಲಾಗುತ್ತದೆ.
ಇಲ್ಲಿ ನೀವು ವೈಯಕ್ತಿಕ ಸಾಲವನ್ನು 25 ಸಾವಿರ ರೂ.ದಿಂದ 1 ಕೋಟಿ ರೂ. ವರೆಗೆ ಪರ್ಸನಲ್ ಲೋನ್ ಪಡೆಯುಬಹುದು. ಇನ್ನು, ಮರುಪಾವತಿ ಅವಧಿಯು 12 ತಿಂಗಳಿಂದ 84 ತಿಂಗಳವರೆಗೆ ಇರುತ್ತದೆ. 5 ಲಕ್ಷ ರೂ.ಗಳ ಸಾಲ ಪಡೆದರೆ ಮೂರು ವರ್ಷಗಳ ಅವಧಿಯೊಂದಿಗೆ ಈ ಬ್ಯಾಂಕ್ನಲ್ಲಿ ತಿಂಗಳ ಕಂತು 16,131 ರೂ. ಆಗಲಿದ್ದು, ಒಟ್ಟು ಬಡ್ಡಿ 80,725 ರೂ., ಅಸಲು ಮತ್ತು ಬಡ್ಡಿ ಸೇರಿ 5,80,725 ರೂ. ಜತೆಗೆ ಸಂಸ್ಕರಣಾ ಶುಲ್ಕ 6,500 ರೂ. ಮತ್ತು ಅದರ ಮೇಲೆ ಜಿಎಸ್ಟಿ ದರವನ್ನು ಸಹ ಪಾವತಿಸಬೇಕಾಗುತ್ತದೆ.
ಪರ್ಸನಲ್ ಲೋನ್ಗೆ ಅಪ್ಲೈ ಮಾಡೋ ಮುನ್ನ ನಾವು ತಿಳಿಸಿದ ಆರಂಭಿಕ ಬಡ್ಡಿ ದರ, ಪ್ರೊಸೆಸಿಂಗ್ ಫೀಜ್, ಜಿಎಸ್ಟಿ, ಸಾಲವನ್ನು ಅವಧಿಗೂ ಮುನ್ನವೇ ತೀರಿಸುವಾಗ ವಿಧಿಸುವ ಶುಲ್ಕಗಳು ಮತ್ತು ಸಾಲದ ಅವಧಿಯಂತಹ ಅಂಶಗಳನ್ನು ಪರಿಗಣಿಸಿ, ಯಾವುದು ಎಷ್ಟು ಪರ್ಸಟೆಂಜ್ ಇದೆ ಎಂಬುದನ್ನು ನಿಮಗೆ ಬೇಕಿರುವ ಸಾಲದ ಮೊತ್ತಕ್ಕೆ ಎಷ್ಟಾಗಬಹುದು ಎಂಬ ಲೆಕ್ಕಾಚಾರಗಳನ್ನು ಮಾಡಿ, ಆ ನಂತರ ಲೋನ್ ಪಡೆಯುವುದು ಉತ್ತಮ ನಿರ್ಧಾರ,(ಏಜೆನ್ಸೀಸ್).