ಕೋರ್ಟ್ ಆವರಣದಲ್ಲೇ ವಿಚ್ಛೇದನ ಅರ್ಜಿ ಹರಿದುಹಾಕಿ ಗಂಡನನ್ನು ಅಪ್ಪಿಕೊಂಡ ಪತ್ನಿ
- ಕೋರ್ಟ್ ಆವರಣದಲ್ಲೇ ವಿಚ್ಛೇದನ ಅರ್ಜಿ ಹರಿದುಹಾಕಿ ಗಂಡನನ್ನು ಅಪ್ಪಿಕೊಂಡ ಪತ್ನಿ
- ದಂಪತಿಗಳಿಬ್ಬರು ವರ್ಷಗಳ ಜಗಳ ಮರೆತು ಮತ್ತೆ ಒಂದಾದ ಘಟನೆ
- ಸೋಷಿಯಲ್ ಮೀಡಿಯಾನಲ್ಲಿ ವೀಡಿಯೋ ವೈರಲ್
ವೈರಲ್ ವಿಡಿಯೋ: ಗಂಡ ಹೆಂಡತಿ ಜಗಳ ಉಂಡು ಮಲಗುವರೆಗೆ ಎಂಬ ಮಾತಿದೆ. ಎಂದರೆ ಪತಿ-ಪತ್ನಿ ಎಷ್ಟೇ ಜಗಳವಾಡಿಕೊಂಡರು ಮತ್ತೆ ಒಂದಾಗುತ್ತಾರೆ ಎನ್ನುವುದು ಈ ಮಾತಿನ ಅರ್ಥವಾಗಿದೆ. ಹಾಗೆಯೇ ದಾಂಪತ್ಯದಲ್ಲಿ ಕಲಹ ಎನ್ನುವುದು ಸರ್ವೇ ಸಮಾನ್ಯವಾಗಿದ್ದು, ಅನುಸರಿಸಿ ನಡೆದರೆ ಬಾಳು ಬಂಗಾರ ಎಂದು ಹಿರಿಯರು ಹೇಳುತ್ತಿದ್ದರು.
ಈಗ ಇಂಹತದ್ದೆ ಒಂದು ಘಟನೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದು, ದಾಂಪತ್ಯದಿಂದ ಬೇಸತ್ತು, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಬ್ಬರು ಒಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Husband Wife Viral Video) ಆಗುತ್ತಿದೆ.
ಅರ್ಜಿ ಹರಿದು ಗಂಡನನ್ನು ಅಪ್ಪಿಕೊಂಡ ಮಡದಿ!
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬಳು ತನ್ನ ಕೈಯಲ್ಲಿದ್ದ ವಿಚ್ಛೇದನದ ಅರ್ಜಿಯನ್ನು ಹರಿದುಹಾಕಿ ತನ್ನ ಗಂಡನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಕಿಚ್ಚನ್ನು ಹಚ್ಚಿದೆ.
ಮಾಹಿತಿ ಪ್ರಕಾರ, ಈ ಜೋಡಿ ಹಲವಾರು ವರ್ಷಗಳಿಂದ ಡಿವೋರ್ಸ್ ಪಡೆಯಬೇಕೆಂದು ಕೋರ್ಟ್ ಮೇಟ್ಟಿಲೇರಿದ್ದರು. ಆದರೆ ವರ್ಷಕಳೆಯುತ್ತಾ ಹೋದರೂ ವಿಚ್ಚೇಧನ ದೊರೆಯುವಲ್ಲಿ ಸಫಲತೆ ದೊರೆತಿರಲಿಲ್ಲ.
ಕಳೆದ ಕೆಲ ದಿನಗಳ ಹಿಂದೆ ಯುವತಿಯ ತಂದೆಯ ಆರೋಗ್ಯ ಹದಗೆಟ್ಟಾಗ ಈ ಅಳಿಯನೇ ಮುಂದೆ ನಿಂತು ಆಸ್ಪತ್ರೆಯ ಎಲ್ಲಾ ಕೆಲಸಗಳನ್ನು ಮಾಡಿದ್ದನಂತೆ. ಇದರಿಂದ ಗಂಡನ ಮೇಲಿದ್ದ ಕೋಪವೆಲ್ಲಾ ಕರಗಿಹೋದ ಪರಿಣಾಮ ಈ ಜೋಡಿ ಮತ್ತೆ ಒಂದಾಗಿದ್ದಾರೆಂದು ಹೇಳಲಾಗುತ್ತಿದೆ.
ನೆಟ್ಟಿಗರು ಫುಲ್ ಖುಷ್!
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಅಂತೂ ಮಾವನ ದೆಸೆಯಿಂದ ಜೋಡಿ ಮತ್ತೆ ಒಂದಾದರು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಇವರು ಒಂದಾಗುತ್ತಾರೆಂದು ಗೊತ್ತಿದ್ದೆ ನ್ಯಾಯಾಲಯ ಡಿವೋರ್ಸ್ ಕೊಟ್ಟಿರಲಿಲ್ಲ ಎನ್ನುವುದು ನನ್ನ ಅಂದಾಜು ಎಂದು ಇನ್ನೊಬ್ಬರು ಹೇಳಿದ್ದಾರೆ. ಜೀವನದಲ್ಲಿ ಒಬ್ಬರನೊಬ್ಬರು ಅರಿತು ಬದುಕಿದರೆ ಬಾಳು ಬಂಗಾರದಂತಿರುತ್ತದೆ ಎಂದು ಮತ್ತೊಬ್ಬರು ಹಿತವಚನ ನೀಡಿದ್ದಾರೆ, (ಏಜನ್ಸೀಸ್).