ರೈಲ್ವೆ ನಿಲ್ದಾಣದಲ್ಲಿ ಗರ್ಲ್‌ಫ್ರೆಂಡ್ ಕೋಪ ಸಮಾಧಾನ ಮಾಡಲು ಹುಡುಗನೊಬ್ಬ ಅವಳ ಪಾದಗಳಿಗೆ ಬಿದ್ದಿದ್ದಾನೆ
- ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ಪ್ರೇಮಿಗಳ ಹೈಡ್ರಾಮಾ
- ರೈಲ್ವೆ ನಿಲ್ದಾಣದಲ್ಲಿ ಗರ್ಲ್‌ಫ್ರೆಂಡ್ ಕೋಪ ಸಮಾಧಾನ ಮಾಡಲು ಹುಡುಗನೊಬ್ಬ ಅವಳ ಪಾದಗಳಿಗೆ ಬಿದ್ದಿದ್ದಾನೆ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತವೆ. ಆದರೆ ಕೆಲವು ವಿಡಿಯೋಗಳು ಮಾತ್ರ ವೈರಲ್ ಆಗುತ್ತವೆ. ಸದ್ಯ ಇಂಟರ್ನೆಟ್‌ನಲ್ಲಿ ಇಂತಹದ್ದೇ ಒಂದು ವಿಚಿತ್ರ, ರೋಮಾಂಚನಕಾರಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪ್ರೀತಿಗಾಗಿ ಹುಡುಗನೊಬ್ಬ (Lovers Drama in Railway Station) ಸಾರ್ವಜನಿಕವಾಗಿ ಮಾಡಿದ ಕೆಲಸ ಈಗ ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರೈಲು ನಿಲ್ದಾಣದಲ್ಲಿ ನಡೆದಿದ್ದೇನು?
ಈ ವೈರಲ್ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದ ಶೀರ್ಷಿಕೆ ಪ್ರಕಾರ, ಹುಡುಗಿ ತನ್ನ ಬಾಯ್‌ಫ್ರೆಂಡ್ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು, ಅವನನ್ನು ಬಿಟ್ಟು ರೈಲು ಹತ್ತಿ ಹೋಗಲು ನಿಲ್ದಾಣಕ್ಕೆ ಬಂದಿದ್ದಾಳಂತೆ.
ಅವಳನ್ನು ಸಮಾಧಾನ ಮಾಡಲು ಆಕೆಯ ಬಾಯ್‌ಫ್ರೆಂಡ್ ರೇಲ್ವೆ ಸ್ಟೇಷನ್‌ವರೆಗೂ ಬೆನ್ನಟ್ಟಿಕೊಂಡು ಬಂದಿದ್ದಾನೆ. ಹುಡುಗಿ ಮಾತು ಕೇಳದೆ ಹೋಗಲು ಯತ್ನಿಸಿದಾಗ, ಹುಡುಗ ರೇಲ್ವೆ ಪ್ಲಾಟ್‌ಫಾರ್ಮ್ ಮೇಲೆಯೇ ಅವಳ ಪಾದಗಳಿಗೆ ಬಿದ್ದು ಬೇಡಿಕೊಳ್ಳಲು ಶುರು ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಅವಳು ಹೋಗಬಾರದು ಎಂದು ನೆಲದ ಮೇಲೆ ಮಲಗಿ ಅವಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಈ ಹೈಡ್ರಾಮಾ ನೋಡಲು ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರೆಲ್ಲಾ ಅಲ್ಲಿ ಜಮಾಯಿಸಿದ್ದಾರೆ. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ನಿಭಾಯಿಸಲು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಕಮೆಂಟ್ ಬಾಕ್ಸ್‌ನಲ್ಲಿ ಯುದ್ಧವೇ ಶುರುವಾಗಿದೆ. ಸಾರ್ವಜನಿಕರು ಈ ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಚರ್ಚಿಸುತ್ತಿದ್ದಾರೆ.
ಕೆಲವರು ಇದನ್ನು "ಅಪ್ಪಟ ಪ್ರೀತಿ", "ಆಳವಾದ ಪ್ರೇಮ" ಎಂದು ಕರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಜೀವ ಬಿಡುವ ಪ್ರೇಮಿಯನ್ನು ನೋಡುವುದೇ ಅಪರೂಪ, ಇವನಿಗೆ ಒಂದು ಸಲ್ಯೂಟ್ ಹೊಡೆಯಬೇಕು ಎಂದು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಹುಡುಗನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಡುಗಿ ಬೇಸರ ಮಾಡಿಕೊಂಡರೆ ಪ್ರೀತಿಯಿಂದ ಮಾತನಾಡಿಸಿ ಸಮಾಧಾನ ಮಾಡಬೇಕು, ಈ ರೀತಿ ಕಾಲು ಹಿಡಿದು ನಾಟಕ ಮಾಡುವುದಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಲವ್ವೆಲ್ಲಾ ಸಿನಿಮಾದಲ್ಲಿ ಮಾತ್ರ ಚಂದ, ರಿಯಲ್ ಲೈಫ್‌ನಲ್ಲಿ ಹುಡುಗಿ ಜೊತೆ ಇರಬೇಕಾದರೆ ದುಡ್ಡು ಗಳಿಸುವುದು ಮುಖ್ಯ. ಇದೆಲ್ಲಾ ಕೇವಲ ಶೋ ಅಷ್ಟೇ ಎಂದು ಇನ್ನೂ ಕೆಲವರು ಇಂದಿನ ಜನರೇಷನ್‌ನ ವಾಸ್ತವವನ್ನು ನೆನಪಿಸಿದ್ದಾರೆ, (ಏಜನ್ಸೀಸ್).