Pawan Kalyan Visits Young Fan Battling Rare Genetic Disorder 
ಟ್ರೆಂಡಿಂಗ್

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅಭಿಮಾನಿಗೆ ಮನೆಗೆ Pawan Kalyan ಸರ್ಪ್ರೈಸ್ ವಿಸಿಟ್​​; ಆರ್ಥಿಕ ಸಂಕಷ್ಟಕ್ಕೆ ನೆರವು

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದಲ್ಲಿರುವ ತಮ್ಮ ಅಪರೂಪದ ಅಭಿಮಾನಿಯನ್ನು ಭೇಟಿ ಮಾಡಿದ ಪವನ್​ ಕಲ್ಯಾಣ್​
  • ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಿರಂಜನ್​​​​ ಭೇಟಿ, ಆರ್ಥಿಕ ಸಹಾಯ
  • ನಿರಂಜನ್​ ಜೊತೆ ಕೊಂಚ ಕಾಲ ಸಮಯ ಕಳೆದ ಬಗ್ಗೆ ಪವನ್​ ಕಲ್ಯಾಣ್ ಪೋಸ್ಟ್
Pawan Kalyan Visits Young Fan Battling Rare Genetic Disorder: ಹೀಗೋಮ್ಮೆ ಬುಡಕ್ಕಟ್ಟು ಸಮುದಾಯದ ಜನರು ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿದ್ದ ಆಂಧ್ರ ಪ್ರದೇಶದ ಸಿಎಂ ಪವನ್​ ಕಲ್ಯಾಣ್ಯ, ಅಲ್ಲಿನ ಜನರು ಬರಿಗಾಲಿನಲ್ಲಿ ನಡೆದಾಡುವುದನ್ನು ಕಂಡು,ಎಲ್ಲರಿಗೂ ಪಾದರಕ್ಷೆಗಳನ್ನು ವಿರತರಣೆ ಮಾಡಿದ್ದರು. ಸದ್ಯ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ತಮ್ನನ್ನು ಕಾಣುವ ಆಸೆಯನ್ನು ವ್ಯಕ್ತಪಡಿಸಿದಾಗ, ಆತನ ಮನೆಗೆ ಭೇಟಿ ಮಾಡಿ, ಕೊಂಚ ಸಮಯ ಅವರೊಂದಿಗೆ ಕಳೆದು ಸೆಲ್ಫಿ ತೆಗೆದುಕೊಂಡು ಆತನ ಆಸೆ ಈಡೇರಿಸಿದ್ದಾರೆ.
ನಿರಂಜನ್​ನನ್ನು ಭೇಟಿಯಾಗಿ ಎಕ್ಸ್​ನಲ್ಲಿ ಸ್ವತಃ ಪವನ್​ ಕಲ್ಯಾಣ್​ ಅವರೇ ಪೋಟೋಗಳನ್ನು ಹಂಚಿಕೊಂಡು ಹೀಗೆಂದು ಬರೆದುಕೊಂಡಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಿರಂಜನ್​​, ಇತ್ತೀಚೆಗೆ ನನ್ನನ್ನು ನೋಡಬೇಕೆನ್ನುವ ಆಸೆ ವ್ಯಕ್ತಪಡಿಸಿದ ಬಗೆಗಿನ ವಿಡಿಯೋವನ್ನು ನಾನು ನೋಡಿದ್ದೆ. ಆತನ ಈಡೇರಿಸಬೇಕೆಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಹನುಮಕೊಂಡಕ್ಕೆ ತೆರಳಿ, ಆತನ ಜೊತೆ ಸಮಯ ಕಳೆದೆ ಎಂದು ಬರೆದುಕೊಂಡಿದ್ದಾರೆ.

ಆರ್ಥಿಕ ಸಹಾಯ

ಪವನ್​ ಕಲ್ಯಾಣ್​ ಅವರು ನಿರಂಜನ್​ ವೈದ್ಯಕೀಯ ವೆಚ್ಚಕ್ಕಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ನಿರಂಜನ್​​​ ಬಾಕಲ್ಯದಿಂದಲೂ ಪವನ್​ ಕಲ್ಯಾಣ್​ ಅವರ ಅಭಿಮಾನಿ. ನಿತ್ಯವೂ ಅವರ ಸಿನಿಮಾ ನೋಡುವುದು, ಹಾಡಿಗೆ ಸ್ಟೆಪ್​ ಹಾಕಲು ಯತ್ನಿಸಿದ್ದ ಹಳೆಯ ವಿಡಿಯೋವನ್ನು ಕುಟುಂಬ ಅವರಿಗೆ ತೋರಿಸಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ನಿರಂಜನ್​​ನ ಪೆಟ್​ ನೇಮ್​ ಗಬ್ಬರ್​ ಸಿಂಗ್​ ಎಂದು ಹೇಳಲಾಗಿದೆ.
ದೇಗುಲಕ್ಕೆ ಭೇಟಿ
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರೂ ಆತನಿಗಿರುವ ಧೈರ್ಯ, ಆತ್ಮವಿಶ್ವಾಸ, ಪರಿಸ್ಥಿತಿ ಎದುರಿಸುವ ರೀತಿ ನಿಜಕ್ಕೂ ಸ್ಪೂರ್ತಿದಾಯಕ. ಈ ಸಮಸ್ಯೆಯ ಮಧ್ಯೆಯೂ ಆತನ ಮನಸ್ಥೈರ್ಯ ಕುಗ್ಗಿಲ್ಲ. ಇದು ನಿಜಕ್ಕೂ ಶ್ಲಾಘನೀಯ. ನಿರಂಜನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಾ, ಕಲಿಯುಗದ ನೇರ ದೇವರು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದೆ.ನಿರಂಜನ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ.
ತೆಲಂಗಾಣ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರಿಗೆ, ತೆಲಂಗಾಣ ರಾಜ್ಯ ಸರ್ಕಾರಕ್ಕೆ ಮತ್ತು ಹಿರಿಯ ಅಧಿಕಾರಿಗಳಿಂದ ಕಾನ್‌ಸ್ಟೆಬಲ್‌ಗಳವರೆಗೆ ತೆಲಂಗಾಣ ಪೊಲೀಸ್ ಇಲಾಖೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತೆಲಂಗಾಣದ ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞತೆ ಹೇಳುತ್ತೇನೆ ಎಂದಿದ್ದಾರೆ.

ನಿರಂಜನ್​ಗೊಂದು ನೋಟ್​​

ಪ್ರಿಯ ನಿರಂಜನ್​ ನಿಮ್ಮ ಧೈರ್ಯ ಹೇಗಿದೆ ಎಂದರೆ, ನಿತ್ಯ ನಾವು ನಡೆಸುವ ಹೋರಾಟಕ್ಕಿಂದ ಬೃಹತ್​ ಗಾತ್ರದ್ದು. ಬೇಗನೇ ಗುಣಮುಖರಾಗಿ. ನಿಮ್ಮನ್ನು ಮತ್ತಷ್ಟು ಉತ್ಸಾಹಭರಿತರಾಗಿ ನೋಡಬೇಕೆಂದು ಬಯಸುವುದೇ ನನ್ನ ಆಶಯ ಎಂದು ಬರೆದುಕೊಂಡಿದ್ದಾರೆ.

ಯಾರಿದು ನಿರಂಜನ್​?

ನಿರಂಜನ್​ ಡುಚೆನ್​​ ಮಸ್ಕ್ಯುಲರ್​​ ಡಿಸ್ಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇದು ಐದು ವರ್ದೊಳಗಿನ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹದ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ. ಇದ ಹೃದಯ, ಉಸಿರಾಟದ ವ್ಯವಸ್ಥೆಯನ್ನು ಬಾಧಿಸುತ್ತದೆ,(ಏಜೆನ್ಸೀಸ್).