ಕೆಳಗಿಳಿದು ಹೋಗಲು ಸೋಮಾರಿತನ; ಮೊದಲ ಮಹಡಿಯಿಂದಲೇ ಬಿದ್ದ ಯುಪಿ ವ್ಯಕ್ತಿ 
ಟ್ರೆಂಡಿಂಗ್

ಹತ್ತು ರೂಪಾಯಿ ಐಸ್‌ಕ್ರೀಮ್ ಆಸೆಗೆ ಬಿತ್ತು ಲಕ್ಷದ ಪೆಟ್ಟು: ಮೊದಲ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್! Ice Cream Viral Video

ಪ್ರಮುಖ ಮುಖ್ಯಾಂಶಗಳು

  • ಹತ್ತು ರೂಪಾಯಿ ಐಸ್‌ಕ್ರೀಮ್ ಆಸೆಗೆ ಬಿತ್ತು ಲಕ್ಷದ ಪೆಟ್ಟು!
  • ಕೆಳಗಿಳಿದು ಹೋಗಲು ಸೋಮಾರಿತನ; ಮೊದಲ ಮಹಡಿಯಿಂದಲೇ ಬಿದ್ದ ಯುಪಿ ವ್ಯಕ್ತಿ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಉತ್ತರಪ್ರದೇಶ: ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬ ಹಾಡನ್ನು ಎಲ್ಲರೂ ಕೇಳಿರುತ್ತೆವೆ. ಆದರೆ ಉತ್ತರ ಪ್ರದೇಶದ ಪುರುಷನೊಬ್ಬ ಐಸ್​ಕ್ರೀಮ್​ವೊಂದನ್ನು ತೆಗೆದುಕೊಳ್ಳಲು (Ice Cream Viral Video) ಹೋಗಿ ಮನೆಯಿಂದ ನೆಲಕ್ಕೆ ಅಪ್ಪಳಿಸಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಈ ಘಟನೆಯು ಉತ್ತರಪ್ರದೇಶ ರಾಜ್ಯದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮನೆಯ ಮೊದಲ ಮಹಡಿಯಿಂದ ಬಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಒಬ್ಬ ವ್ಯಕ್ತಿಯ ಮನೆಯ ಮುಂದೆ ತಳ್ಳುಗಾಡಿಯಲ್ಲಿ ಐಸ್​ಕ್ರೀಮ್​ ಮಾರುವವನ ಸಾಗುತ್ತಿದ್ದಾನೆ. ದೇಶದಲ್ಲಿ ಎಲ್​ ನಿನೋ ಎಫೆಕ್ಟ್​ನಿಂದ ಮಳೆಗಾಲ ವಿಳಂಬವಾದ ಹಿನ್ನಲೆ, ಸೂರ್ಯನ ಶಾಖವನ್ನು ತಾಳಲಾರದ ವ್ಯಕ್ತಿ ಐಸ್​ಕ್ರೀಮ್​ ಕೊಳ್ಳಲು ಮುಂದಾಗಿದ್ದಾನೆ.
ಮನೆಯ ಮೊದಲ ಮಹಡಿಯಿಂದ ಐಸ್​​ಕ್ರೀಮ್​ ಮಾರುವವನಿಗೆ ಹಣವನ್ನು ನೀಡಿದ್ದಾನೆ. ಆದರೆ ಐಸ್​ಕ್ರೀಮ್​ ಪಡೆಯಲು ಬಗ್ಗಿದಾಗ, ಕಾಲು ಜಾರಿ ನೆಲಕ್ಕೆ ಅಪ್ಪಳಿಸಿದ್ದಾನೆ. ಕೆಳಗೆ ಬಿದ್ದ ಪರಿಣಾಮ ತೀವ್ರ ನೋವು ಉಂಟಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ತಿಳದು ಬಂದಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಬಾಕ್ಸ್​ ತುಂಬಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹತ್ತು ರೂಪಾಯಿ ಐಸ್​ಕ್ರೀಮ್​ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚಾಯಿತು ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
ಕೆಳಗಿಳಿದು ಹೋಗಿ ಐಸ್​​ಕ್ರೀಮ್​ ತೆಗೆದುಕೊಂಡಿದ್ದರೆ, ಕೈ-ಕಾಲುಗಳು ಮುರಿಯುತ್ತಿರಲಿಲ್ಲ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನೋಡಿ ಒಂದು ಸಣ್ಣ ನಿರ್ಲಕ್ಷ್ಯ ಎಷ್ಟು ದುಬಾರಿಯಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜನ್ಸೀಸ್​).