ರಾಜಸ್ಥಾನದ ಟೊಂಕ್‌ನಲ್ಲಿ ಮದ್ಯದಂಗಡಿಗೆ ನುಗ್ಗಿದ ಚಿರತೆ!
- ರಾಜಸ್ಥಾನದ ಟೊಂಕ್‌ನಲ್ಲಿ ಮದ್ಯದಂಗಡಿಗೆ ನುಗ್ಗಿದ ಚಿರತೆ!
- ಮೂವರ ಮೇಲೆ ಭೀಕರ ದಾಳಿ
- 5 ಗಂಟೆಗಳ ಬ್ರೇಕ್-ಲೆಸ್ ಕಾರ್ಯಾಚರಣೆ ಬಳಿಕ ಕೊನೆಗೂ ವನ್ಯಮೃಗ ಸೆರೆ
ರಾಜಸ್ಥಾನ: ಕಾಡಿನಿಂದ ತಪ್ಪಿಸಿಕೊಂಡಿದ್ದ ಚಿರತೆಯೊಂದು ಮದ್ಯದಂಗಡಿ (Leopard In Wine Shop) ಗೆ ನುಗ್ಗಿದ ಘಟನೆ ಸೋಮವಾರ (ಜು.20) ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮದ್ಯದಂಗಡಿಗೆ ನುಗ್ಗಿದ್ದ ಚಿರತೆಯು ಮೂರು ಜನರ ಮೇಲೆ ದಾಳಿ ನಡೆಸಿದ್ದು, ಸತತ ಐದು ಗಂಟೆ ಕಾರ್ಯಾಚರಣೆ ನಂತರ ಚಿರತೆಯನ್ನು ಅರಣ್ಯ ಇಲಾಖೆ ಅವರು ವಶಕ್ಕೆ ಪಡೆದಿದ್ದಾರೆ.
ಮೂರು ಜನರ ಮೇಲೆ ಎರಗಿದ ಚಿರತೆ!
ಮಾಹಿತಿ ಪ್ರಕಾರ, ಈ ಚಿರತೆಯು ಕಾಡಿನಿಂದ ದಾರಿ ತಪ್ಪಿ ನಗರದ ಮರದ ಪೊದೆಯೊಂದರಲ್ಲಿ ಅಡಗಿ ಕುಳಿತಿದೆ. ಇದನ್ನು ಪತ್ತೇಹಚ್ಚಲು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ರಾಕೇಶ್ ಮಾಲಿ ಎಂಬಾತನ ಮೇಲೆ ಎರಗಿದ ಚಿರತೆ ಆತನ ಕಾಲನ್ನು ಗಾಯಗೊಳಿಸಿ ಮಾರುಕಟ್ಟೆ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.
ಅಲ್ಲಿಂದ ಓಡಿಹೋದ ಚಿರತೆ, ಮದ್ಯದಂಗಡಿಯಲ್ಲಿ ಕುಳಿತ್ತಿದ್ದ ಫತೇ ಲಾಲ್ ಕೊಲಿ ಹಾಗೂ ವೇಟರ್ ಸಂಜಯ್ ಗರ್ಜರ್ ಎನ್ನುವವರ ಮೇಲೆ ದಾಳಿ ಮಾಡಿದೆ. ಈ ಸಂಜಯ್ ಗರ್ಜರ್ ಕೂಡಲೇ ಚಿರತೆಯಿಂದ ಪಾರಾಗಿ ಅಂಗಡಿ ಬಾಗಿಲನ್ನು ಮುಚ್ಚಿ ಓಡಿಹೋಗಿದ್ದಾನೆ.
5 ಗಂಟೆ ಕಾರ್ಯಾಚರಣೆ!
ನಂತರ ಈ ಚಿರತೆ ದಾಳಿ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಟೊಂಕ್ ವಲಯ ಅರಣ್ಯಾಧಿಕಾರಿಗಳು, ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯ ಪಶುವೈದ್ಯಾಧಿಕಾರಿ ಅಶೋಕ್ ತನ್ವಾರ್ ಈ ಚಿರತೆಯ ತಪಾಸಣೆ ನಡೆಸಿದ್ದು, ಇದೊಂದು ಗಂಡು ಚಿರತೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಚಿರತೆಗಳ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ, ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್).