ವೈರಲ್​ ಶೆಫ್​ ಕಿಸ್​  
ಟ್ರೆಂಡಿಂಗ್

ಶೆಫ್‌ನಿಂದ ಸಿಕ್ಕಿತು ಕಿಸ್: ಇದು ಇಮ್ರಾನ್ ಹಶ್ಮಿ ಹೋಟೆಲಾ ಎಂದ ನೆಟ್ಟಿಗರು; ವಿಡಿಯೋ ವೈರಲ್​! Viral Video

ಪುಣೆ: ಈಗೀನ ರೆಸ್ಟೋರೆಂಟ್​ ಮತ್ತು ಹೋಟೆಲ್​ಗಳಲ್ಲಿ ಸಾಂಪ್ರದಾಯಿಕ ಅಡುಗೆಗಳಿಗಿಂತ ಫ್ಯಾನ್ಸಿ ಅಡುಗೆಗಳನ್ನು ನಾವು ಹೆಚ್ಚಾಗಿ ಕಾಣುತ್ತೆನೆ. ಇತ್ತೀಚೆಗೆ ಪುಣೆಯ ಒಂದು ರೆಸ್ಟೋರೆಂಟ್ ಇಂತಹದ್ದೆ ಒಂದು ಫ್ಯಾನ್ಸಿ ಪದಾರ್ಥದಿಂದಾಗಿ ಸಖತ್​ ವೈರಲ್​ (Viral Video) ಆಗುತ್ತಿದೆ.

28 ಮಿಲಿಯನ್ ವೀಕ್ಷಣೆ ಕಂಡ ರೀಲ್!

ದರ್ಶನ ಮತ್ತು ರಿಷವ್ ಎಂಬ 'flexinggoat' ಇನ್‌ಸ್ಟಾಗ್ರಾಮ್ ಖಾತೆಯ ಕ್ರಿಯೇಟರ್‌ಗಳು ಪುಣೆಯ ಒಂದು ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಊಟ ಮುಗಿದ ಮೇಲೆ ಏನಾದರೂ ಸ್ವೀಟ್ ತಿನ್ನೋಣ ಅಂತ ಮೆನುವಿನಲ್ಲಿ ಹುಡುಕುತ್ತಿದ್ದಾಗ ಅವರಿಗೆ ಕಂಡಿದ್ದು ಅಡುಗೆಯವರ ಮುತ್ತು (Chef's Kiss) ಎಂಬ ಹೆಸರು. ವಿಭಿನ್ನವಾಗಿದೆಯಲ್ಲ ಅಂತ ಕುತೂಹಲದಿಂದ ಆರ್ಡರ್ ಕೂಡ ಮಾಡಿದರು. ಆದರೆ ಸರ್ವರ್ ತಂದು ಇಟ್ಟ ತಟ್ಟೆಯನ್ನು ನೋಡಿದಾಗ ದಂಪತಿಗಳು ಶಾಕ್​ ಆಗಿದ್ದಾರೆ.
ತಟ್ಟೆಯ ಮೇಲೆ ಕೆಂಪು ಕೆಂಪಾದ, ದಪ್ಪನೆಯ ತುಟಿಗಳ ಆಕಾರದ ಸಿಹಿ ತಿನಿಸು ಅಕ್ಷರಶಃ ಯಾರೋ ಮುತ್ತು ಕೊಡಲು ಬರುತ್ತಿದ್ದಾರೆ ಎನ್ನುವಂತೆ ಇತ್ತು. ಇದನ್ನು ನೋಡಿದ ರಿಷವ್ ಮತ್ತು ದರ್ಶನ ನಗಬೇಕೋ ಅಥವಾ ಶಾಕ್ ಆಗಬೇಕೋ ತಿಳಿಯದೆ ಹೌಹಾರಿ ಹೋಗಿದ್ದಾರೆ. ಈ ವಿಡಿಯೋ ಈಗ 2.8 ಕೋಟಿಗೂ ಅಧಿಕ ವೀಕ್ಷಣೆ ಪಡೆದು ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಏನಿದು ಲಿಪ್‌ಸ್ಟಿಕ್ ತಿನಿಸು?

ನೋಡಲು ಅಪ್ಪಟ ಮನುಷ್ಯನ ತುಟಿಗಳಂತೆ ಇರುವ ಈ ಖಾದ್ಯವನ್ನು ರೆಡ್ ಬೆರ್ರಿ ಸೋರ್ಬೆಟ್ ನಿಂದ ತಯಾರಿಸಲಾಗಿದೆ. ಕೇವಲ ಆಕಾರ ಅಷ್ಟೇ ಅಲ್ಲ, ಅದರ ಸುತ್ತಲೂ ಪುಡಿ ಮಾಡಿದ ಬಿಸ್ಕೆಟ್ ಅಥವಾ ಕ್ರಂಬ್ಸ್ ಹಾಕಲಾಗಿದ್ದು, ಆ ದೃಶ್ಯ ನೋಡಲು ಭಯಾನಕ ಹಾಗೂ ಕುತೂಹಲಕಾರಿಯಾಗಿತ್ತು.
ವಿಡಿಯೋದಲ್ಲಿ ರಿಷವ್ ನನಗೆ ಅಕ್ಷರಶಃ ಶೆಫ್ ಕಡೆಯಿಂದ ಮುತ್ತು ಸಿಕ್ಕಿತು ಎಂದು ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಮುತ್ತು ಕೊಟ್ಟವರು ಗಂಡೋ ಅಥವಾ ಹೆಣ್ಣೋ ಎಂಬುದು ನನ್ನ ಹೆಂಡತಿಯ ಏಕೈಕ ಚಿಂತೆ ಎಂದು ಕಿಚಾಯಿಸಿದ್ದಾರೆ.

ಕಾಮೆಂಟ್ ಸೆಕ್ಷನ್​ಗೆ ಎಂಟ್ರಿ ಕೊಟ್ಟ ಶೆಫ್!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶೆಫ್ ಕಾಮೆಂಟ್ ಸೆಕ್ಷನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಯ್, ಈ ಐಡಿಯಾ ನನ್ನದೇ ಅತಿಥಿಗಳಿಗೆ ಪ್ರೀತಿಯನ್ನು ಹಂಚಲು ನನಗಿರುವ ಏಕೈಕ ದಾರಿ ಇದು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಒಬ್ಬ ಬಳಕೆದಾರರು, ನಾನು ಸ್ವೀಟ್ ಆರ್ಡರ್ ಮಾಡಿದಾಗ ಹೀಗೆ ಬಂದರೆ ಭಯ ಅನ್ಸುತ್ತೆ ಮಾರಾಯ್ರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಬಾಲಿವುಡ್‌ನ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿಯನ್ನು ನೆನಪಿಸಿಕೊಂಡು, ಶೆಫ್ ಏನಾದ್ರೂ ಇಮ್ರಾನ್ ಹಶ್ಮಿ ಅವರ ದೊಡ್ಡ ಅಭಿಮಾನಿನಾ? ಎಂದು ಪ್ರಶ್ನಿಸಿದ್ದಾರೆ.

ವೈರಲ್ ಆಹಾರಗಳ ಟ್ರೆಂಡ್

ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳು ಕೇವಲ ರುಚಿಗೆ ಮಾತ್ರವಲ್ಲದೆ, ಪ್ರೆಸೆಂಟೇಶನ್ ಗೆ ಹೆಚ್ಚಿನ ಒತ್ತು ನೀಡುತ್ತಿವೆ. ಈ Chef's Kiss ಅಂತಹ ಒಂದು ವಿಭಿನ್ನ ಪ್ರಯತ್ನ. ಸದ್ಯಕ್ಕೆ ಪುಣೆಯ ಈ ಹೋಟೆಲ್ ಯಾವುದು ಎಂದು ತಿಳಿಯಲು ಸಾವಿರಾರು ಜನರು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ, ಆಹಾರ ಎಂಬುದು ಹೊಟ್ಟೆ ತುಂಬಿಸುವುದು ಮಾತ್ರವಲ್ಲ, ಕೆಲವೊಮ್ಮೆ ಮನರಂಜನೆ ಮತ್ತು ಆಶ್ಚರ್ಯವನ್ನೂ ನೀಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುವುದು ನೆಟ್ಟಿಗರ ಅಂಭೋಣವಾಗಿದೆ, (ಏಜನ್ಸೀಸ್​).