ಕ್ರೀಡೆ

ಆಸ್ಟ್ರೇಲಿಯನ್​ ಓಪನ್​ನಲ್ಲಿ ಇಂದು ಮಹಿಳಾ ಸಿಂಗಲ್ಸ್​ ಫೈನಲ್; ಪ್ರಶಸ್ತಿಗಾಗಿ ಸಬಲೆಂಕಾ-ಝೆಂಗ್​ ಕಾದಾಟ​

ಮೆಲ್ಬೋರ್ನ್​: ಸತತ 2ನೇ ಬಾರಿ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಬೆಲಾರಸ್​ ತಾರೆ ಅರಿನಾ ಸಬಲೆಂಕಾ ಮತ್ತು ಚೀನಾದ ಯುವ ಆಟಗಾರ್ತಿ ಕ್ವಿನ್​ವೆನ್​ ಝೆಂಗ್​ ನಡುವಿನ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯ ಶನಿವಾರ ನಡೆಯಲಿದೆ.

25 ವರ್ಷದ ಸಬಲೆಂಕಾ ಒಂದೂ ಸೆಟ್​ ಸೋಲದೆ ಪ್ರಶಸ್ತಿ ಸುತ್ತಿಗೇರಿದ ವಿಶ್ವಾಸದಲ್ಲಿದ್ದರೆ, 21 ವರ್ಷ ಝೆಂಗ್​ ಗ್ರಾಂಡ್​ ಸ್ಲಾಂ ಗೆದ್ದ ಚೀನಾದ 2ನೇ ಆಟಗಾರ್ತಿ ಎನಿಸುವ ತವಕದಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸೋನಿ ಟೆನ್​