ಮುಂಬೈ: ಟೀಮ್ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್-ಧನಶ್ರೀ ವಿಚ್ಛೇದನ ಸುದ್ದಿ ದಿನ ಕಳೆದಂತೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಇದೀಗ ಯಜುವೇಂದ್ರ ಚಹಲ್ (Yuzvendra Chahal) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಣ್ಣಗಾಗಿದ್ದ ಡಿವೋರ್ವ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.
ಪ್ರೇಮಿಗಳ ದಿನಾಚರಣೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯಜುವೇಂದ್ರ ಚಹಲ್ (Yuzvendra Chahal), ನೀನಿರುವಂತೆಯೇ ನೀನು ಸಾಕು! ಯಾರೂ ನಿಮಗೆ ಅನ್ಯಥಾ ಭಾವಿಸಲು ಬಿಡಬೇಡಿ ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ಧಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಇದು ವಿಚ್ಛೇನದ ವಿಚಾರವಾಗಿಯೇ ಇರಬೇಕು ಎಂದು ಕಮೆಂಟ್ ಹಾಕುತ್ತಿದ್ದಾರೆ. ಆದರೆ, ಯಾವ ಅರ್ಥದಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಹಾಕುವ ಮೂಲಕ ನೆಚ್ಚಿನ ಆಟಗಾರನಿಗೆ ಧೈರ್ಯ ತುಂಬು ಕೆಲಸ ಮಾಡುತ್ತಿದ್ದಾರೆ.
ನನ್ನ ಎಲ್ಲಾ ಅಭಿಮಾನಿಗಳಿಗೆ ಅವರ ಅಚಲವಾದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ಇಲ್ಲದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದರೆ ಈ ಪ್ರಯಾಣವು ಇನ್ನೂ ದೂರವಿದೆ. ನನ್ನ ದೇಶಕ್ಕೆ ಕೊಡುಗೆ ನೀಡಲು ಅನೇಕ ಅದ್ಭುತ ಓವರ್ಗಳು ಬಾಕಿ ಉಳಿದಿವೆ. ನನ್ನ ತಂಡ ಹಾಗೂ ಅಭಿಮಾನಿಗಳಿಗೆ ನಾನು ಒಬ್ಬ ಮಗ, ಸಹೋದರ ಮತ್ತು ಸ್ನೇಹಿತರನಾಗಿದ್ದೇನೆ.
ವಿಶೇಷವಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ನಿಜವಾಗಿರಬಹುದಾದ ಅಥವಾ ಇಲ್ಲದೆಯೂ ಇರಬಹುದು. ವೈಯಕ್ತಿಕ ವಿಚಾರದ ಬಗ್ಗೆ ಊಹಾಪೋಹ ಹರಡುವುದನ್ನು ನಾನು ಗಮನಿಸಿದ್ದೇನೆ. ಏಕೆಂದರೆ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟುಮಾಡಿದೆ. ನನ್ನ ಕುಟುಂಬದ ಮೌಲ್ಯಗಳು ನನಗೆ ಒಳ್ಳೆಯದನ್ನು ಮಾಡಲು ಹೇಳಿಕೊಟ್ಟಿದೆ. ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಸಾಧಿಸಲು ಶ್ರಮಿಸಿ. ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸು, ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವ ಬದಲು, ಮತ್ತು ನಾನು ದೈವಿಕ ಆಶೀರ್ವಾದಗಳೊಂದಿಗೆ ಈ ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ, ನಾನು ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಶಾಶ್ವತವಾಗಿ ಶ್ರಮಿಸುತ್ತೇನೆ ಎಂದು ಯಜುವೇಂದ್ರ ಚಹಲ್ (Yuzvendra Chahal) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.