2025 ರ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಯುಜುವೇಂದ್ರ ಚಾಹಲ್
ಪಾತ್ರರಾಗಿದ್ದಾರೆ.
ಚೆನ್ನೈನ ಚೆಕಾಪ್ನಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಈ ಸ್ಪಿನ್ನರ್ ಯುಜುವೇಂದ್ರ ಚಾಹಲ್ 32 ರನ್ ನೀಡಿ 4 ವಿಕೆಟ್ ಪಡೆದರು.
ತಮ್ಮ ಮೊದಲ ಎರಡು ಓವರ್‌ಗಳಲ್ಲಿ 23 ರನ್‌ಗಳನ್ನು ಕೊಟ್ಟ ಚಾಹಲ್, 19 ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಆರು ರನ್ ಗಳಿಸಿದರೂ, ಎರಡನೇ ಎಸೆತದಲ್ಲಿ ಅವರು ಎಂಎಸ್ ಧೋನಿ ಅವರ ವಿಕೆಟ್ ಪಡೆದರು. ಬಳಿಕ ಮೂರು ಬಾಲ್ಗಳಿಗೆ ದೀಪಕ್ ಹೂಡಾ , ಅನ್ಶುಲ್ ಕಾಂಬೋಜ್ ಮತ್ತು ನೂರ್ ಅಹ್ಮದ್ ಅವರನ್ನು ವಿಕೆಟ್ ಪಡೆದುಕೊಳ್ಳುವ ಮೂಲಕ 2025ರ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ವಾಸ್ತವವಾಗಿ, ಐಪಿಎಲ್ 2023 ರ ನಂತರ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಇವರು.
ಇನ್ನು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ತಂಡ ನಿಗದಿತ 19.2 ಓವರ್‌ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 190 ರನ್ ಪೇರಿಸಿದೆ. (ಏಜೆನ್ಸೀಸ್)