Yuzvendra Chahal: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಹಣಾಹಣಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಎರಡು ತಂಡಗಳು ಭಾರೀ ಪೈಪೋಟಿಗೆ ಇಳಿದಿವೆ. ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ತಮ್ಮತ್ತ ಸೆಳೆದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್, ದುಬೈ ಸ್ಟೇಡಿಯಂನಲ್ಲಿ ಫ್ಯಾನ್ಸ್ಗಳ ಮಧ್ಯೆಯೇ ಕುಳಿತು ಪಂದ್ಯ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಗೊಂದಲ, ಸಂದೇಹ ನಿವಾರಣೆಗೆ ಸಹಾಯವಾಣಿ ಆರಂಭ: ಏನೆಲ್ಲ ಪ್ರಶ್ನೆಗಳನ್ನು ಕೇಳಬಹುದು?
ಇಲ್ಲಿ ಚಹಲ್ ಒಬ್ವರೇ ಕುಳಿತು ಭಾರತ ತಂಡವನ್ನು ಪ್ರೋತ್ಸಾಹಿಸಿದ್ದರೆ ಅಭಿಮಾನಿಗಳು ಸುಮ್ಮನಾಗುತ್ತಿದ್ದರು. ಆದರೆ, ಸ್ಟೈಲಿಶ್ ಲುಕ್ನಲ್ಲಿ ಕುಳಿತ್ತಿದ್ದ ಯುವತಿಯೊಂದಿಗೆ ಚಹಲ್ ಪ್ರತ್ಯಕ್ಷವಾಗಿದ್ದು ಸದ್ಯ ನೋಡುಗರ ಹುಬ್ಬೇರಿಸಿದೆ. ಕ್ಯಾಮರಾಮ್ಯಾನ್ ಕಣ್ಣಿಗೆ ಇಬ್ಬರು ಸೆರೆಯಾಗಿದ್ದೇ ತಡ, ಜೋಡಿಯ ಫೋಟೋ, ವಿಡಿಯೋ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಇವರಾರು ಚಹಲ್ ಹೇಳಿ? ಎಂದು ಕಮೆಂಟ್ಗಳ ಸುರಿಮಳೆ ಹರಿಸಿದ್ದಾರೆ.
ಅಸಲಿಗೆ ದುಬೈನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ, ಚಹಲ್ ಜತೆಗೆ ಸ್ಟ್ಯಾಂಡ್ಸ್ನಲ್ಲಿ ಕಾಣಿಸಿಕೊಂಡ ಮಿಸ್ಟರಿ ಗರ್ಲ್ ಬೇರಾರು ಅಲ್ಲ ಅವರೇ ಮಹ್ವಾಶ್. ಆಕೆ ಹೆಸರಾಂತ ರೇಡಿಯೋ ಜಾಕಿ. ಧನಶ್ರೀ ವರ್ಮಾ ಜತೆಗಿನ ವಿಚ್ಛೇದನ ವಿಚಾರ ಜೋರಾದ ಬೆನ್ನಲ್ಲೇ ಚಹಲ್ ಯುವತಿಯೊಂದಿಗೆ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾಗಿದ್ದನ್ನು ಕಂಡು ಅಭಿಮಾನಿಗಳು ಮನಬಂದಂತೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಷಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ,(ಏಜೆನ್ಸೀಸ್).