ನವದೆಹಲಿ: ತಮ್ಮ ತೀಕ್ಷ್ಣ ಮಾತುಗಳ ಮೂಲಕವೇ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕುರಿತಾಗಿ ಮಾತನಾಡಿರುವ ಗೌತಮ್ ನೀನೇನು ಹೊಸಬನಲ್ಲ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗೌತಮ್, ಆತ ಎಂತಹ ಆಟಗಾರ ಎಂದು ಅಂದಾಜಿಸಲು ಐದು ನಿಮಿಷಗಳು ಸಾಕು ಸ್ಯಾಮ್ಸನ್ ನಾಯಕತ್ವದಿಂದ ಅವರಿಗೆ ಅವಕಾಶ ಸಿಕ್ಕರೆ ಅದನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಯಾಮ್ಸನ್ ನೀವು ಈಗ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದೀರ. ನಿಮಗೆ ಅವಕಾಶಗಳು ಸಿಕ್ಕರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ ಎಂಬುದರ ಬಗ್ಗೆ ಮೊದಲು ಖಚಿತಪಡಿಸಿಕೊಳ್ಳಬೇಕು. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿರುವ ನೀವು ತಂಡಕ್ಕೆ ಹೊಸಬರೇನಲ್ಲ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನೀವು ಈಗ ವಿಶ್ವಕಪ್ ಆಡುವ ಅವಕಾಶವನ್ನು ಪಡೆದಿದ್ದೀರಾ.
ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಿಂದ ನೀವು ಪ್ರವರ್ಧಮಾನಕ್ಕೆ ಬಂದಾಗ ಇಡೀ ಜಗತ್ತು ನಿಮ್ಮನ್ನು ವೀಕ್ಷಿಸುತ್ತದೆ. ಆತ ಎಂತಹ ಆಟಗಾರ ಎಂದು ನಾನು ಐದು ನಿಮಿಷದಲ್ಲಿ ಅಂದಾಜಿಸಬಲ್ಲೇ. ನಾನು ನೋಡಿದಂರೆ ಸ್ಯಾಮ್ಸನ್ ಕ್ಯಾಪ್ಟನಿ ವಿಚಾರದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ. ಮುಂಬರುವ ವಿಶ್ವಕಪ್ನಲ್ಲಿ ನಾಯಕತ್ವದಿಂದ ಅವರಿಗೆ ಅವಕಾಶ ಸಿಕ್ಕರೆ ಅದನ್ನು ಪ್ರತಿಬಿಂಬಿಸುತ್ತದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.