ಕ್ರೀಡೆ

ಹೆಂಡತಿಯರಿಗೆ ನಿಜವಾಗಿಯೂ... ಬಿಸಿಸಿಐ ನೂತನ ನಿಯಮಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ Yograj Singh

ನವದೆಹಲಿ: ಈ ಹಿಂದೆ ಲೆಜೆಂಡರಿ ಆಟಗಾರ ಕಪಿಲ್​ ದೇವ್​ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಸುದ್ದಿಯಾಗಿದ್ದ ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್ (Yograj Singh) ಅವರ ತಂದೆ ಯೋಗರಾಜ್​ ಸಿಂಗ್ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಬಿಸಿಸಿಐ ಜಾರಿಗೆ ತಂದಿರುವ 10 ನಿಯಮಗಳ ಬಗ್ಗೆ ಮಾತನಾಡುವ ಭರದಲ್ಲಿ ವಿವಾದವನ್ನು ಹುಟ್ಟುಹಾಕಿದ್ದು, ಸದ್ಯ ಕ್ರೀಡಾವಲಯದಲ್ಲಿ ಇವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

IANSಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಯೋಗರಾಜ್​ ಸಿಂಗ್ (Yograj Singh), ಮುಂಬರುವ ಚಾಂಪಿಯನಸ್​ ಟ್ರೋಫಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿರುವುದನ್ನು ನೋಡಿ ನನಗೆ ನಿಜವಾಗಿಯೂ ಸಂತೋಷವಾಯಿತು. ಆಟಗಾರರಿಂದಲೇ ಮಾತ್ರ ಈ ರೀತಿಯ ತಂಡ ಆಯ್ಕೆ ಮಾಡಲು ಸಾಧ್ಯ. ಇಂಗ್ಲೆಂಡ್​ ವಿರುದ್ಧದ ಸರಣಿಗೂ ಸಮತೋಲಿತ ತಂಡವನ್ನು ಹೆಸರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ನನಗೆ ತುಂಬಾ ಸಂತೋಷವಾಗಿದೆ, ನಾನು ಆಯ್ಕೆದಾರರು ಮತ್ತು ಬಿಸಿಸಿಐ ಅನ್ನು ಅಭಿನಂದಿಸಲು ಬಯಸುತ್ತೇನೆ. ಕ್ರಿಕೆಟ್ ಆಡಿದವರೇ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ಸರಿಯಾದ ಆಟಗಾರರನ್ನು ಉಳಿಸಿಕೊಂಡಿದ್ದಾರೆ, ರೋಹಿತ್ ತಂಡದ ನಾಯಕರಾಗಿರುತ್ತಾರೆ ಮತ್ತು ಶುಭಮನ್ ಗಿಲ್ ಅವರು ಉಪನಾಯಕರಾಗಿರುತ್ತಾರೆ ಏಕೆಂದರೆ ಅವರು ಭವಿಷ್ಯದಲ್ಲಿ ಮುನ್ನಡೆಸಲಿದ್ದಾರೆ. 

ಕಠಿಣ ಸಮಯ ಎದುರಿಸುತ್ತಿರುವ ಆಟಗಾರರಿಗೆ ತಮ್ಮನ್ನು ನಿರೂಪಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದ್ದು, ನಾವೆಲ್ಲರೂ ಅವರನ್ನು ಬೆಂಬಲಿಸಬೇಕಿದೆ. ಅಭಿಷೇಕ್​ ಶರ್ಮ ಭವಿಷ್ಯದಲ್ಲಿ ದೊಡ್ಡ ಆಟಗಾರನಾಗುವುದರಲ್ಲಿ ಯಾವುದೇ ಸಂಶಯ ಬೇಡ. ಆತನಿಗೂ ತಂಡದಲ್ಲಿ ಸ್ಥಾನ ಕೊಡಬೇಕಾಗಿತ್ತು. ಕಲಿಯಲು ಆತನಿಗೆ ಇದು ಸರಿಯಾದ ಸಮಯ ಎಂಬುದು ನನ್ನ ಅನಿಸಿಕೆ.

ಇನ್ನೂ ಬಿಸಿಸಿಐನ 10 ನಿಯಮಗಳ ಜಾರಿಗೆ ಪ್ರತಿಕ್ರಿಯಿಸಿ, ಒಬ್ಬ ಆಟಗಾರ ತನ್ನ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾನೆ ಎಂದರೆ ಕುಟುಂಬದವರನ್ನು ಕರೆದುಕೊಂಡು ಹೋಗುವುದರಲ್ಲಿ ಏನು ಪ್ರಯೋಜನವಿದೆ. ಒಂದು ವೇಳೆ ಆತ ತನ್ನ ಕುಟುಂಬದವರನ್ನು ಕರೆದುಕೊಂಡು ಹೋದರೆ ಆತನ ಏಕಾಗ್ರತೆ ಹಾಳಾಗುತ್ತದೆ. ನೀವು ನಿವೃತ್ತರಾದ ನಂತರ ಏನು ಬೇಕಾದರೂ ಮಾಡಬಹುದು. ಆದರೆ, ನೀವು ನಿಮ್ಮ ದೇಶಕ್ಕಾಗಿ ಆಡುತ್ತಿರುವಾಗ ಕುಟುಂಬದವರು, ಅಡಿಗೆಯವರನ್ನು ನಿಮ್ಮ ಜೊತೆ ಕರೆದುಕೊಂಡು ಹೋಗುವ ಮೂಲಕ ನಿಮ್ಮ ಮೇಲೆ ಅದು ಹೆಚ್ಚಿನ ಹೊರೆ ಬೀಳುತ್ತದೆ. 

ಹೆಂಡತಿಯರಿಗೆ ನಿಜವಾಗಿಯೂ ಕ್ರಿಕೆಟ್​ ಬಗ್ಗೆ ಏನು ತಿಳಿದಿಲ್ಲ. ನೀವು ತಂಡದ ಪರ ಆಡುತ್ತಿದ್ದೀರ ಎಂದರೆ ಅದೇ ನಿಮ್ಮ ಕುಟುಂಬ ಎಂದು ಭಾವಿಸಬೇಕು. ಅದರ ಬದಲಾಗಿ ಹೆಂಡ್ತಿ-ಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಈ ನಿಯಮವನ್ನು ನಾನು ವಿರೋಧಿಸುತ್ತೇನೆ ಎಂದು ಯುವರಾಜ್​ ಸಿಂಗ್ ಅವರ ತಂದೆ ಯೋಗರಾಜ್​ ಸಿಂಗ್ (Yograj Singh) IANSಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.