ಕ್ರೀಡೆ

ವಿಶ್ವ ರ‍್ಯಾಪಿಡ್ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಕೊನೆರು ಹಂಪಿ ರನ್ನರ್​ಅಪ್​

ಸಮರ್ಕಂಡ್​ (ಉಜ್ಬೇಕಿಸ್ತಾನ): ಭಾರತದ ಗ್ರಾಂಡ್​ ಮಾಸ್ಟರ್​ ಕೊನೆರು ಹಂಪಿ, ವಿಶ್ವ ರ‍್ಯಾಪಿಡ್  ಮಹಿಳಾ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ರನ್ನರ್​ಅಪ್​ ಸ್ಥಾನ ಗಳಿಸಿದ್ದಾರೆ.

11 ಸುತ್ತಿನ ಪಂದ್ಯಗಳ ಬಳಿಕ ರಷ್ಯಾದ ಯುವ ಆಟಗಾರ್ತಿ ಅನಸ್ತಸಿಯಾ ಬೊಂಡ್ನರುಕ್​ ಜತೆ 8.5 ಅಂಕಗಳ ಸಮಬಲ ಸಾಧಿಸಿದ ಕೊನೆರು ಹಂಪಿ, ಟೈಬ್ರೇಕರ್​ನಲ್ಲಿ ಚಾಂಪಿಯನ್​ ಪಟ್ಟವನ್ನು ಬಿಟ್ಟುಕೊಟ್ಟರು. ಆದರೆ ಟೂರ್ನಿಯ ನಿಯಮ ಪ್ರಕಾರ, ಅಗ್ರಸ್ಥಾನದಲ್ಲಿ ಸಮಬಲ ಸಾಧಿಸಿದ ಕೊನೆರು ಹಂಪಿ-ಬೊಂಡ್ನರುಕ್​ ಇಬ್ಬರೂ ತಲಾ 46 ಲಕ್ಷ ರೂ. ಬಹುಮಾನ ಮೊತ್ತ ಪಡೆದರು.