ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕನಾಗಿದ್ದ, ಕೂಲ್ ಕ್ಯಾಪ್ಟನ್ ಎಂದೇ ಹೆಸರು ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಧೋನಿ ನಿವೃತ್ತಿ ಬಳಿಕ ಹಲವು ಗಣ್ಯರು ಸೋಷಿಯಲ್ ಮೀಡಿಯಾಗಳ ಮೂಲಕ ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಹಾಗೇ..ಇನ್ನು ಮುಂದೆ ಧೋನಿ ಆಟವನ್ನು ಮಿಸ್ ಮಾಡಿಕೊಳ್ಳುವುದಾಗಿ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ಗೆ ಮಹೇಂದ್ರ ಸಿಂಗ್ ಧೋನಿ ಕೊಟ್ಟ ಕೊಡುಗೆ ಅತ್ಯದ್ಭುತ ಎಂದು ಶ್ಲಾಘಿಸುತ್ತಿದ್ದಾರೆ.
ಗೃಹ ಸಚಿವ ಅಮಿತ್ ಷಾ ಅವರೂ ಕೂಡ ಎರಡು ಟ್ವೀಟ್ ಮಾಡಿ, ಮಾಹಿ..ಇನ್ನು ಮುಂದೆ ನಿಮ್ಮ ಹೆಲಿಕಾಪ್ಟರ್ ಶಾಟ್ನ್ನು ಇಡೀ ವಿಶ್ವ ಕ್ರಿಕೆಟ್ ಲೋಕ ಮಿಸ್ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಡಿಜೆ ಹಳ್ಳಿ ಗಲಭೆಕೋರರಿಗೆ ಶಿಕ್ಷೆ ಕೊಡಿಸುವುದನ್ನು ಬಿಟ್ಟು ನಮ್ಮ ಮೇಲ್ಯಾಕೆ ಆರೋಪ ಮಾಡುತ್ತೀರಿ?’-ಕಾಂಗ್ರೆಸ್ ಕಿಡಿ
ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಸಾಟಿಯಿಲ್ಲದಷ್ಟು ಕೊಡುಗೆ ನೀಡಿದ ಎಂ.ಎಸ್.ಧೋನಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿರುವ ವಿಶ್ವದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ನಾನೂ ಒಬ್ಬ. ಧೋನಿಯವರ ಶಾಂತ ಸ್ವಭಾವದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಅದೆಷ್ಟೋ ಸಹಾಯವಾಗಿದೆ. ಅವರ ನಾಯಕತ್ವದಲ್ಲಿ ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿದೆ ಎಂದು ನೆನಪಿಸಿಕೊಂಡರು.
ಧೋನಿ ತಮ್ಮ ವಿಭಿನ್ನ ಆಟದ ಶೈಲಿಯಿಂದ ಅನೇಕ ಅಭಿಮಾನಿಗಳ ಮನಸಲ್ಲಿ ಉಳಿಯಲಿದ್ದಾರೆ. ಅವರೀಗ ನಿವೃತ್ತಿಹೊಂದಿದ್ದರೂ ಭಾರತೀಯ ಕ್ರಿಕೆಟ್ನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುತ್ತಾರೆಂಬ ಭರವಸೆ ಇದೆ. ಅವರ ಭವಿಷ್ಯಕ್ಕೆ ಒಳಿತು ಬಯಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)