ನವದೆಹಲಿ: ಗುತ್ತಿಗೆ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡುವುದು ಕಡ್ಡಾಯವೆಂದು ಬಿಸಿಸಿಐ ಸೂಚಿಸಿರುವ ನಡುವೆಯೂ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ಕೊನೇ ಲೀಗ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಇದರಿಂದ ಅವರ ವೃತ್ತೀಜಿವನ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
ಆದರೆ ಬ್ಯಾಟಿಂಗ್ ತಾಂತ್ರಿಕತೆಯ ದೋಷ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಕಿಶನ್ ರೆಡ್ಬಾಲ್ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜತೆ ಬರೋಡದಲ್ಲಿ ಸದ್ಯ ಅಭ್ಯಾಸ ನಡೆಸುತ್ತಿರುವ 25 ವರ್ಷದ ಕಿಶನ್, ಮುಂಬೈನಲ್ಲಿ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ತನ್ನ ಉದ್ಯೋಗದಾತ ಆರ್ಬಿಐ ತಂಡದ ಪರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ ಎನ್ನಲಾಗಿದೆ.