ಮುಂಬೈ: ನವಿ ಮುಂಬೈನಲ್ಲಿರುವ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್(Women's World Cup Final) ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ 299 ರನ್‌ಗಳ ಗುರಿಯನ್ನು ನೀಡಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ, ಓಪನರ್ ಶಫಾಲಿ ವರ್ಮಾ 87 ರನ್ಸ್ ಮತ್ತು ದೀಪ್ತಿ ಶರ್ಮಾ (58) ಉತ್ತಮ ಇನ್ನಿಂಗ್ಸ್ ಆಡಿದರು. ಟೀಮ್ ಇಂಡಿಯಾ ಆರಂಭಿಕರಾದ ಶಫಾಲಿ ಮತ್ತು ಸ್ಮೃತಿ ಮಂಧಾನ ಉತ್ತಮ ಜತೆಯಾಟವು ಉತ್ತಮ ಆರಂಭವನ್ನು ನೀಡಿತು. ಅಲ್ಲದೆ, ಶಫಾಲಿ 78 ಎಸೆತಗಳಲ್ಲಿ 87 ರನ್ ಗಳಿಸಿದರೆ, ಸ್ಮೃತಿ 45 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಜೆಮಿಮಾ ರೋಡ್ರಿಗಸ್ 24 ರನ್ಸ್ ಮತ್ತು ಹರ್ಮನ್‌ಪ್ರೀತ್ ಕೌರ್ 20 ದೊಡ್ಡ ರನ್ ಗಳಿಸುವಲ್ಲಿ ವಿಫಲರಾದರು.
ನಂತರ ಬಂದ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್‌ಗಳ ಹೊರತಾಗಿಯೂ ಭಾರತವು ಡೆತ್ ಓವರ್‌ಗಳಲ್ಲಿ ಉತ್ತಮ ರನ್ಗಳಿಸುವಲ್ಲಿ ವಿಪಲವಾಯಿತು. ಭಾರತ ತನ್ನ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 298 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಕೊನೆಯ 10 ಓವರ್‌ಗಳಲ್ಲಿ ಉತ್ತಮವಾಗಿ ಆಟವಾಡಿ ಕೇವಲ 69 ರನ್‌ಗಳನ್ನು ಮಾತ್ರ ನೀಡಿತು.
ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಖಾಕಾ 58 ರನ್ ನೀಡಿ 3 ವಿಕೆಟ್ ಕಬಳಿಸಿದರು. ನಾಡಿನ್ ಡಿ ಕ್ಲರ್ಕ್,ಟ್ರೂಯಾನ್, ನಾನ್ಕುಲುಲೆಕೊ ಮ್ಲಾಬಾ,ತಲಾ 1 ವಿಕೆಟ್ ಪಡೆದರು.
2009 ರಲ್ಲಿ 167 ರನ್‌ಗಳು ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಧಿಕ ಮೊತ್ತವಾಗಿದೆ. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲಲು ದಾಖಲೆಯ ಚೇಸ್‌ನೊಂದಿಗೆ ಬರಬೇಕು. (ಏಜೆನ್ಸೀಸ್)