ಕ್ರೀಡೆ

ಈ ಸಲ ಕಪ್​ ನಮ್ದೇ; ಟಿ20 ವಿಶ್ವಕಪ್​ಗೆ ಮುನ್ನ ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ವಿಶ್ವಾಸ

ಮುಂಬೈ: ಕಳೆದ ಕೆಲ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಸನಿಹದಲ್ಲಿ ಮುಗ್ಗರಿಸಿರುವ ನಿರಾಸೆಯನ್ನು ಬದಿಗೊತ್ತಿ ಈ ಬಾರಿ ಟಿ20 ವಿಶ್ವಕಪ್​ ಜಯಿಸುವ ವಿಶ್ವಾಸವನ್ನು ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್​ 3ರಿಂದ ಯುಎಇಯಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್​ಗಾಗಿ ಮಂಗಳವಾರ ವಿಮಾನ ಏರುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹರ್ಮಾನ್​ಪ್ರೀತ್​, "ಇದು ನಮ್ಮ ಅತ್ಯುತ್ತಮ ತಂಡವಾಗಿದೆ. ದೀರ್ಕಾಲದಿಂದ ಈ ಆಟಗಾರ್ತಿಯರು ಜತೆಯಾಗಿ ಆಡುತ್ತಿದ್ದಾರೆ. ಕಳೆದ ಸಲ ಸ್ವಲ್ಪದರಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದೆವು. ಈ ಸಲ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿದ್ದೇವೆ. ಹಿಂದೆಂದಿಗಿಂತ ಹೆಚ್ಚು ಸನ್ನದ್ಧರಾಗಿದ್ದೇವೆ' ಎಂದರು. ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಕೋಚ್​ ಅಮೊಲ್​ ಮುಜುಮ್ದಾರ್​ ಮತ್ತು ಆಯ್ಕೆ ಸಮಿತಿ ಅಧ್ಯೆ ನೀತು ಡೇವಿಡ್​ ಕೂಡ ಹಾಜರಿದ್ದರು.

ಜುಲೈನಲ್ಲಿ ಏಷ್ಯಾಕಪ್ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಸೋತ ಬಲಿಕ ಭಾರತ ತಂಡ ಯಾವುದೇ ಪಂದ್ಯ ಆಡಿಲ್ಲ. ಆದರೆ ಈ ಸಮಯದಲ್ಲಿ ಬೆಂಗಳೂರಿನ ಎನ್​ಸಿಎಯಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿತ್ತು. ಟಿ20 ವಿಶ್ವಕಪ್​ನಲ್ಲಿ ಭಾರತ ಅ. 4ರಂದು ನ್ಯೂಜಿಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಅದಕ್ಕೆ ಮುನ್ನ ಸೆ.29ಕ್ಕೆ ವೆಸ್ಟ್​ ಇಂಡೀಸ್​ ಮತ್ತು ಅ.1ಕ್ಕೆ ದಣ ಆಫ್ರಿಕಾ ವಿರುದ್ಧ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.