ನವದಹೆಲಿ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಬಳಿಕ ಪರಿಸ್ಥಿತಿ ಇನ್ನು ಸುಧಾರಿಸದ ಕಾರಣ ಮಹಿಳಾ ಟಿ20 ವಿಶ್ವಕಪ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸ್ಥಳಾಂತರಿಸಲಾಗುವುದು ಎಂದು ಐಸಿಸಿ ಮಂಗಳವಾರ (ಆಗಸ್ಟ್ 20) ತಿಳಿಸಿದೆ.
ಇದನ್ನು ಓದಿ: ರೈಲಿನಲ್ಲಿ ನೀಡಿದ ದಾಲ್ನಲ್ಲಿ ಜೀವಂತ ಜಿರಳೆ ಪತ್ತೆ; ಪ್ರಯಾಣಿಕರ ಗಲಾಟೆ.. ಅಧಿಕಾರಿಗಳ ರಿಯಾಕ್ಷನ್ ಹೀಗಿತ್ತು..
ಈ ವಿಶ್ವಕಪ್ ಅಕ್ಟೋಬರ್ 3 ರಿಂದ 20ರವರೆಗೆ ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಈ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸಿದೆ ಎಂಬುದು ನಮಗೆ ತಿಳಿದಿದೆ. ಆದರೆ ಬಾಂಗ್ಲಾದೇಶದಲ್ಲಿ ಮಹಿಳಾ ಟಿ-20 ವಿಶ್ವಕಪ್ ಅನ್ನು ಆಯೋಜಿಸದಿರುವುದು ನಾಚಿಕಗೆಗೇಡಿನ ಸಂಗತಿಯಾಗಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜಿಯೋಫ್ ಅಲ್ಲಾರ್ಡೈಸ್ ಹೇಳಿದರು.
ಬಾಂಗ್ಲಾದೇಶ ಸರ್ಕಾರವು ವಿಶ್ವಸಂಸ್ಥೆಯ (UN) ಮೂಲಕ ಪಂದ್ಯಾವಳಿಯನ್ನು ಆಯೋಜಿಸಲು ಅಂತಿಮ ಪ್ರಯತ್ನವನ್ನು ಮಾಡಿತು. ಆದರೆ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ದೇಶಗಳು ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ತಮ್ಮ ನಾಗರಿಕರಿಗೆ ಪ್ರಯಾಣ ಸಲಹೆಗಳನ್ನು ನೀಡಿದ್ದರಿಂದ ಈ ಪ್ರಯತ್ನ ವ್ಯರ್ಥವಾಯಿತು ಎಂದು ಅವರು ತಿಳಿಸಿದರು.
ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಟಿ2-0 ಮಹಿಳಾ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 4ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ತಂಡ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.(ಏಜೆನ್ಸೀಸ್)