ಕ್ರೀಡೆ

VIDEO: ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ಬೆಂಗಳೂರು: ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮಂಗಳವಾರ 39ನೇ ವರ್ಷಕ್ಕೆ ಕಾಲಿಟ್ಟರು. ಭಾರತೀಯ ಕ್ರೀಡಾವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವೃತ್ತೀಜಿವನದಲ್ಲಿ ಬಹುತೇಕ ಸಂಧ್ಯಾಕಾಲದಲ್ಲಿರುವ ಧೋನಿ ಅವರಿಗೆ  ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೊರುತ್ತಿದ್ದಾರೆ. 2019ರ ಏಕದಿನ ವಿಶ್ವಕಪ್​ ಸೆಮಿೈನಲ್​ ಪಂದ್ಯವೇ ಧೋನಿ ಅವರ ಕಡೇ ಕ್ರಿಕೆಟ್​ ಪಂದ್ಯವಾಗಿದೆ. ಒಂದು ವರ್ಷದಿಂದ ಕ್ರಿಕೆಟ್​ನಿಂದ ದೂರ ಉಳಿದಿರುವ ಧೋನಿ, ಐಪಿಎಲ್​ಗೆ ಸಿದ್ಧವಾಗುತ್ತಿದ್ದರೂ ಕರೊನಾ ವೈರಸ್​ ಭೀತಿಯಿಂದಾಗಿ ಲೀಗ್​ ಕೂಡ ಅನಿಶ್ಚಿತತೆಯಲ್ಲಿ ಮುಳುಗಿದೆ.

ಭಾರತ ತಂಡದ ಮುಖ್ಯಕೋಚ್​ ರವಿ ಶಾಸ್ತ್ರಿ, ನಾಯಕ ವಿರಾಟ್​ ಕೊಹ್ಲಿ, ಟ್ವಿಟರ್​ನಲ್ಲಿ ವಿಶ್​ ಮಾಡಿದ್ದಾರೆ. ಯಂಗ್​ಸ್ಟರ್​ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಹ್ಯಾಪಿರ್ಬತ್​ಡೇ ಮಹಿ ಭಾಯ್​, ಉತ್ತಮ ಆರೋಗ್ಯ ಮತ್ತು ಯಾವಾಗಲೂ ಸಂತೋಷ ತುಂಬಿರಲಿ, ದೇವರು ಒಳ್ಳೆದು ಮಾಡಲಿ ಎಂದು ಕೊಹ್ಲಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಧೋನಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಸ್​ಕೆ ತಂಡದ ಆಲ್ರೌಂಡರ್​ ಡ್ವೇನ್​ ಬ್ರಾವೊ ಹೊಸ ಆಲ್ಬಂ ಬಿಡುಗಡೆ ಮಾಡಿದ್ದಾರೆ.

2019ರ ಜುಲೈ 9 ರಂದು ನಡೆದ ವಿಶ್ವಕಪ್​ ಸೆಮಿೈನಲ್​ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್​ ಎದುರು ಸೋಲನುಭವಿಸಿತು. ಇದು ಕೂಡ ಧೋನಿ ಪಾಲಿಗೆ ಕಡೇ ಪಂದ್ಯವಾಗಿದೆ. 2020ರ ಐಪಿಎಲ್​ ಸಿದ್ಧತೆಗಾಗಿ ಧೋನಿ ಚೆನ್ನೆ$ಗೆ ಆಗಮಿಸಿದರೂ ಕರೊನಾ ವೈರಸ್​ ಭೀತಿಯಿಂದಾಗಿ ಮಧ್ಯದಲ್ಲಿಯೇ ತವರಿಗೆ ವಾಪಸಾದರು. ಜಾರ್ಖಂಡ್​ ರಾಜಧಾನಿ ರಾಂಚಿ ಹೊರವಲಯದಲ್ಲಿರುವ ತಮ್ಮ ಾಮ್​ರ್ ಹೌಸ್​ನಲ್ಲಿ ಧೋನಿ, ಪತ್ನಿ ಸಾ ಸಿಂಗ್​ ಹಾಗೂ ಮಗಳು ಝೀವಾ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.