ಅಹಮದಾಬಾದ್: ಆಡಿದ ಮೊದಲ 2 ಆವೃತ್ತಿಗಳಲ್ಲಿ ಚಾಂಪಿಯನ್ ಮತ್ತು ರನ್ನರ್ಅಪ್ ಆಗಿರುವ ವಿಶೇಷ ಸಾಧನೆ ಗುಜರಾತ್ ತಂಡದ್ದಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ಮುಂಬೈಗೆ ವರ್ಗಾವಣೆಗೊಂಡಿರುವುದರಿಂದ, ಈ ಬಾರಿ ಯುವ ಬ್ಯಾಟರ್ ಶುಭಮಾನ್ ಗಿಲ್ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.
ನಾಯಕತ್ವದಲ್ಲಿ ಗಿಲ್ ಅನನುಭವಿಯಾಗಿದ್ದರೂ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಟಿ20 ಸ್ಪೆಷಲಿಸ್ಟ್ ಆ್ಘನ್ ಸ್ಪಿನ್ನರ್ ರಶೀದ್ ಖಾನ್ ತಂಡದಲ್ಲಿರುವುದು ಲಾಭದಾಯಕವಾಗಬಹುದು. ಪಾಂಡ್ಯ ಇಲ್ಲದೆಯೂ ಯಶಸ್ಸು ಕಾಣಬಲ್ಲೆ ಎಂಬುದನ್ನು ನಿರೂಪಿಸುವ ಸವಾಲು ಕೂಡ ತಂಡದ ಮುಂದಿದೆ. ಇನ್ನು ಅನುಭವಿ ವೇಗಿ ಮೊಹಮದ್ ಶಮಿ ಗಾಯದಿಂದಾಗಿ ಅಲಭ್ಯರಾಗಿರುವುದು ಪ್ರಮುಖ ಹಿನ್ನಡೆಯಾಗಿದೆ.
ತಂಡ: ಶುಭಮಾನ್ ಗಿಲ್(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಆರ್. ಸಾಯಿ ಕಿಶೋರ್, ಅಭಿನವ್ ಮನೋಹರ್, ವೃದ್ಧಿಮಾನ್ ಸಾಹ, ಜಯಂತ್ ಯಾದವ್, ವಿಜಯ್ ಶಂಕರ್, ಅಜ್ಮತ್ಉಲ್ಲಾ ಒಮರ್ಜಾಯಿ, ಮೋಹಿತ್ ಶರ್ಮ, ದರ್ಶನ್ ನಲಕಂಡೆ, ಸಾಯಿ ಸುದರ್ಶನ್, ರಶೀದ್ ಖಾನ್, ಮ್ಯಾಥ್ಯೂ ವೇಡ್, ಕೇನ್ ವಿಲಿಯಮ್ಸನ್, ಜೋಶ್ ಲಿಟಲ್, ಉಮೇಶ್ ಯಾದವ್, ನೂರ್ ಅಹ್ಮದ್, ಕಾರ್ತಿಕ್ ತ್ಯಾಗಿ, ಮಾನವ ಸುಥಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್, ಸುಶಾಂತ್ ಮಿಶ್ರಾ, ಶಾರುಖ್ ಖಾನ್.