ಕ್ರೀಡೆ

IPL 2024: ಡೆಲ್ಲಿ ಕ್ಯಾಪಿಟಲ್ಸ್​ಗೆ ಬಲ ತುಂಬುವರೇ ರಿಷಭ್​ ಪಂತ್?

ನವದೆಹಲಿ: ಭೀಕರ ಕಾರು ಅಪಘಾತದಲ್ಲಿ ಅದೃಷ್ಟದ ಬಲದೊಂದಿಗೆ ಬದುಕಿ ಬಂದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​, ಹಿಂದಿನ ಫಿಟ್ನೆಸ್​ ಮರಳಿ ಪಡೆಯಲು ದಿಟ್ಟ ಪರಿಶ್ರಮ ಪಟ್ಟ ಬಳಿಕ ಕೊನೆಗೂ 15 ತಿಂಗಳುಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜತೆಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕತ್ವವನ್ನೂ ಮರಳಿ ಪಡೆದಿರುವ ಅವರು ತಂಡಕ್ಕೂ ಸ್ಫೂರ್ತಿಯ ಅಂಶವಾಗಿದ್ದಾರೆ.

ಉಳಿದಂತೆ ತಂಡ ಕಳೆದ ಸಲಕ್ಕಿಂತ ಹೆಚ್ಚಿನ ಬದಲಾವಣೆಯನ್ನೇನೂ ಕಂಡಿಲ್ಲ. ವಾರ್ನರ್​, ಮಿಚೆಲ್​ ಮಾರ್ಷ್​, ಪೃಥ್ವಿ ಷಾರಂಥ ಬ್ಯಾಟಿಂಗ್​ ತಾರೆಯರ ಜತೆ ಕುಲದೀಪ್​ ಯಾದವ್​-ಅರ್​ ಪಟೇಲ್​ ಎಡಗೈ ಸ್ಪಿನ್​ ಜೋಡಿಯೂ ತಂಡದ ಪ್ರಮುಖ ಬಲ. ಇನ್ನುಳಿದಂತೆ ವೇಗದ ಬೌಲಿಂಗ್​ ವಿಭಾಗದಲ್ಲಿ ಫಿಟ್ನೆಸ್​ ಕಳವಳ ಹೆಚ್ಚಿರುವುದು ಹಿನ್ನಡೆಯಾಗಿದೆ.

ತಂಡ: ರಿಷಭ್​ ಪಂತ್​(ನಾಯಕ), ಡೇವಿಡ್​ ವಾರ್ನರ್​, ಪೃಥ್ವಿ ಷಾ, ಮಿಚೆಲ್​ ಮಾರ್ಷ್​, ಅಕ್ಷರ್​ ಪಟೇಲ್​, ಶೈ ಹೋಪ್​, ಟ್ರಿಸ್ಟಾನ್​ ಸ್ಟಬ್ಸ್​, ಜೇ ರಿಚರ್ಡ್​ಸನ್​, ಜೇಕ್​ ಫ್ರೆಸರ್​ ಮೆಕ್​ಗುರ್ಕ್​, ಯಶ್​ ಧುಲ್​, ಲಲಿತ್​ ಯಾದವ್​, ವಿಕಿ ಒಸ್ತ್​ವಾಲ್​, ಕುಲದೀಪ್​ ಯಾದವ್​, ಪ್ರವಿಣ್​ ದುಬೆ, ಅನ್ರಿಚ್​ ನೋಕಿಯಾ, ಖಲೀಲ್​ ಅಹ್ಮದ್​, ಇಶಾಂತ್​ ಶರ್ಮ, ಮುಕೇಶ್​ ಕುಮಾರ್​, ಅಭಿಷೇಕ್​ ಪೊರೆಲ್​, ಕುಮಾರ್​ ಕುಶಾಗ್ರ, ರಿಕಿ ಭುಯ್​, ಸ್ವಸ್ತಿಕ್​ ಚಿಕ್ರ, ರಸಿಕ್​ ಸಲಮ್​, ಸುಮಿತ್​ ಕುಮಾರ್​.