ಕ್ರೀಡೆ

ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

ಹೈದಾರಾಬಾದ್​: ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿರುವ ಒಟ್ಟು 8 ಪಂದ್ಯಗಳ ಪೈಕಿ ಏಳು ಮ್ಯಾಚ್​ಗಳನ್ನು ಸೋತ್ತಿದ್ದು, ಒಂದೇ ಒಂದು ಪಂದ್ಯವನ್ನು ಮಾತ್ರ ತವರಿನಲ್ಲಿ ಗೆದ್ದಿತು. ಇಡೀ ಟೂರ್ನಿಯ ಪೂರ ಸತತ ಸೋಲು ಹಾಗೂ ಉತ್ತಮ ಪ್ರದರ್ಶನ ನೀಡದೆ ಇರುವುದು ಆರ್​ಸಿಬಿಯ ಲಾಯಲ್ ಫ್ಯಾನ್ಸ್​ಗಳನ್ನು ಇಂದಿಗೂ ಬೆಂಬಿಡದೆ ಕಾಡುತ್ತಿರುವ ಅತೀವ ಬೇಸರ.

16 ವರ್ಷಗಳಿಂದ ಐಪಿಎಲ್ ಕಪ್ ನೋಡದ ಆರ್​ಸಿಬಿ, ಈ ಬಾರಿಯಾದರೂ ಹೊಸ ಅಧ್ಯಾಯ ಎಂದು ನುಡಿದಂತೆ ನಡೆಯುತ್ತಾರೆ, ಟ್ರೋಫಿ ಗೆದ್ದು, ನಮ್ಮನ್ನು ಹೆಮ್ಮೆ ಪಡಿಸುತ್ತಾರೆ ಎಂದೆಲ್ಲಾ ಅಭಿಮಾನಿಗಳು ಈ ಸೀಸನ್​ ಆರಂಭಕ್ಕೂ ಮುನ್ನ ಅಪಾರ ಕನಸು ಕಂಡಿದ್ದರು. ಆದರೆ, ಇದೀಗ ಅದೆಲ್ಲವೂ ಭಗ್ನಗೊಂಡಿದೆ ಎಂಬುದನ್ನು ಅರಿತು ಮುಂದೆ ಹೋಗುವಷ್ಟರಲ್ಲೇ ತಂಡದ ಬ್ಯಾಟ್ಸ್​ಮನ್​ ವಿಲ್ ಜ್ಯಾಕ್ಸ್​ ಇಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯಕ್ಕೂ ಮೊದಲು ಶಾಕಿಂಗ್ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಇಂದು ಹೈದರಾಬಾದ್​ನಲ್ಲಿ ಎಸ್​ಆರ್​ಎಚ್ ಮತ್ತು ಆರ್​ಸಿಬಿ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಫಾಫ್ ಪಡೆ ಏನಾದರೂ ಪವಾಡದ ರೀತಿಯಲ್ಲಿ ಗೆಲುವು ದಾಖಲಿಸಿದರೆ, ಖಂಡಿತ ಪ್ಲೇ-ಆಫ್ ಕನಸು ಹಸಿರಾಗುತ್ತದೆ ಎಂದು ಆರ್​ಸಿಬಿ ಅಭಿಮಾನಿಗಳು ಆಶಿಸಿದ್ದಾರೆ. ಸದ್ಯ ಈ ವಿಚಾರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಭುಗಿಲೆದ್ದಿದ್ದು, ಇಂದು ಆರ್​ಸಿಬಿಗೆ ಗೆಲುವು ಅನಿವಾರ್ಯ ಎಂಬಂತಾಗಿದೆ.

ಇನ್ನು ಪ್ಲೇ-ಆಫ್ ಬಗ್ಗೆ ಭವಿಷ್ಯ ನುಡಿದ ವಿಲ್ ಜ್ಯಾಕ್ಸ್​, "ಹೊಸ ಬಾಲ್​ನೊಂದಿಗೆ ವಿಕೆಟ್ ತೆಗೆಯಲು ಸತತ ಪ್ರಯತ್ನಗಳನ್ನು ಮಾಡಿದ್ದೇವೆ. ಖಂಡಿತವಾಗಿ ಅದೆಲ್ಲವೂ ನಮಗೆ ಫಲಿಸಲಿದೆ. ನಿಮಗೆ ಗೊತ್ತಿಲ್ಲ, ನಾವು ಮುಂದಿನ ಪಂದ್ಯ ಗೆದ್ದರೆ, ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ. ಎಸ್​ಆರ್​ಎಚ್​ ತಂಡದಲ್ಲಿ ಅತೀಯಾದ ವಿಶ್ವಾಸವಿದೆ. ಎಲ್ಲಾ ಬ್ಯಾಟ್ಸ್​ಮನ್​ಗಳು ಉತ್ತಮ ಫಾರ್ಮ್​ನಲ್ಲಿದ್ದಾರೆ. ಈಗ ತಮ್ಮ ತವರಲ್ಲೇ ಆಡ್ತಿದ್ದಾರೆ, ಇದು ಖಂಡಿತವಾಗಿಯೂ ಚಾಲೆಂಜಿಂಗ್ ಆಗಿದೆ. ಬೃಹತ್ ರನ್​ ಗಳಿಸಿದಂತೆ ಅವರನ್ನು ಕಟ್ಟಿಹಾಕಿದ್ರೆ, ಗೆಲುವು ನಮ್ಮದೇ" ಎಂದಿದ್ದಾರೆ,(ಏಜೆನ್ಸೀಸ್).