ಕೋಲ್ಕತ: ಟೀಮ್ ಇಂಡಿಯಾದ ಅವಳಿ ವಿಶ್ವಕಪ್ ವಿಜೇತ ಮಾಜಿ ಎಡಗೈ ಆರಂಭಿಕ ಗೌತಮ್ ಗಂಭೀರ್ ಕೆಕೆಆರ್ ತಂಡದ ನಾಯಕರಾಗಿ 2 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಹೀಗಾಗಿ ಅವರು ಈ ಬಾರಿ ಮೆಂಟರ್ ಆಗಿ 7 ವರ್ಷಗಳ ಬಳಿಕ ತಂಡಕ್ಕೆ ಮರಳಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಜತೆಗೆ ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ಗೆ ಐಪಿಎಲ್ ಇತಿಹಾಸದಲ್ಲೇ ಸರ್ವಾಧಿಕವೆನಿಸಿದ ಸರಿಸುಮಾರು 25 ಕೋಟಿ ರೂ. ಸಂಭಾವನೆ ನೀಡುತ್ತಿರುವುದರಿಂದ ತಂಡದ ಲೆಕ್ಕಾಚಾರವೂ ಕುತೂಹಲಕಾರಿಯಾಗಿದೆ.
ಇನ್ನು ಗಾಯದಿಂದಾಗಿ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ನಾಯಕರಾಗಿ ಮರಳಿದ್ದಾರೆ. ಉಳಿದಂತೆ ಕೆಕೆಆರ್ ತಂಡ ಕಳೆದ ಆವೃತ್ತಿಯಲ್ಲಿ ಆಡಿದ ಬಹುತೇಕ ಪ್ರಮುಖ ಆಟಗಾರರನ್ನೇ ಹೊಂದಿದೆ. ಈ ಪೈಕಿ ರಿಂಕು ಸಿಂಗ್ ಕಳೆದ ವರ್ಷದ ಫಿನಿಷರ್ ಪಾತ್ರದ ಯಶಸ್ಸಿನಿಂದ ಈಗ ಟೀಮ್ ಇಂಡಿಯಾ ಆಟಗಾರರೂ ಆಗಿದ್ದು, ಇನ್ನಷ್ಟು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.
ತಂಡ: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಮನೀಷ್ ಪಾಂಡೆ, ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ರಹಮಾನುಲ್ಲಾ ಗುರ್ಬಜ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ವೈಭವ್ ಅರೋರಾ, ಅನುಕೂಲ್ ರಾಯ್, ಶ್ರೀಕರ್ ಭರತ್, ದುಶ್ಮಂತ ಚಮೀರ, ಅಂಗಕ್ರಿಶ್ ರುವಂಶಿ, ರಮಣ್ ದೀಪ್ ಸಿಂಗ್, ಶೆಾರ್ನ್ ರುದರ್ಫೋರ್ಡ್, ಮಿಚೆಲ್ ಸ್ಟಾರ್ಕ್, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮ, ಹರ್ಷಿತ್ ರಾಣಾ, ಸಕೀಬ್ ಹುಸೇನ್, ಮುಜೀಬ್ ಉರ್ ರೆಹಮಾನ್.