ಕ್ರೀಡೆ

IPL 2024: ಹೊಸ ಸಾರಥ್ಯದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವುದೇ ಚೆನ್ನೈ ಸೂಪರ್​ಕಿಂಗ್ಸ್​?

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ಎಂಎಸ್​ ಧೋನಿ ಮತ್ತೊಂದು ಅವಧಿಗೆ ಲಭ್ಯವಾಗಿದ್ದರೂ, ಈ ಬಾರಿ ಅವರು ನಾಯಕನಲ್ಲ, ಬದಲಾಗಿ ಸಾಮಾನ್ಯ ಆಟಗಾರ ಮತ್ತು ವಿಕೆಟ್​ ಕೀಪರ್ ಆಗಿ ಆಡಲಿದ್ದಾರೆ. 42 ವರ್ಷದ ಧೋನಿ ತಂಡದ ಭವಿಷ್ಯದ ದೃಷ್ಟಿಯಿಂದ ನಾಯಕತ್ವ ತ್ಯಜಿಸಿದ್ದು, ಯುವ ಆರಂಭಿಕ ಋತುರಾಜ್​ ಗಾಯಕ್ವಾಡ್​ ಹೊಸ ನಾಯಕನಾಗಿ ತಂಡಕ್ಕೆ ಪ್ರಶಸ್ತಿ ಉಳಿಸಿಕೊಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಸಲವೂ ಅನುಭವಿಗಳು ಮತ್ತು ಸ್ಟಾರ್​ ಆಲ್ರೌಂಡರ್​ಗಳೇ ಸಿಎಸ್​ಕೆ ತಂಡದ ಪ್ರಮುಖ ಶಕ್ತಿ. ಡೆವೊನ್​ ಕಾನ್​ವೇ, ಶಿವಂ ದುಬೆ, ಮಥೀಷ ಪಥಿರಣ ಅವರಂಥ ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಂಡಕ್ಕೆ ಆರಂಭಿಕ ಹಂತದಲ್ಲಿ ಹಿನ್ನಡೆ ತರಬಹುದು. ಅಂಬಟಿ ರಾಯುಡು ಕಳೆದ ವರ್ಷ ಪ್ರಶಸ್ತಿ ಗೆದ್ದ ಬಳಿಕ ನಿವೃತ್ತಿ ಹೊಂದಿರುವ ಕಾರಣ ಮಧ್ಯಮ ಕ್ರಮಾಂಕದಲ್ಲಿ ಅವರ ಸ್ಥಾನ ತುಂಬಬಲ್ಲ ಅಟಗಾರನನ್ನು ಸಿಎಸ್​ಕೆ ಸಿದ್ಧಪಡಿಸಬೇಕಿದೆ.

ತಂಡ: ಎಂಎಸ್​ ಧೋನಿ(ನಾಯಕ), ಡೆವೊನ್​ ಕಾನ್​ವೇ, ತುಷಾರ್​ ದೇಶಪಾಂಡೆ, ಶಿವಂ ದುಬೆ, ಋತುರಾಜ್​ ಗಾಯಕ್ವಾಡ್​, ಮೊಯಿನ್​ ಅಲಿ, ದೀಪಕ್​ ಚಹರ್​, ರಾಜ್ಯವರ್ಧನ್​ ಹಂಗರ್ಗೆಕರ್​, ರವೀಂದ್ರ ಜಡೇಜಾ, ರಚಿನ್​ ರವೀಂದ್ರ, ಡೆರಿಲ್​ ಮಿಚೆಲ್​, ಅಜಯ್​ ಮಂಡಲ್​, ಮಥೀಷ ಪಥಿರಣ, ಅಜಿಂಕ್ಯ ರಹಾನೆ, ಸೈಕ್​ ರಶೀದ್​, ಸಮೀರ್​ ರಿಜ್ವಿ, ಮಿಚೆಲ್​ ಸ್ಯಾಂಟ್ನರ್​, ಸಿಮ್ರಾನ್​ಜೀತ್​ ಸಿಂಗ್​, ನಿಶಾಂತ್​ ಸಂಧು, ಪ್ರಶಾಂತ್​ ಸೋಲಂಕಿ,ಮಹೀಶ್​ ತೀಣ, ಶಾರ್ದೂಲ್​ ಠಾಕೂರ್​, ಮುಕೇಶ್​ ಚೌಧರಿ, ಮುಸ್ತಾಫಿಜುರ್​ ರೆಹಮಾನ್​, ಎ. ಅವಿನಾಶ್​ ರಾವ್​.