ಮುಂಬೈ: ಕಳೆದ ವರ್ಗಾವಣೆ ಅವಧಿಯ ಬಳಿಕ ಭಾರಿ ಸುದ್ದಿಯಲ್ಲಿರುವ ತಂಡ ಮುಂಬೈ ಇಂಡಿಯನ್ಸ್. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತವರಿನ ಗುಜರಾತ್ ತಂಡವನ್ನು ತ್ಯಜಿಸಿ ತನ್ನ ವೃತ್ತೀಜಿವನಕ್ಕೆ ಜೀವತುಂಬಿದ ತಂಡಕ್ಕೆ 2 ವರ್ಷಗಳ ಬಳಿಕ ಮರಳಿದಾಗ ಮುಂಬೈ ಅಭಿಮಾನಿಗಳು ಸಂಭ್ರಮಿಸಿದರು. ಆದರೆ, ಬಳಿಕ ಮುಂಬೈ ನಾಯಕತ್ವವನ್ನು ರೋಹಿತ್ ಶರ್ಮರಿಂದ ಕಸಿದು ಹಾರ್ದಿಕ್ಗೆ ನೀಡಿದಾಗ ಅಭಿಮಾನಿಗಳು ಇಬ್ಬಾಗವಾದರು. ಜತೆಗೆ ತಂಡದಲ್ಲೂ ಇದು ಒಡಕು ಮೂಡಿಸುವಂಥ ವಾತಾವರಣ ನಿರ್ಮಾಣವಾಯಿತು.
ನಂತರದಲ್ಲಿ ಫ್ರಾಂಚೈಸಿ ಎಷ್ಟೇ ತ್ಯಾಪೆ ಹಚ್ಚಿದರೂ, ಅದರ ನಿಜವಾದ ಒಗ್ಗಟ್ಟು ಈ ಬಾರಿ ಮೈದಾನದಲ್ಲಿ ಪ್ರದರ್ಶನಗೊಳ್ಳಬೇಕಿದೆ. ಹಾರ್ದಿಕ್ಗಾಗಿ ಕ್ಯಾಮರಾನ್ ಗ್ರೀನ್ ಕೈಬಿಟ್ಟಿರುವ ಹೊರತಾಗಿ ತಂಡದಲ್ಲಿ ಬೇರಾವುದೇ ಪ್ರಮುಖ ಬದಲಾವಣೆ ಇಲ್ಲ. ಈ ಬಾರಿ ಬುಮ್ರಾ ಫಿಟ್ ಆಗಿರುವುದು ಬೌಲಿಂಗ್ಗೆ ಬಲ ತಂದಿದೆ.
ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಟಿಮ್ ಡೇವಿಡ್, ಡಿವಾಲ್ಡ್ ಬ್ರೇವಿಸ್, ತಿಲಕ್ ವರ್ಮ, ಇಶಾನ್ ಕಿಶನ್, ವಿಷ್ಣು ವಿನೋದ್, ನೇಹಲ್ ವಧೆರ, ಮೊಹಮದ್ ನಬಿ, ಶ್ರೇಯಸ್ ಗೋಪಾಲ್, ರೋಮಾರಿಯೋ ಶೆರ್ಡ್, ಅನ್ಶುಲ್ ಕಾಂಬೊಜ್, ನಮನ್ ಧೀರ್, ಅರ್ಜುನ್ ತೆಂಡುಲ್ಕರ್, ಶಮ್ಸ್ ಮುಲಾನಿ, ಗೆರಾಲ್ಡ್ ಕೋಟ್ಜೀ, ಪೀಯುಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಲೂಕ್ ವುಡ್, ಆಕಾಶ್ ಮಧ್ವಲ್, ದಿಲ್ಶಾನ್ ಮಧುಶಂಕ, ನುವಾನ್ ತುಷಾರ, ಶಿವಾಲಿಕ್ ಶರ್ಮ.