ಮೊಹಾಲಿ: ಮೊದಲ ಆವೃತ್ತಿಯಿಂದ ಕಣದಲ್ಲಿದ್ದರೂ, ಪ್ರಶಸ್ತಿ ಗೆಲ್ಲದ 3 ತಂಡಗಳಲ್ಲಿ ಒಂದಾಗಿರುವ ಪಂಜಾಬ್ ಕಿಂಗ್ಸ್ ಪ್ರತಿ ಬಾರಿ ಟೂರ್ನಿಯಲ್ಲಿ ಉತ್ತಮ ಆರಂಭದ ಬಳಿಕ ಲಯ ತಪ್ಪುವ ಚಾಳಿ ಹೊಂದಿದೆ. ಎಡಗೈ ಆರಂಭಿಕ ಶಿಖರ್ ಧವನ್ ನಾಯಕತ್ವದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದೆ. ಜತೆಗೆ ಕಳೆದ ಆವೃತ್ತಿಯ ಬಹುತೇಕ ಪ್ರಮುಖ ಆಟಗಾರರನ್ನು ಒಳಗೊಂಡಿದೆ. ಪಂಜಾಬ್ ಕಿಂಗ್ಸ್ ತಂಡ ತನ್ನ ತವರಿನ ತಾಣವನ್ನಾಗಿ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂ ಬದಲಿಗೆ ಮುಲ್ಲನ್ಪುರದ ಹೊಸ ಪಿಸಿಎ ಕ್ರೀಡಾಂಗಣವನ್ನು ಆಯ್ದುಕೊಂಡಿದೆ. ಇದು ತಂಡದ ಅದೃಷ್ಟ ಬದಲಾಯಿಸುವ ನಿರೀಕ್ಷೆಯೂ ಇದೆ.
ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್ಸ್ಟೋ ಈ ಬಾರಿ ಮರಳುತ್ತಿದ್ದಾರೆ. ಆದರೆ ಅವರ ಸದ್ಯದ ಫಾರ್ಮ್ ಮಾತ್ರ ಕೆಟ್ಟದಾಗಿದೆ. ಆಲ್ರೌಂಡರ್ಗಳಾದ ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ಸ್ಟೋನ್ ತಂಡಕ್ಕೆ ಸಮತೋಲನ ತರಲಿದ್ದಾರೆ. ದೊಡ್ಡ ಮಟ್ಟದ ನಿರೀಕ್ಷೆ ಇಲ್ಲದಿರುವುದು ತಂಡಕ್ಕೆ ಈ ಸಲ ವರವೂ ಆಗಬಹುದು.
ತಂಡ: ಶಿಖರ್ ಧವನ್(ನಾಯಕ), ಪ್ರಭ್ಸಿಮ್ರನ್ ಸಿಂಗ್, ಜಿತೇಶ್ ಶರ್ಮ, ಸಿಕಂದರ್ ರಾಜಾ, ನಾಥನ್ ಎಲ್ಲಿಸ್, ರಿಷಿ ಧವನ್, ಲಿಯಾಮ್ ಲಿವಿಂಗ್ಸ್ಟೋನ್, ಅಥರ್ವ ತೈಡೆ, ಅರ್ಷದೀಪ್ ಸಿಂಗ್, ಸ್ಯಾಮ್ ಕರನ್, ಕಗಿಸೊ ರಬಾಡ, ಹರ್ಪ್ರೀತ್ ಬ್ರಾರ್, ರಾಹುಲ್ ಚಹರ್, ಅಶುತೋಷ್ ಶರ್ಮ, ಹರ್ಪ್ರೀತ್ ಭಾಟಿಯಾ, ಹರ್ಷಲ್ ಪಟೇಲ್, ಜಾನಿ ಬೇರ್ಸ್ಟೋ, ಕ್ರಿಸ್ ವೋಕ್ಸ್, ಶಶಾಂಕ್ ಸಿಂಗ್, ವಿದ್ವತ್ ಕಾವೇರಪ್ಪ, ತನಯ್ ತ್ಯಾಗರಾಜನ್, ವಿಶ್ವನಾಥ್ ಪ್ರತಾಪ್ ಸಿಂಗ್, ಪ್ರಿನ್ಸ್ ಚೌಧರಿ, ಶಿವಂ ಸಿಂಗ್, ರಿಲೀ ರೋಸ್ಸೋ.