ಕ್ರೀಡೆ

RCB ತಂಡ ಕಪ್​ ಗೆಲ್ಲುವಲ್ಲಿ ಈ ಬಾರಿ ಮುಖ್ಯಪಾತ್ರ ವಹಿಸಲಿದ್ದಾರೆಯೇ ಆಂಡಿ ಫ್ಲವರ್​?; ಇವರ ವೇತನ ತಿಳಿದರೆ ಶಾಕ್​!

RCB : ಈ ಬಾರಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL 2025)ನ ಸೀಸನ್​ 18 ಆರಂಭವಾಗಿದೆ. ಇನ್ನು ಈ ಬಾರಿಯ ರಾಯಲ್​ ಚಾಲೆಂಚರ್ಸ್ ಬೆಂಗಳೂರು(RCB) ತಂಡದ ಮುಖ್ಯ ಕೋಚ್​ ಆಗಿ ಆಂಡಿ ಫ್ಲವರ್(Andy Flower)​ ಅನ್ನು ಉಳಿಸಿಕೊಂಡಿದೆ. ಆಂಡಿ ಫ್ಲವರ್​ ಒಬ್ಬ ಆನುಭವಿ ತರಬೇತಿದಾರ. ಅವರು ಹಲವಾರು ಅಂತರಾಷ್ಟ್ರೀಯ ಮತ್ತು ಲೀಗ್​ನ ಪ್ರಾಂಚೈಸಿ ತಂಡಗಳನ್ನು ಯಶಸ್ವಿಯಾಗಿ ಮುನ್ನೇಡಿಸಿದ್ದಾರೆ. ಹೀಗಾಗಿ, ಆರ್​ಸಿಬಿ ಮಖ್ಯ ಕೋಚ್​ ಆಗಿ ಇದೀಗ ಆಂಡಿ ಫ್ಲವರ್​ ಪಡೆಯುತ್ತಿರುವ ವೇತನ ಎಷ್ಟು ಗೊತ್ತೆ? ಇಲ್ಲಿದೆ ಮಾಹಿತಿ..

ಆಂಡಿ ಫ್ಲವರ್​ ವೇತನವೆಷ್ಟು..?

ವರದಿಗಳ ಪ್ರಕಾರ, ಆಂಡಿ ಫ್ಲವರ್ ಆರ್‌ಸಿಬಿಯಲ್ಲಿ ಮುಖ್ಯ ಕೋಚ್ ಪಾತ್ರಕ್ಕಾಗಿ ಪ್ರತಿ ಆವೃತ್ತಿಗೆ ಸುಮಾರು 4-5 ಕೋಟಿ ರೂ.ಗಳ ಸಂಭಾವನೆ ಪಡೆಯುತ್ತಿದ್ದಾರೆ. ಅವರ ಹಿಂದಿನ ಅನುಭವ ಮತ್ತು ತಂಡಕ್ಕೆ ಉತ್ತಮ ಕಾರ್ಯತಂತ್ರವನ್ನು ಒದಗಿಸುವ ಸಾಮರ್ಥ್ಯವನ್ನು ಪರಿಗಣಿಸಿ ಈ ಮೊತ್ತವನ್ನು ನಿರ್ಧರಿಸಲಾಗಿದೆ. ಐಪಿಎಲ್‌ನಲ್ಲಿ ಮುಖ್ಯ ತರಬೇತುದಾರರ ವೇತನವನ್ನು ಫ್ರಾಂಚೈಸಿಯ ನೀತಿ ಮತ್ತು ತರಬೇತುದಾರರ ಅನುಭವದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಆಂಡಿ ಫ್ಲವರ್ ಯಾರು?

ಆಂಡಿ ಫ್ಲವರ್ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ. ಅವರು ವಿಶ್ವದ ಅತ್ಯುತ್ತಮ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆಂಡಿ ಫ್ಲವರ್ ಸಾಧನೆ?

1. ಇಂಗ್ಲೆಂಡ್​ ತಂಡದ ತರಬೇತುದಾರ(2009-2014): ಈ ಅವಧಿಯಲ್ಲಿ ಟೀಮ್​ ಇಂಗ್ಲೆಂಡ್​ ಆಶಿಶ್​ ಕಪ್​ ಗೆಲ್ಲುವ ಮೂಲಕ ಟೆಸ್ಟ್​ನಲ್ಲಿ ನಂ.1 ತಂಡವಾಯಿತು.

2.ಪಿಎಸ್​ಎಲ್​ ಮತ್ತು ಟಿ-20 ತಂಡಗಳ ಅನುಭವ: ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​)ಮತ್ತು ಇತರ ಹಲವು ಟಿ-20 ಲೀಗ್​ಗಳಲ್ಲಿ ತರಬೇತುದಾರರಾಗಿ ಅನುಭವ ಹೊಂದಿದ್ದಾರೆ.

3.LSG ತಂಡ ಮುಖ್ಯ ತರಬೇತುದಾರ(2022-23): ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸತತವಾಗಿ ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್‌ಸಿಬಿ ಇಲ್ಲಿಯವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ, ಮತ್ತು ಆಂಡಿ ಫ್ಲವರ್ ನಾಯಕತ್ವದಲ್ಲಿ ತಂಡವು ಈ ಬಾರಿ ಇತಿಹಾಸ ಸೃಷ್ಟಿಸಬಹುದು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ತರಬೇತಿ ನೀಡುವಲ್ಲಿ ಅಪಾರ ಅನುಭವ ಹೊಂದಿದ್ದು, ಇದು ಆರ್‌ಸಿಬಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.(ಏಜೆನ್ಸೀಸ್)