ಕ್ರೀಡೆ

RCB ಉತ್ತಮ ಆಟಗಾರರನ್ನು ಏಕೆ ಕೈಬಿಡುತ್ತದೆ.. ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಟೀಕೆ!

ಬೆಂಗಳೂರು:ಸೌದಿ ಆರೇಬಿಯಾದ ಜೆದ್ದಾದಲ್ಲಿ ಇತ್ತೀಚಿಗೆ ನಡೆದ IPL2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ RCB ತಂಡ ಉತ್ತಮ ಆಟಗಾರರನ್ನು ಏಕೆ ಆಯ್ಕೆ ಮಾಡುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಟೀಕಿಸಿದ್ದಾರೆ.

ಆರ್​ಸಿಬಿ ಪ್ರಾಂಚೈಸಿಯು ತಮ್ಮ ಮಾಜಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳದಿರುವುದಕ್ಕೆ ಬೇಸರ ಹೊರ ಹಾಕಿದ್ದಾರೆ. '' ಕಳೆದ ವರ್ಷ ಆರ್​ಸಿಬಿಯ ಎರಡು ಪಂದ್ಯಗಳು ನನಗೆ ನೆನಪಿವೆ. ಅದು, ಸನ್​ ರೈಸರ್ಸ್​ ಮತ್ತು ಗುಜರಾತ್​ ಟೈಟನ್ಸ್​ ವಿರುದ್ಧ ವಿಲ್​ ಜ್ಯಾಕ್ಸ್​​ 40 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆದ್ದಿದೆ. ವಿಲ್​ ಜ್ಯಾಕ್ಸ್​ ಅಮೋಘ ಆಟದಿಂದ RCB ಪಾಯಿಂಟ್​ ಟೇಬಲ್​ರಲ್ಲಿ ನಾಲ್ಕರಲ್ಲಿ ಬಂದಿತ್ತು. ಆದರೆ, ಪ್ರಾಂಚೈಸಿ ಇಂತಹ ಆಟಗಾರರನ್ನು ಯಾಕೆ ಕೈಬಿಡುತ್ತಿದೆ ಎಂದು ಆರ್ಥವಾಗುತ್ತಿಲ್ಲ. ಇದರಿಂದ ಪ್ರಾಂಚೈಸಿಯ ಆಯ್ಕೆ ಸರಿಯಾಗಿಲ್ಲ ಎನ್ನಬಹುದು ಎಂದು ಬೇಸರ ಹೊರ ಹಾಕಿದ್ದಾರೆ.

ರಿಷಬ್​ ಪಂತ್​ ಮತ್ತು ಕೆ.ಎಲ್​.ರಾಹುಲ್​ ಅವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದ್ದರೂ ಕೈಬಿಟ್ಟಿದೆ. ಆರ್​ಸಿಬಿ ಹರಾಜು ಯೋಜನೆ ಕೆಟ್ಟದಾಗಿದೆ ಎಂದು ಆರ್​ಸಿಬಿ ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಹೇಳಿದ್ದಾರೆ.

RCB IPL 2025 ತಂಡ : ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್ (8.75 ಕೋಟಿ ರೂ.), ಫಿಲ್ ಸಾಲ್ಟ್ (11.50 ಕೋಟಿ ರೂ.), ಜಿತೇಶ್ ಶರ್ಮಾ (11 ಕೋಟಿ ರೂ.), ಜೋಶ್ ಹ್ಯಾಜಲ್‌ವುಡ್ (50 ಕೋಟಿ ರೂ.), 12. ರಾಸಿಖ್ ದಾರ್ (6 ಕೋಟಿ ರೂ.), ಸುಯಶ್ ಶರ್ಮಾ (2.60 ಕೋಟಿ ರೂ.), ಕೃನಾಲ್ ಪಾಂಡ್ಯ (5.75 ಕೋಟಿ ರೂ.), ಭುವನೇಶ್ವರ್ ಕುಮಾರ್ (10.75 ಕೋಟಿ ರೂ.), ಸ್ವಪ್ನಿಲ್ ಸಿಂಗ್ (50 ಲಕ್ಷ ರೂ.), ಟಿಮ್ ಡೇವಿಡ್ (3 ಕೋಟಿ ರೂ.), ರೊಮಾರಿಯೊ ಶೆಫರ್ಡ್ (1.50 ಕೋಟಿ ರೂ.),ನುವಾನ್ ತುಷಾರ (1.60 ಕೋಟಿ ರೂ.), ಮನೋಜ್ ಭಾಂಡಗೆ (30 ಲಕ್ಷ ರೂ.), ಜೇಕಬ್ ಬೆಥೆಲ್ (2.60 ಕೋಟಿ ರೂ.), ದೇವದತ್ತ್ ಪಡಿಕ್ಕಲ್ (2 ಕೋಟಿ ರೂ.), ಸ್ವಸ್ತಿಕ್ ಚಿಕಾರಾ (30 ಲಕ್ಷ ರೂ.), ಲುಂಗಿ ಎನ್‌ಗಿಡಿ (1 ಕೋಟಿ ರೂ.), ಅಭಿನಂದನ್ ಸಿಂಗ್ (ರೂ. 30 ಲಕ್ಷ), ಮೋಹಿತ್ ರಥಿ (30 ಲಕ್ಷ ರೂ.). (ಏಜೆನ್ಸೀಸ್​).