Seema Haider : ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿರುವ ಆ ಕ್ಷಣ ಸಮೀಪಿಸಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಮತ್ತು ಪಾಕಿಸ್ತಾನ, ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೆಲುವಿಗಾಗಿ ಹೋರಾಡಲಿವೆ.
ಅಂದಹಾಗೆ ಪಾಕಿಸ್ತಾನ ವಿರುದ್ಧದ ಪಂದ್ಯವೆಂದರೆ ಭಾರತಕ್ಕೆ ಒಂದು ಪ್ರತಿಷ್ಠೆಯ ಪಂದ್ಯ. ಇದನ್ನು ಕೇವಲ ಒಂದು ಪಂದ್ಯವನ್ನಾಗಿ ನೋಡುವುದಿಲ್ಲ. ಈ ಪಂದ್ಯದ ಮೇಲೆ ಸಾಕಷ್ಟು ಭಾವನೆ ಇರುತ್ತದೆ. ಈ ಪಂದ್ಯದಲ್ಲಿ ಗೆದ್ದರೆ ಇಡೀ ಭಾರತವೇ ಸಂಭ್ರಮಿಸುತ್ತದೆ. ಒಂದು ವೇಳೆ ಸೋತರೆ ಇಡೀ ಭಾರತವೇ ನೊಂದುಕೊಳ್ಳುತ್ತದೆ. ಹೀಗಾಗಿ ಭಾರತೀಯ ಆಟಗಾರರಿಗೆ ಪಾಕ್ ವಿರುದ್ಧದ ಪಂದ್ಯ ಅಂದಾಗ ಜವಾಬ್ದಾರಿಯ ಜತೆಗೆ ತುಸು ಒತ್ತಡವೂ ಹೆಚ್ಚಾಗುತ್ತದೆ. ಏಕೆಂದರೆ, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇತ್ತ ಟೀಮ್ ಇಂಡಿಯಾ ಅಭಿಮಾನಿಗಳು ಕೂಡ ತಮ್ಮ ತಂಡ ಗೆಲ್ಲಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅತ್ತ ಪಾಕ್ ಅಭಿಮಾನಿಗಳೂ ಕೂಡ ತಮ್ಮ ತಂಡ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ, ಆನ್ಲೈನ್ನಲ್ಲಿ ಲವ್ ಮಾಡಿ, ತನ್ನ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ ಕೂಡ ಇಂಡೋ-ಪಾಕ್ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಸೀಮಾ ಮೂಲತಃ ಪಾಕಿಸ್ತಾನಿಯಾಗಿದ್ದು, ಸದ್ಯ ಉತ್ತರ ಪ್ರದೇಶ ಮೂಲದ ಸಚಿನ್ ಮೀನಾರನ್ನು ವರಿಸಿದ್ದಾರೆ. ಇಬ್ಬರಿಗೂ ಆನ್ಲೈನ್ನಲ್ಲಿ ಪಬ್ಜಿ ಆಡುವಾಗ ಲವ್ ಆಯಿತು. ಬಳಿಕ ಸೀಮಾ, ಸಚಿನ್ನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ನೇಪಾಳಕ್ಕೆ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ಭಾರತವನ್ನು ಪ್ರವೇಶಿಸಿ, ಸಚಿನ್ನನ್ನು ಭೇಟಿಯಾದಳು. ಬರುವಾಗ ಆಕೆ ತಾನೊಬ್ಬಳೆ ಬರಲಿಲ್ಲ. ತನ್ನೊಂದಿಗೆ ನಾಲ್ವರು ಮಕ್ಕಳನ್ನು ಸಹ ಕರೆತಂದಿದ್ದಾಳೆ. ಇದೀಗ ಮತ್ತೊಂದು ಮಗುವಿಗೆ ಜನ್ಮ ಕೊಡಲಿದ್ದಾಳೆ. ಸದ್ಯ ಭಾರತೀಯಳಾಗಿ ಭಾರತದಲ್ಲಿ ನೆಲೆಸಿದ್ದು, ಇಂದು ನಡೆಯಲಿರುವ ಇಂಡೋ-ಪಾಕ್ ಪಂದ್ಯಕ್ಕೂ ಮುನ್ನು ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾಳೆ.
ಟೀಮ್ ಇಂಡಿಯಾಗೆ ಶುಭವಾಗಲಿ. ಭಾರತ ತಂಡ ಎಂದಿನಂತೆ ಅದ್ಭುತ ಪ್ರದರ್ಶನ ನೀಡಲಿದೆ ಎಂದು ಸೀಮಾ ಹೇಳಿದ್ದಾರೆ. ಅಲ್ಲದೆ, ಇಂಡೋ-ಪಾಕ್ ಪಂದ್ಯವನ್ನು ವೀಕ್ಷಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಈ ಪಂದ್ಯವನ್ನು ನಮ್ಮ ಭಾರತ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸೀಮಾ ಹೇಳಿದರು.
ಈ ಪಂದ್ಯವನ್ನು ಭಾರತ ಗೆದ್ದರೆ, ಅದು ದೇಶವಾಸಿಗಳಿಗೆ ಹೆಮ್ಮೆಯ ವಿಷಯವಾಗುತ್ತದೆ ಮತ್ತು ಎಲ್ಲರೂ ಒಟ್ಟಾಗಿ ಆಚರಿಸುತ್ತೇವೆ. ಇಂದು ನನ್ನ ಮಗಳು ಪಾರಿಯ ಹುಟ್ಟುಹಬ್ಬ ಮತ್ತು ಭಾರತ ಗೆದ್ದರೆ, ಇಡೀ ಕುಟುಂಬವು ಎರಡೂ ಆಚರಣೆಗಳನ್ನು ಬಹಳ ಸಂತೋಷದಿಂದ ಆಚರಿಸುತ್ತದೆ ಎಂದು ಸೀಮಾ ಹೇಳಿದರು.
ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಪಂದ್ಯದ ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಿದ್ದರೂ ಭದ್ರತಾ ದೃಷ್ಟಿಯಿಂದ ಭಾರತ ಪಾಕ್ಗೆ ಪ್ರಯಾಣಿಸಿಲ್ಲ. ತಲ್ಲ ಎಲ್ಲ ಪಂದ್ಯಗಳನ್ನು ಭಾರತ ದುಬೈನಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ದುಬೈನಲ್ಲಿದ್ದು, ಆತಿಥೇಯ ರಾಷ್ಟ್ರವಾಗಿದ್ದರೂ ಪಾಕಿಸ್ತಾನ ದುಬೈಗೆ ಪ್ರಯಾಣ ಬೆಳೆಸಿದೆ. (ಏಜೆನ್ಸೀಸ್)