ತರೌಬ (ಟ್ರಿನಿಡಾಡ್): ವೆಸ್ಟ್ ಇಂಡೀಸ್ ತಂಡ ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್ಗೆ ಪೂರ್ವಭಾವಿಯಾಗಿ ಹಾಲಿ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 3&2ರಿಂದ ಸರಣಿ ಗೆದ್ದು ಭರ್ಜರಿ ಸಿದ್ಧತೆ ನಡೆಸಿದೆ. ಗುರುವಾರ ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವಿಂಡೀಸ್, ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಜಯಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್, 19.3 ಓವರ್ಗಳಲ್ಲಿ 132 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ವಿಂಡೀಸ್, 19.2 ಓವರ್ಗಳಲ್ಲಿ 6 ವಿಕೆಟ್ಗೆ 133 ರನ್ ಪೇರಿಸಿ ಜಯಿಸಿತು. ಕೊನೇ ಓವರ್ನಲ್ಲಿ 9 ರನ್ ಬೇಕಿದ್ದಾಗ ಕ್ರಿಸ್ ವೋಕ್ಸ್ ಎಸೆದ ಮೊದಲ ಎಸೆತದಲ್ಲಿ ಜೇಸನ್ ಹೋಲ್ಡರ್ 3 ರನ್ ಕಸಿದರೆ, 2ನೇ ಎಸೆತದಲ್ಲಿ ಶೈ ಹೋಪ್ ಸಿಕ್ಸರ್ ಸಿಡಿಸಿ ಗೆಲ್ಲಿಸಿದರು.
ಇಂಗ್ಲೆಂಡ್: 19.3 ಓವರ್ಗಳಲ್ಲಿ 132 (ಸಾಲ್ಟ್ 38, ಬಟ್ಲರ್ 11, ಲಿವಿಂಗ್ಸ್ಟೋನ್ 28, ಬ್ರೂಕ್ 7, ಮೊಯಿನ್ ಅಲಿ 23, ಸ್ಯಾಮ್ ಕರನ್ 12, ಮೋತಿ 24ಕ್ಕೆ 3, ಹೋಲ್ಡರ್ 24ಕ್ಕೆ 2, ಹೊಸೈನ್ 20ಕ್ಕೆ 2, ರಸೆಲ್ 25ಕ್ಕೆ 2). ವೆಸ್ಟ್ ಇಂಡೀಸ್: 19.2 ಓವರ್ಗಳಲ್ಲಿ 6 ವಿಕೆಟ್ಗೆ 133 (ಕಿಂಗ್ 3, ಚಾರ್ಲ್ಸ್ 27, ಪೂರನ್ 10, ಶೈ ಹೋಪ್ 43*, ರುದರ್ೋರ್ಡ್ 30, ಟಾಪ್ಲೆ 17ಕ್ಕೆ 2, ರಶೀದ್ 21ಕ್ಕೆ 2). ಪಂದ್ಯಶ್ರೇಷ್ಠ: ಗುಡಾಕೇಶ್ ಮೋತಿ, ಸರಣಿಶ್ರೇಷ್ಠ: ಫಿಲ್ ಸಾಲ್ಟ್.