ಕ್ರೀಡೆ

ಗಯಾನಾ ವಾರಿಯರ್ಸ್‌ ತಂಡವನ್ನು ಗೆಲ್ಲಿಸಿದ ಹೆಟ್ಮೆಯರ್

ಟರೌಬ (ಟ್ರಿನಿಡಾಡ್): ಎಡಗೈ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೆಯರ್ (56*ರನ್, 36 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಆಡಿದ 9ನೇ ಪಂದ್ಯದಲ್ಲಿ 5ನೇ ಗೆಲುವು ಒಲಿಸಿಕೊಂಡ ಗಯಾನಾ ತಂಡ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಜೌಕ್ಸ್ ತಂಡ 7 ವಿಕೆಟ್‌ಗೆ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ವಾರಿಯರ್ಸ್‌ ತಂಡ 13.5 ಓವರ್‌ಗಳಲ್ಲೇ 3 ವಿಕೆಟ್‌ಗೆ 110 ರನ್ ಗಳಿಸಿ ಜಯ ದಾಖಲಿಸಿತು. 8ನೇ ಪಂದ್ಯದಲ್ಲಿ 3ನೇ ಸೋಲು ಕಂಡ ಜೌಕ್ಸ್ ತಂಡ ಸೋಲಿನ ನಡುವೆಯೂ ಸೆಮೀಸ್ ರೇಸ್‌ನಲ್ಲಿ ಉಳಿದುಕೊಂಡಿದೆ.

ಸೇಂಟ್ ಲೂಸಿಯಾ ಜೌಕ್ಸ್: 7 ವಿಕೆಟ್‌ಗೆ 109 (ಕಾರ್ನ್‌ವಾಲ್ 21, ದ್ರಾನ್ 19, ನಬಿ 13, ಗ್ಲೆನ್ 23*, ನವೀನ್ ಉಲ್ ಹಕ್ 24ಕ್ಕೆ 2, ಕೀಮೊ ಪೌಲ್ 25ಕ್ಕೆ 2). ಗಯಾನಾ ಅಮೆಜಾನ್ ವಾರಿಯರ್ಸ್‌: 13.5 ಓವರ್‌ಗಳಲ್ಲಿ 3 ವಿಕೆಟ್‌ಗೆ 110 (ಶಿಮ್ರೋನ್ ಹೆಟ್ಮೆಯರ್ 56*, ಪೂರನ್ 10, ಹೇಮರಾಜ್ 26, ಕಗ್ಗೆಲಿನ್ 17ಕ್ಕೆ 1, ನಬಿ 23ಕ್ಕೆ 1). ಪಂದ್ಯಶ್ರೇಷ್ಠ: ಶಿಮ್ರೋನ್ ಹೆಟ್ಮೆಯರ್.