ಕ್ರೀಡೆ

ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್​ನಲ್ಲಿ ವಿಶ್ವನಾಥ್​ಗೆ ಚಿನ್ನದ ಪದಕ

ಹುಬ್ಬಳ್ಳಿ: ರಾಜ್ಯಮಟ್ಟದ ಸೀನಿಯರ್​ ಪವರ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ 93 ಕೆ.ಜಿ. ವಿಭಾಗದಲ್ಲಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.

ಹುಬ್ಬಳ್ಳಿ ಜಿಲ್ಲಾ ಪವರ್​ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪುರುಷರ 48ನೇ ಹಾಗೂ ಮಹಿಳೆಯರ 40ನೇ ಕರ್ನಾಟಕ ಸೀನಿಯರ್ ಪವರ್​​ಲಿಫ್ಟಿಂಗ್ ಸ್ಪರ್ಧೆ ಜೂ. 17 ಮತ್ತು 18ರಂದು ಹುಬ್ಬಳ್ಳಿಯ ರೈಲ್ವೇ ಸತಬಿದ್ದನ್ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಪವರ್​​ಲಿಫ್ಟರ್ಸ್​ ಇದರಲ್ಲಿ ಭಾಗಿಯಾಗಿದ್ದರು.

ಇದರಲ್ಲಿ ಬೆಂಗಳೂರಿನ ಬಾಲಾರ್ಕ​ ಫಿಟ್​​ನೆಸ್​ನ ವಿಶ್ವನಾಥ್ ಭಾಸ್ಕರ್ ಗಾಣಿಗ ಸ್ಕ್ವಾಟ್​ 310 ಕೆ.ಜಿ, ಬೆಂಚ್​ಪ್ರೆಸ್​ 200 ಕೆ.ಜಿ. ಹಾಗೂ ಡೆಡ್​ಲಿಫ್ಟ್​ 325 ಕೆ.ಜಿ. ಸೇರಿ ಒಟ್ಟು 835 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರು ಪವರ್​​ಲಿಫ್ಟಿಂಗ್, ಬಾಲಾರ್ಕ ಫಿಟ್​​ನೆಸ್​ ಹಾಗೂ ಮೆರಿಡಿಯನ್ ಫಿಟ್​ನೆಸ್​ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ಬೆಂಗಳೂರು ಜಿಲ್ಲಾಮಟ್ಟದ ಪವರ್​​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಬಾಲಾರ್ಕ ಫಿಟ್​ನೆಸ್​ನ 30ಕ್ಕೂ ಹೆಚ್ಚು ಪವರ್​ಲಿಫ್ಟರ್​ಗಳು 40ಕ್ಕೂ ಅಧಿಕ ಪದಕಗಳನ್ನು ಜಯಿಸಿದ್ದಾರೆ.

ಸೀನಿಯರ್ ವಿಭಾಗದಲ್ಲಿ ದತ್ತಾತ್ರೇಯ, ಮಾಸ್ಟರ್ ಮಹಿಳಾ ವಿಭಾಗದಲ್ಲಿ ಪೂರ್ಣಿಮಾ ಹೊಸ್ಕೆರೆ, ಪುರುಷರ ವಿಭಾಗದಲ್ಲಿ ಶಶಿಧರ ರಾಜು ಬೆಸ್ಟ್​ ಲಿಫ್ಟರ್​ ಸಾಧನೆ ಮಾಡಿದರು. ಜೂನಿಯರ್ ವಿಭಾಗದಲ್ಲಿ ವಿಶಾಲ್, ಸಬ್ ಜೂನಿಯರ್ ಮಹಿಳಾ ವಿಭಾಗದಲ್ಲಿ ದೇವಿಕಾ ದೇಸಾಯಿ ಬೆಸ್ಟ್ ಲಿಫ್ಟರ್ ಪಡೆದಿರುತ್ತಾರೆ. ಇವರಿಗೆಲ್ಲ ವಿಶ್ವನಾಥ್ ಭಾಸ್ಕರ್ ತರಬೇತು ನೀಡಿದ್ದರು.